ಹುಳಿಯಾರು: ಪ್ರಧಾನಿ ನರೇಂದ್ರ ಮೋದಿ ಅವರ 72ನೇ ಜನ್ಮದಿನದ ಅಂಗವಾಗಿ ಭಾರತೀಯ ಜನತಾ ಆಯೋಜಿಸಲಾಗಿರುವ ಸೇವಾ ಪಾಕ್ಷಿಕದ ಪ್ರಯುಕ್ತ ಹುಳಿಯಾರಿನ ಬಿಜೆಪಿ ಮುಖಂಡರುಗಳು, ಕಾರ್ಯಕರ್ತರು ಮಾಜಿ ಶಾಸಕರು ಹಾಗೂ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ನಿಗಮದ ಅಧ್ಯಕ್ಷರು ಆದ ಕೆ. ಎಸ್. ಕಿರಣ್ ಕುಮಾರ್ ನೇತೃತ್ವದಲ್ಲಿ ಹುಳಿಯಾರಿನ ಕೆರೆ ಏರಿ ಮೇಲಿರುವ ಕೆಂಚಮ್ಮನ ತೋಪಿನ ಆವರಣದ ಸ್ವಚ್ಛತಾ ಕಾರ್ಯ ಕೈಗೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಕೆ.ಎಸ್.ಕಿರಣ್ ಕುಮಾರ್ ಪ್ರಧಾನಿಗಳ ಸ್ವಚ್ಛ ಭಾರತದ ಆಶಯ ಈಡೇರಿಸುವ ನಿಟ್ಟಿನಲ್ಲಿ ಮುಂದಿನ ಒಂದು ವಾರಗಳ ಕಾಲ ಪಕ್ಷದ ಕಾರ್ಯಕರ್ತರು ತಾಲೂಕಿನ ವಿವಿಧಡೆ ಸೇವಾ ಚಟುವಟಿಕೆಗಳಲ್ಲಿ ತೊಡಗಲಿದ್ದಾರೆ ಎಂದು ತಿಳಿಸಿದರು. ಇದೇ 21ರಂದು ರಕ್ತದಾನ ಶಿಬಿರ ಕೂಡ ನಡೆಯಲಿದೆ ಎಂದರು.ಭಾರತಮಾತೆಯ ಸೇವೆ ಮತ್ತು ಇನ್ನಷ್ಟು ಅಭಿವೃದ್ಧಿ ಕೈಗೊಳ್ಳಲು ಮೋದಿಜಿ ಅವರಿಗೆ ಇನ್ನೂ ಹೆಚ್ಚಿನ ಆರೋಗ್ಯ ಮತ್ತು ಆಯಸ್ಸು ಕರುಣಿಸಲಿ ಎಂದು ಕೋರಲಾಯಿತು.
ಈ ವೇಳೆ ತಿಮ್ಮರಾಯಪ್ಪ, ರಾಜಣ್ಣ ,ಹನುಮಂತರಾಯಪ್ಪ, ಮಲ್ಲೇಶಣ್ಣ, ಚಿಕ್ಕಣ್ಣ ,ಗುರುವಾಪುರ ದೇವರಾಜು, ಕೆಂಕೆರೆ ದೇವರಾಜು, ಶ್ರೀ ಹರ್ಷ, ಹನುಮ ಜಯ, ಚಿನ್ನಸ್ವಾಮಿ, ರಾಘವೇಂದ್ರ ,ನಿಶ್ಚಲ್, ಹನುಮೇಗೌಡ ಮೊದಲಾದವರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ