ವಿಷಯಕ್ಕೆ ಹೋಗಿ

ಹುಳಿಯಾರು ಅಮಾನಿಕೆರೆಯಲ್ಲಿರುವ ಅಲೆಮಾರಿ ನಿರ್ಗತಿಕರಿಗೆ ತುರ್ತು ಶಾಶ್ವತ ವಸತಿ ಕಲ್ಪಿಸಿ ಕೆರೆ ಅಂಗಳದಿಂದ ತೆರವುಗೊಳಿಸಿ ಜೀವ ಕಾಪಾಡುವಂತೆ ಮನವಿ

 

🖋🖊ವರದಿ : ಮಲ್ಲಿಕಾರ್ಜುನ ಭಟ್ಟರಹಳ್ಳಿ.

ತುಮಕೂರು ಜಿಲ್ಲೆˌಚಿಕ್ಕನಾಯಕನಹಳ್ಳಿ ತಾಲ್ಲೂಕ್ ಹುಳಿಯಾರು ಪಟ್ಟಣಪಂಚಾಯ್ತಿಗೆ ಹೊಂದಿಕೊಂಡಿರುವ ಸಣ್ಣನೀರಾವರಿ ಇಲಾಖೆಯ ನಿರ್ವಹಣೆಯಲ್ಲಿರುವ ಹುಳಿಯಾರು ಅಮಾನಿಕೆರೆಗೆ ಈ ಭಾಗದಲ್ಲಿ ವ್ಶಾಪಕ ಮಳೆಯಾಗುತ್ತಿರುವುದರಿಂದ ಯಥೇಚ್ಛ ನೀರು ಹರಿದುಬರುತ್ತಿದ್ದು ಸಂತಸದ ಜೊತೆಗೆ ಅಧಿಕಾರಿಗಳ ನಿರ್ಲಕ್ಷ್ಯದ ಕಾರಣದಿಂದಾಗಿ ಆತಂಕಕ್ಕೂ ಕಾರಣವಾಗಿದೆ ಎಂದು ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ ಅಧ್ಯಕ್ಷ ಭಟ್ಟರಹಳ್ಳಿ ಮಲ್ಲಿಕಾರ್ಜುನ್ ದೂರಿದ್ದಾರೆ.

ಈ ಬಗ್ಗೆ ಸರ್ಕಾರದ ಎಲ್ಲಾ ಅಧಿಕಾರಿಗಳಿಗೂ ದೂರು ಸಲ್ಲಿಸಿರುವ ಅವರು ಸಮಸ್ಯೆ ಬಗ್ಗೆ ವಿವರಣೆ ನೀಡಿದ್ದಾರೆ.

ಸಾರಾಂಶ: ಮೇಲ್ಕಂಡ ಕೆರೆಯಂಗಳದಲ್ಲಿ ಹಲವಾರು ವರ್ಷಗಳಿಂದ ಸುಮಾರು 50ಕ್ಕೂ ಹೆಚ್ಚು ನಿರ್ಗತಿಕ ಅಲೆಮಾರಿ ಕುಟುಂಬಗಳು ಗುಡಿಸಲು ಹಾಕಿಕೊಂಡು ಬದುಕುತ್ತಿದ್ದಾರೆ. ತಾವೂ ಸಹ ಎಲ್ಲರಂತೆ ಗೌರವದಿಂದ ಬದುಕಲು ಸರ್ಕಾರ ಮೂಲಭೂತ(ನಿವೇಶನˌಮನೆˌವ್ಶವಸಾಯಕ್ಕಾಗಿ ಭೂಮಿ) ಅವಶ್ಶಕತೆಗಳನ್ನು ಕಲ್ಪಿಸಿಕೊಂಡಬೇಕೆಂದು ಹಲವಾರು ವರ್ಷಗಳಿಂದ ನಿರಂತರ ಧ್ವನಿ ಎತ್ತಿ ಅಹೋರಾತ್ರಿ ಧರಣಿ ಸೇರಿದಂತೆ ಸಂವಿಧಾನಿಕ ಹಕ್ಕುಗಳಿಗಾಗಿ ಶಾಂತಿಯಿಂದ ಎಲ್ಲಾ ರೀತಿಯ ಪ್ರತಿಭಟನೆ ˌಮನವಿ ಸಲ್ಲಿಸಿದ್ದಾರೆ. ಹುಳಿಯಾರಿನ ಧರಣಿ ಸ್ಥಳಕ್ಕೆ ಅಂದಿನ ಜಿಲ್ಲಾಧಿಕಾರಿ ಮತ್ತು ಹಾಲೀ ರಾಜ್ಶ ಸಮಾಜಕಲ್ಶಾಣ ಇಲಾಖೆ ಆಯುಕ್ತರಾದ ಡಾ.ರಾಕೇಶ್ ಕುಮಾರ್ ಒಂದು ತಿಂಗಳೊಳಗೆ ಸೂಕ್ತ ಜಾಗ‌ ಗುರುತಿಸಿ ಪರ್ಯಾಯ ಎಲ್ಲಾ ವ್ಶವಸ್ಥೆ ಕಲ್ಪಿಸಿ ನೀವೂ ಸಹ ಗೌರವದಿಂದ ಮನುಷ್ಶರಂತೆ ಬದುಕುವ ಸಂವಿಧಾನ ಬದ್ಧ ಹಕ್ಕನ್ನು ಜಿಲ್ಲಾಡಳಿತ ನೀಡುತ್ತದೆ ಎಂದು ಹೇಳಿ 5ವರ್ಷವಾಗುತ್ತಾ ಬಂದಿದ್ದರೂ ಸಹ ಯಾವುದೇ ರೀತಿಯ ಭರವಸೆ ಈಡೇರಿಸಿಲ್ಲ.

IAS ಸೇರಿದಂತೆ ಕೆಳಹಂತದ ಅಧಿಕಾರಿಗಳೂ ಸಹ ಜನಪ್ರತಿನಿಧಿಗಳ ರೀತಿ ಸುಳ್ಳು ಭರವರಸೆ ನೀಡುವ ಚಾಳಿ ಬೆಳೆಸಿಕೊಂಡಿರುವುದು ಈ ಸಂವಿಧಾನಕ್ಕೆ ಮತ್ತು ಜನರ ವಿಶ್ವಾಸಕ್ಕೆ ಮಾಡುವ ಘಾತುಕತನ ನಿಜಕ್ಕೂ ಅತ್ಶಂತ ಖಂಡನೀಯ ಮತ್ತು ದಂಡನಾರ್ಹವಾದ ಕರ್ತವ್ಶಲೋಪ.

ಕಂದಾಯˌ ಸರ್ವೆˌನಗರಾಭಿವೃದ್ಧಿˌಸಮಾಜಕಲ್ಶಾಣˌಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳ ಸಮನ್ವಯತೆ ಇಲ್ಲದ ಬೇಜವಾಬ್ದಾರಿಯಿಂದ ಇಂದಿಗೂ ಸಹ ಈ ಅಲೆಮಾರಿ ಕುಟುಂಬಗಳು ಹುಳಿಯಾರು ಅಮಾನಿಕೆರೆಯಲ್ಲೇ ಜೀವ ಭಯದಿಂದ ಬದುಕುವ ವಾತಾವರಣ ಇದೆ.

ವ್ಶಾಪಕ ಮಳೆಯಿಂದ ಹುಳಿಯಾರು ಕೆರೆ ಯಾವಾಗ ಬೇಕಾದರೂ ಸಹ ತುಂಬಬಹುದು. ನೀರಿಲ್ಲದ ಕೆರೆಯಲ್ಲಿದ್ದ ವಿಷಕಾರಿ ಜಂತುಗಳು ಈಗ ಈ ಅಲೆಮಾರಿ ಕುಟುಂಬಗಳ ಗುಡಿಸಲುಗಳನ್ನು ವಾಸಕ್ಕಾಗಿ ಆಶ್ರಯಿಸಿದಾಗ ಆಗುವ ಮನುಷ್ಶರ ಪ್ರಾಣಹಾನಿಗೆ ಯಾರು ಹೊಣೆ..? ಮುಂದಾಲೋಚನೆ ˌಮುಂಜಾಗ್ರತೆಯ ಜವಾಬ್ದಾರಿಯಿಲ್ಲದ ತಾಲ್ಲೋಕು ಮತ್ತು ಜಿಲ್ಲಾಡಳಿತಕ್ಕೆ ಅಮಾಯಕ ಜನರ ಬಲಿಬೇಕಾ..?

ಈ ಅಲೆಮಾರಿಕುಟುಂಬಗಳಿಗೆ ಮೂಲಭೂತ ಸೌಕರ್ಯಕ್ಕಾಗಿ ಮೀಸಲಾದ ಹಣ ವೆಚ್ಚಮಾಡಿ ತಮ್ಮ ಕರ್ತವ್ಶ ನಿರ್ವಹಿಸಲು ಯೋಗ್ಯತೆಇಲ್ಲದ ˌಮಾನವೀಯ ಸಂವೇದನೆಗಳಿಲ್ಲದ ಅಧಿಕಾರಿಗಳಿಗೆ ಇನ್ನೂ ಸರ್ಕಾರಿ ಸೇವೆಯಲ್ಲಿ ಮುಂದುವರೆಯಲು ಯಾವ ಅರ್ಹತೆ ಇದೆ..?

ಇಡೀ ತುಮಕೂರು ಜಿಲ್ಲೆಯಲ್ಲಿ ಅಲೆಮಾರಿಗಳು ˌನಿರ್ಗತಿಕರು ˌಭೂರಹಿತರಿಗೆ ಭೂಮಿ-ವಸತಿ ನೀಡುವ ವಿಷಯದಲ್ಲಿ ಜಿಲ್ಲೆ ಮತ್ತು ತಾಲ್ಲೋಕು ಆಡಳಿತ ನಡೆದುಕೊಳ್ಳುತ್ತಿರುವ ರೀತಿ ನಿಜಕ್ಕೂ ಇಡೀ  ನಾಗರೀಕಸಮಾಜ ತಲೆತಗ್ಗಿಸುವಂತಿದೆ.

"ಸಂಬಳ ನನ್ನ ಹಕ್ಕು-ಗಿಂಬಳ ನನ್ನ ತಾಕತ್ತು-ಕೆಲಸ ನನ್ನ ಮರ್ಜಿ" ಎನ್ನುವ ಧೋರಣೆಯಿಂದ ಅಧಿಕಾರಿಗಳು ಹೊರಬಂದು ತಕ್ಷಣವೇ ಹುಳಿಯಾರು ಕೆರೆಯಲ್ಲಿ ವಾಸವಿರುವ ಅಲೆಮಾರಿ ಕುಟುಂಬಗಳನ್ನು ಶಾಶ್ವತ ವ್ಶವಸ್ಥೆಗೆ ಸ್ಥಳಾಂತರಿಸಿ ಜನರ ಜೀವ ಕಾಪಾಡಬೇಕು ಹಾಗೂ ಈ ಪ್ರಕರಣದಲ್ಲಿ ಕರ್ತವ್ಶಲೋಪ ಎಸಗಿರುವ ಜಿಲ್ಲಾಡಳಿತದ ಸಂಭಂಧಿಸಿದ ಇಲಾಖೆಗಳ ಎಲ್ಲಾ ಅಧಿಕಾರಿಗಳ ವಿರುದ್ಧ ಮೊಕದ್ದೊಮ್ಮೆ ದಾಖಲಿಸಿ ನಿರ್ಗತಿಕ ಅಲೆಮಾರಿ ಕುಟುಂಬಗಳಿಗೆ ಗೌರವದಿಂದ ಈ ವ್ಶವಸ್ಥೆಯಲ್ಲಿ ಬದುಕಲು ನ್ಶಾಯ ದೊರಕಿಸಿಕೊಡುವಂತೆ ಲಂಚ ಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ(ರಿ) ಅಧ್ಶಕ್ಷರಾದ ಮಲ್ಲಿಕಾರ್ಜುನ ಭಟ್ಟರಹಳ್ಳಿ (9880665397) ಸರ್ಕಾರದ ಮುಖ್ಯ ಕಾರ್ಯದರ್ಶಿ,ಜಿಲ್ಲಾಧಿಕಾರಿ,ಮುಖ್ಯ ಕಾರ್ಯ ನಿರ್ವಹಣಾಧಿಕಾರಿ,ಚಿಕ್ಕನಾಯಕನಹಳ್ಳಿ ತಹಸೀಲ್ದಾರ್‌ ಸೇರಿದಂತೆ ಎಲ್ಲಾ ಅಧಿಕಾರಿಗಳಲ್ಲೂ, ಲೋಕಾಯುಕ್ತ ಅಧಿಕಾರಿಗಳಲ್ಲೂ ಮನವಿ ಮಾಡಿದ್ದಾರೆ.


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಜೈಮಿನಿ ಭಾರತ ಕವಿ ಲಕ್ಷ್ಮೀಶನ ದೇವನೂರು

ಜೈಮಿನಿ ಭಾರತ ಕವಿ ಲಕ್ಷ್ಮಿಶನ ಜನ್ಮಸ್ಥಳ ಚಿಕ್ಕಮಗಲೂರು ಜಿಲ್ಲೆಯ ಕಡೂರು ತಾಲ್ಲೂಕಿನ ದೇವನೂರು.ಆದರೆ ಗುಲ್ಬರ್ಗ ಜಿಲ್ಲೆಯ ಸುರಪುರ? ಅನ್ನುವ ವಾದ ಕೂಡ ಇದೆ.ದೇವನೂರೆ ಜನ್ಮಸ್ಥಳ ಅನ್ನುವುದಕ್ಕೆ ಇಲ್ಲಿ ಸಾಕಷ್ಟು ಪುರಾವೆಗಳು ದೊರೆಯುತ್ತದೆ.ಕವಿ ಲಕ್ಷ್ಮಿಶನ ಕಾಲ: ಕ್ರಿ.ಶ. 1550 (ಹದಿನಾರನೆಯ ಶತಮಾನ).ದೇವನೂರಿಗೆ ಅರಸಿಕೆರೆ ಮಾರ್ಗದ ಬಾಣಾವರದಿಂದ ಹೋಗಬಹುದು.ದೂರ 16 ಕಿಮೀ ಆಗತ್ತೆ.ಇಲ್ಲದಿದ್ರೆ ಚಿಕ್ಕಮಗಳೂರುನಿಂದ ಸಖ್ರೆಪಟ್ಣ( ಸಖರಾಯಪಟ್ಟಣ)ದ ಮೂಲಕ ಬೇಕಾದರೂ ಬರಬಹುದು.ದೇವನೂರು ಗ್ರಾಮದಲ್ಲಿ ೧೭ನೇ ಶತಮಾನದ ಲಕ್ಷ್ಮಿಕಾಂತ ದೇವಸ್ಥಾನ ಹಾಗು ೧೩ ನೇ ಶತಮಾನದ ಸಿದ್ದೇಶ್ವರ ದೇವಾಲಯವಿದೆ. ಲಕ್ಷ್ಮಿಕಾಂತ ದೇವರ ಬಗ್ಗೆ ಪೌರಾಣಿಕ ಐತಿಹ್ಯವಿದ್ದು ಅದು ಹೀಗಿದೆ. ಸಹಸ್ರಾರು ವರ್ಷಗಳ ಹಿಂದೆ ಪಾಂದವರು ಅಷ್ವಮೇಧಯಾಗ ಮಾಡುವ ಸಂದರ್ಭದಲ್ಲಿ ಇಂದಿನ ಭದ್ರಾವತಿ ಅಂದಿನ ಭದ್ರನಗರಿಗೆ ಹೋಗುತ್ತಿದ್ದ ವೇಳೆಯಲ್ಲಿ ಹಸುವೋಂದು ಹುತ್ತಕ್ಕೆ ಹಾಲೆರೆಯುತ್ತಿದ್ದನ್ನು ಕಂಡು ಇದೊಂದು ಪುಣ್ಯಕ್ಷೇತ್ರವೆಂದು ಬಗೆದು ಧರ್ಮರಾಜನ ಮೂಲಕ ಶ್ರೀಕೃಷ್ಣನಿಂದ ಲಕ್ಷ್ಮಿಕಾಂತಸ್ವಾಮಿಯ ಸಾಲಿಗ್ರಾಮ ಶಿಲಾಮೂರ್ತಿಯನ್ನು ಸ್ಥಾಪಿಸಲಾಯಿತೆಂದು ಹೇಳಲಾಗುತ್ತದೆ.ಸದ್ಯ ದೇವಾಲಯ ಮುಜರಾಯಿ ಇಲಾಖೆ ಆಡಳಿತದಲ್ಲಿದೆ.ದೇವಾಲಯ ಅತ್ಯಂತ ವಿಸ್ತಾರವಾಗಿದ್ದು ಇಲ್ಲಿ ೧೨ ಜನ ಆಚಾರ್ಯರುಗಳ ಮೂರ್ತಿಗಳಿದೆ.ಗೋಡೆಯ ಮೇಲೆ ದಶಾವತಾರದ ಪೈಂಟಿಂಗ್ಸ್ ಇದೆ.ಇಲ್ಲಿನ ಅರ್ಚಕ ಜಯಸಿಂಹ ಹೇಳುವಂತೆ ಪ್ರತಿ ವರ್ಷ...

ಹುಳಿಯಾರು: ಸಂಕಷ್ಟದಲ್ಲಿದ್ದ ಬುದ್ಧಿಮಾನ್ಯ ಯುವಕನಿಗೆ ಇಮ್ರಾಜ್ ಬಳಗದಿಂದ ಆಸರೆ; ಮಾನವೀಯತೆ ಮೆರೆದ ಯುವಕರು

ಹುಳಿಯಾರು : " ಮಾನವೀಯತೆ ಎಲ್ಲಕ್ಕಿಂತ ದೊಡ್ಡದು " ಎಂಬ ಮಾತನ್ನು ಹುಳಿಯಾರಿನ ಯುವಕರ ತಂಡವೊಂದು ನಿಜ ಮಾಡಿ ತೋರಿಸಿದೆ.               ಇಲ್ಲಿನ ಎಪಿಎಂಸಿ ಆವರಣದಲ್ಲಿ ದಿಕ್ಕುತೋಚದೆ, ಅಸಹಾಯಕ ಸ್ಥಿತಿಯಲ್ಲಿದ್ದ ಬುದ್ಧಿಮಾನ್ಯ ಯುವಕನೊಬ್ಬನಿಗೆ ಆಸರೆಯಾಗುವ ಮೂಲಕ ಸ್ಥಳೀಯ ಯುವಕರು ಸಮಾಜಕ್ಕೆ ಮಾದರಿ ಸಂದೇಶ ನೀಡಿದ್ದಾರೆ. ಘಟನೆಯ ಹಿನ್ನೆಲೆ :ಹುಳಿಯಾರಿನ ಎಪಿಎಂಸಿ ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ಬುದ್ಧಿಮಾನ್ಯ ಯುವಕನೊಬ್ಬ ಒಂಟಿಯಾಗಿ ಅಲೆಯುತ್ತಿದ್ದನು. ಸರಿಯಾದ ಆಹಾರ, ನೀರು ಮತ್ತು ಆಶ್ರಯವಿಲ್ಲದೆ ಆತ ತೀವ್ರ ಸಂಕಷ್ಟದಲ್ಲಿದ್ದನು. ಇದನ್ನು ಗಮನಿಸಿದ ಸ್ಥಳೀಯ ಯುವಕ ಇಮ್ರಾಜ್ ಮತ್ತು ಅವರ ಸ್ನೇಹಿತರ ಬಳಗವು ತಕ್ಷಣವೇ ಆತನ ನೆರವಿಗೆ ಧಾವಿಸಿತು. ಸಕಾಲಿಕ ಸ್ಪಂದನೆ :ಯುವಕನ ಸ್ಥಿತಿಯನ್ನು ಕಂಡು ಮನನೊಂದ ಸ್ನೇಹಿತರಾದ ಇಮ್ರಾಜ್, ಜಬಿ ಉಲ್ಲಾಖಾನ್ ಫರ್ಮಾನ್, ಅಬ್ದುಲ್ಲಾ, ನವಾ ಶರೀಫ್, ಜಿಶನ್ ಹಾಗೂ ಫಯಾಜ್ ಅವರು ಮೊದಲು ಆತನಿಗೆ ಆಹಾರದ ವ್ಯವಸ್ಥೆ ಮಾಡಿದರು. ನಂತರ ಆತನ ಸುರಕ್ಷತೆಗಾಗಿ ಕ್ರಮ ಕೈಗೊಂಡರು. ಇಲಾಖೆಯ ಸುಪರ್ದಿಗೆ: ಯುವಕರ ಮನವಿಗೆ ಸ್ಪಂದಿಸಿದ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅಧಿಕಾರಿಗಳು, "ಸಮಾಜ ಕಲ್ಯಾಣ ಇಲಾಖೆಯ ನಿರಾಶ್ರಿತರ ಪರಿಹಾರ ಕೇಂದ್ರದಿಂದ ನಾವು ಇಲ್ಲಿಗೆ ಬಂದಿದ್ದು, ...

​ಹುಳಿಯಾರು ಕಸ ವಿಲೇವಾರಿ ಬಿಕ್ಕಟ್ಟು: ನಾಡಕಚೇರಿ ಮುಂದೆ ಕಸ ಸುರಿಯುವ ಯತ್ನ, ಅಧಿಕಾರಿಗಳಿಂದ 15 ದಿನಗಳಲ್ಲಿ ಶಾಶ್ವತ ಪರಿಹಾರದ ಭರವಸೆ

ಹುಳಿಯಾರು ಕಸ ವಿಲೇವಾರಿ ಬಿಕ್ಕಟ್ಟು: ನಾಡಕಚೇರಿ ಮುಂದೆ ಕಸ ಸುರಿಯುವ ಯತ್ನ, ಅಧಿಕಾರಿಗಳಿಂದ 15 ದಿನಗಳಲ್ಲಿ ಶಾಶ್ವತ ಪರಿಹಾರದ ಭರವಸೆ ವರದಿ : ಡಿ.ಆರ್‌.ನರೇಂದ್ರಬಾಬು-ಹುಳಿಯಾರು ​ ಹುಳಿಯಾರು : ದೀರ್ಘಕಾಲದಿಂದ ಬಗೆಹರಿಯದ ಕಸ ವಿಲೇವಾರಿ ಘಟಕದ ಸಮಸ್ಯೆ ಹಾಗೂ ಪಟ್ಟಣದ ಮೂಲಸೌಕರ್ಯಗಳ ಕೊರತೆ ಖಂಡಿಸಿ, ಹುಳಿಯಾರಿನ ರೈತ ಸಂಘ ಕಳೆದ 19 ದಿನಗಳಿಂದ ಪಟ್ಟಣ ಪಂಚಾಯಿತಿ ಕಚೇರಿ ಮುಂದೆ ನಡೆಯುತ್ತಿರುವ ಅಹೋರಾತ್ರ ಧರಣಿಗೆ ಬೆಂಬಲಿಸಿ ಇಂದು ವಿವಿಧ ಸಂಘ-ಸಂಸ್ಥೆಗಳು ಮತ್ತು ನಾಗರಿಕರು ಟ್ರ್ಯಾಕ್ಟರ್‌ನಲ್ಲಿ ಕಸ ತುಂಬಿಕೊಂಡು ಬಂದು ನಾಡಕಚೇರಿ ಮುಂದೆ ಸುರಿಯಲು ಯತ್ನಿಸುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು . ​ಕರ್ನಾಟಕ ರಾಷ್ಟ್ರ ಸಮಿತಿ (ಕೆ.ಆರ್.ಎಸ್.) ಪಕ್ಷ ಸೇರಿದಂತೆ ಹಲವು ಸಂಘಟನೆಗಳ ಬೆಂಬಲದೊಂದಿಗೆ ನಡೆದ ಈ ಪ್ರತಿಭಟನೆಯು ತೀವ್ರ ಸ್ವರೂಪ ಪಡೆದುಕೊಂಡಿತ್ತು. ಪಟ್ಟಣ ಪಂಚಾಯಿತಿ ಮುಂದೆ ತಹಸಿಲ್ದಾರ್ ,ಜಿಲ್ಲಾ ನಗರಾಭಿವೃದ್ಧಿ ಕೋಶದ ಅಧಿಕಾರಿಗಳು ಸೇರಿಕೊಂಡು ಪ್ರತಿಭಟನಾಕಾರದೊಂದಿಗೆ ಗಂಟಗಟ್ಟಲೆ ಸಮಾಲೋಚಿಸಿದರು. ಮೂರು ಬೇಡಿಕೆಗಳಲ್ಲಿ ಎರಡು ಬೇಡಿಕೆ ಈಡೇರಿಸುವ ಭರವಸೆ ನೀಡಿದರೂ ಸಹ ಪ್ರತಿಭಟನಾಕಾರರು ಒಪ್ಪದೇ ನಾಡಕಚೇರಿ ಮುಂದೆ ಕಸ ಸುರಿಯುವ ಪ್ರಯತ್ನಕ್ಕೆ ಮುಂದಾದರು. ​ ಪ್ರತಿಭಟನೆ ಹಾದಿ ಮತ್ತು ಪೊಲೀಸ್ ಸರ್ಪಗಾವಲು :  ​ಪ್ರತಿಭಟನಾಕಾರರು ಟ್ರ್ಯಾಕ್ಟರ್‌ನಲ್ಲಿ ಕಸ ತುಂಬಿಕೊಂಡು ಮೊದಲು ದ...