ಹುಳಿಯಾರು, ಕೆಂಕೆರೆಯ ಬಿ.ಎಂ.ಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಯುವ ರೆಡ್ ಕ್ರಾಸ್ ಘಟಕದ ವತಿಯಿಂದ, “ಬೆನ್ನುಹುರಿ ಅಪಘಾತದ ಪುನಶ್ಚೇತನದ ಕುರಿತು ಅರಿವು” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಸಂಪನ್ಮೂಲ ವ್ಯಕ್ತಿಗಳಾಗಿ ಕರ್ನಾಟಕ ರಾಜ್ಯ ಬೆನ್ನುಹುರಿಯ ಅಪಘಾತದ ಅಂಗವಿಕಲರ ಸಂಘದ ತುಮಕೂರು ಜಿಲ್ಲಾ ಸಂಯೋಜಕರಾದ ಶ್ರೀಮತಿ ಶ್ವೇತಾ ಅವರು ಆಗಮಿಸಿ “ಬೆನ್ನುಹುರಿ ಅಪಘಾತ, ಅದರ ವಿಧಗಳು, ಲಕ್ಷಣಗಳು ಹಾಗೂ ಅಪಘಾತದ ಚಿಕಿತ್ಸೆಯ ನಂತರ ಅವರ ಅವರನ್ನು ಗುರುತಿಸಿ ಪುನಶ್ಚೇತನ ನೀಡುವ ಕುರಿತು ಮಾಹಿತಿ ನೀಡಿದರು.
ಮುಂದುವರೆದು ಮಾತನಾಡಿದ ಅವರು ಬೆನ್ನುಹುರಿ ಅಪಘಾತದಿಂದಾಗಿ ಅಂಗವಿಕಲರಾದವರ ಸಾಮರ್ಥ್ಯವನ್ನು ಗುರುತಿಸಿ, ಆತ್ಮ ವಿಶ್ವಾಸ ಮೂಡಿಸಿ ತಮ್ಮ ಜೀವನವನ್ನು ಸ್ವಾವಲಂಬಿಗಳವಾಗಿ ನಡೆಸುವಂತೆ ತರಬೇತಿ ನೀಡಿ, ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಪಡೆಯುವಂತೆ ಮಾಡುವುದು ಸರ್ಕಾರೇತರ ಸಂಸ್ಥೆಯಾದ ಕರ್ನಾಟಕ ರಾಜ್ಯ ಬೆನ್ನುಹುರಿ ಅಪಘಾತದ ಅಂಗವಿಕಲರ ಸಂಘದ ಕಾರ್ಯವಾಗಿದೆ” ಎಂದರು.
ಈ ಸಂಸ್ಥೆಯ ಫಲಾನುಭವಿಗಳಾದ ಲಿಂಗಪ್ಪನ ಪಾಳ್ಯದ ಶ್ರೀ ಕೃಷ್ಣಮೂರ್ತಿ ಅವರು ತಮಗಾದ ಬೆನ್ನುಹುರಿ ಅಪಘಾತ, ಅದರ ನಂತರದ ತರಬೇತಿ ಹಾಗೂ ಇಂದು ಸ್ವಾವಲಂಬಿಯಾಗಿ ಬದುಕುತ್ತಿರುವ ಕುರಿತು ತಮ್ಮ ಅನುಭವವನ್ನು ಹಂಚಿಕೊಂಡರು.
ಕಾಲೇಜಿನ ಐಕ್ಯುಎಸಿ ಸಂಚಾಲಕರಾದ ಪ್ರೊ. ಮಂಜುನಾಥ್ ಕೆ.ಎಸ್. ಅವರು ಮಾತನಾಡಿ ಇಂತಹ ಸಂಸ್ಥೆಗಳು ಸಾಮಾಜಿಕ ಜವಾಬ್ದಾರಿಯೊಂದಿಗೆ ಕೆಲಸ ಮಾಡುತ್ತದೆ ಹಾಗೂ ಪ್ರತಿಯೊಬ್ಬರು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ವೀರಣ್ಣ ಎಸ್. ಸಿ.ಅವರು ಮಾತನಾಡಿ “ಇಂದಿನ ಕಾರ್ಯಕ್ರಮದಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡ ಶ್ರೀ ಕೃಷ್ಣಮೂರ್ತಿ ಅವರು ಈ ಸಂಸ್ಥೆಯ ಕೆಲಸಕ್ಕೆ ಉದಾಹರಣೆ ಎಂದರು. ಈ ರೀತಿ ಅಪಘಾತದ ಆಗದಂತೆ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು. ಆಕಸ್ಮಿಕವಾಗಿ ಬೆನ್ನುಹುರಿ ಅಪಘಾತ ನಡೆದ ಸಂದರ್ಭಗಳಲ್ಲಿ ಹಾಗೂ ನಂತರ ಬಹಳಷ್ಟು ಆತ್ಮಸ್ಥೈರ್ಯದೊಂದಿಗೆ ಜೀವನ ನಡೆಸಬೇಕು. ಇಂತಹ ಸಮಸ್ಯೆ ಇರುವವರ ಬಗ್ಗೆ ಮಾಹಿತಿ ನೀಡಬೇಕು ಎಂದರು.
ಕಾಲೇಜಿನ ಗ್ರಂಥಪಾಲಕರಾದ ಡಾ.ಲೋಕೇಶ ನಾಯಕ್ ಹಾಗೂ ಉಪನ್ಯಾಸಕ ವೃಂದದವರು ಉಪಸ್ಥಿತರಿದ್ದರು.
ಯುವ ರೆಡ್ ಕ್ರಾಸ್ ಘಟಕದ ಸಂಚಾಲಕರಾದ ಶ್ರೀಮತಿ ಸಂಗೀತಾ ಪಿ., ಇವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯಕ್ರಮವನ್ನು ಪ್ರಥಮ ಸೆಮಿಸ್ಟರ್ ಬಿ.ಕಾಂ.ನ ಭೂಮಿಕ ಎನ್.ಜಿ. ಇವರ ಪ್ರಾರ್ಥನೆಯೊಂದಿಗೆ ಆರಂಭಿಸಲಾಯಿತು. ಪ್ರಥಮ ಸೆಮಿಸ್ಟರ್ ಬಿ.ಎ ವಿದ್ಯಾರ್ಥಿನಿಯರಾದ ಕುಬ್ರ ಅವರು ಸ್ವಾಗತಿಸಿ, ದೀಕ್ಷಾ ಎಸ್ ಇವರು ವಂದಿಸಿದರು ಹಾಗೂ ಐಶ್ವರ್ಯರವರು ಕಾರ್ಯಕ್ರಮವನ್ನು ನಿರ್ವಹಿಸಿದರು
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ