ಸಕಾಲದಲ್ಲಿ ಸಾಲ ಮರುಪಾವತಿ ಮಾಡುವ ಮೂಲಕ ಸಂಘದ ಅಭಿವೃದ್ಧಿಗೆ ನೆರವಾಗಿ:ಕೆ.ಎಂ.ರಾಮಯ್ಯ
--------------------------------------
ಹುಳಿಯಾರು: ಪಟ್ಟಣದ ದೇವರಾಜು ಅರಸು ಪತ್ತಿನ ಲಾಭದಲ್ಲಿ ಮುನ್ನಡೆಯುತ್ತಿದ್ದು, ಸದಸ್ಯರುಗಳು ಸಂಘದಿಂದ ಪಡೆದ ಸಾಲವನ್ನು ಮರುಪಾವತಿ ಸಮಯದಲ್ಲಿ ಉದಾಸೀನ ಮಾಡದೆ ಸಕಾಲಕ್ಕೆ ಕಟ್ಟುವ ಮೂಲಕ ಸಹಕಾರ ಸಂಘಗಳ ಅಭಿವೃದ್ಧಿಗೆ ನೆರವಾಗಿ ಎಂದು ಡಿ.ದೇವರಾಜ ಅರಸು ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಡಗಿ ರಾಮಣ್ಣ ಹೇಳಿದರು.
ಹೆಚ್.ಡಿ.ದುರ್ಗರಾಜ್,
ಟ್ರಾಕ್ಟರ್ ಮಂಜುನಾಥ್,ಆಮ್ಲೆಟ್ ರಾಜಣ್ಣ,ಪೂಜಾರ್ ಸುರೇಶ್ , ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಾವ್ಯ,ರಘುನಾಥ್, ಸದಸ್ಯ ಶಿವಣ್ಣ,ಚಂದ್ರಪ್ಪ ಸೇರಿದಂತೆ ಷೇರುದಾರರು ಮತ್ತಿತರರು ಪಾಲ್ಗೊಂಡಿದ್ದರು.

ಹುಳಿಯಾರಿನ ಬಿಂಧುಮಾಧವ ಕಾಂಪ್ಲೆಕ್ಸ್‌ನಲ್ಲಿರುವ ಡಿ.ದೇವರಾಜ ಅರಸು ಪತ್ತಿನ ಸಹಕಾರ ಸಂಘದ ಕಛೇರಿಯಲ್ಲಿ ನಡೆದ ಸಂಘದ 2021-22ನೇ ಸಾಲಿನ ಸರ್ವಸದ್ಯಸರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಹಿಂದುಳಿದ ವರ್ಗಗಳ ಸಮುದಾಯದವರ ಅಭಿವೃದ್ಧಿಗಾಗಿ ಪಟ್ಟಣದಲ್ಲಿ ದೇವರಾಜು ಅರಸು ಪತ್ತಿನ ಸಹಕಾರ ಸಂಘ ಸ್ಥಾಪಿಸಲಾಗಿದ್ದು ಹಿಂದುಳಿದ ಸಮುದಾಯದವರಿಗೆ,ಆರ್ಥಿಕವಾಗಿ ನೆರವು ಕಲ್ಪಿಸಲಾಗುತ್ತಿದೆ.ಆದರೆ ಸಂಘದಿಂದ ಪಡೆದ ಸಾಲವನ್ನು ಅನೇಕ ಸದಸ್ಯರುಗಳು ಮರುಪಾವತಿ ಮಾಡದೆ ಸುಸ್ತಿದಾರರಾಗಿದ್ದು,ಬ್ಯಾಂಕ್ ಲಾಭದಲ್ಲಿದ್ದರೂ ವಸೂಲಾತಿ ಬಾಕಿಯಿದೆ.ಇದು ಹೀಗೇಯೇ ಮುಂದುವರಿದಲ್ಲಿ ಸಂಘ ನಷ್ಟ ಅನುಭವಿಸುತ್ತದೆ ಎಂದರು.
ನಂತರ ಕಳೆದ ಸಾಲಿನ ಜಮಾಖರ್ಚು,ಲಾಭ ನಷ್ಟ ಹಾಗೂ ಆಸ್ತಿ ವಿವರ ನೀಡಿ 2021 ಎರಡನೇ ಸಾಲಿಗೆ ಸಂಘವು 9,84,454₹ ನಿವ್ವಳ ಲಾಭಗಳಿಸಿದೆ ಎಂದರು.
ನಿರ್ದೇಶಕರುಗಳಾದ ದಿವಾಕರ್,ಅಂಜಮ್ಮ,ಹೆಚ್.ಡಿ.ದುರ್ಗರಾಜ್,
ಟ್ರಾಕ್ಟರ್ ಮಂಜುನಾಥ್,ಆಮ್ಲೆಟ್ ರಾಜಣ್ಣ,ಪೂಜಾರ್ ಸುರೇಶ್ , ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಾವ್ಯ,ರಘುನಾಥ್, ಸದಸ್ಯ ಶಿವಣ್ಣ,ಚಂದ್ರಪ್ಪ ಸೇರಿದಂತೆ ಷೇರುದಾರರು ಮತ್ತಿತರರು ಪಾಲ್ಗೊಂಡಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ