ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

2023 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಹುಳಿಯಾರಿನ ಬರಕನಾಳುವಿನಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ

ಬ್ಯಾಂಕಿನಲ್ಲಿ ಮುದ್ರಾ ಯೋಜನೆ ಅಡಿ 10 ಲಕ್ಷ ಜನರವರೆಗೂ ಉದ್ಯೋಗ ಮಾಡುವವರಿಗೆ ಯಾವುದೇ ಜಾಮೀನು ಇಲ್ಲದೆ ಸಾಲ ನೀಡಬಹುದಾಗಿದ್ದು ಇದನ್ನು ಉದ್ಯೋಗ ಮಾಡಲು ಗುರಿ ಹೊಂದಿರುವ ಯುವಕರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಹುಳಿಯಾರು ಭಾರತೀಯ ಸ್ಟೇಟ್ ಬ್ಯಾಂಕ್‌ನ   ವ್ಯವಸ್ಥಾಪಕರಾದ  ಸತೀಶ್ ಕೆ ಸಿಂಗ್ ಮಾಹಿತಿ ನೀಡಿದರು.            ಭಾರತೀಯ ಸ್ಟೇಟ್ ಬ್ಯಾಂಕ್ ಹಾಗೂ ಚಿಕ್ಕನಾಯಕನಹಳ್ಳಿಯ ಆರ್ಥಿಕ ಸಾಕ್ಷರತಾ ಕೇಂದ್ರದಿಂದ ಬರಕನಾಳು ಗ್ರಾಮ ಪಂಚಾಯಿತಿಯಲ್ಲಿ ಏರ್ಪಡಿಸಿದ್ದ ವಿಕಸಿತ್ ಭಾರತ್ ಸಂಕಲ್ಪ ಯಾತ್ರೆ ಕಾರ್ಯಾಗಾರದಲ್ಲಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ಚಿಕ್ಕನಾಯಕನಹಳ್ಳಿ ಆರ್ಥಿಕ ಸಾಕ್ಷರತಾ ಸಲಹೆಗಾರರಾದ ಆರ್.ಎಂ.ಕುಮಾರಸ್ವಾಮಿ ಮಾತನಾಡಿ ಯಾವುದೇ ಯೋಜನೆಗಳು ಫಲಪ್ರಧ ವಾಗಬೇಕೆಂದರೆ ಆ ಯೋಜನೆಯು ಜಾರಿ ಮಾಡಿದ ದಿನದಿಂದ ಎಲ್ಲರಿಗೂ  ತಲುಪಿದಿಯೋ ಅಥವಾ ಇನ್ನು ತಲುಪಬೇಕಾಗಿದೆಯೋ ಎಂದು ಯೋಚಿಸಿ ಅದನ್ನು ವಿಮರ್ಶೆ ಮಾಡುವುದೇ ಈ ವಿಕಾಸ ಭಾರತ ಸಂಕಲ್ಪ ಯೋಜನೆಯ ಮುಖ್ಯ ಗುರಿ ಎಂದು ತಿಳಿಸಿದರು            ಈ ಕಾರ್ಯಗಾರದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ತುಕ್ಯ ನಾಯಕ್, ಅಧ್ಯಕ್ಷರಾದ ಜಗದೀಶ್ ,ಸದಸ್ಯರಾದ ಪುಟ್ಟರಂಗಮ್ಮ,ಎಂ ಬಿ ಕೆ ಶೀಲಾ,ಎಲ್ ಸಿ ಆರ್ ಪಿ ಗಳಾದ ಜಯಮ್ಮ ಮಂಜುಳಾ ಸೇರಿದಂತೆ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಉಪಸ್ಥಿತರಿದ್ದರು.   

ಕೆಂಕೆರೆ ಗ್ರಾಮದಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ

ಹುಳಿಯಾರಿನ ಭಾರತೀಯ ಸ್ಟೇಟ್ ಬ್ಯಾಂಕ್ ವತಿಯಿಂದ ತಮ್ಮ ಸೇವಾ ವ್ಯಾಪ್ತಿಯಲ್ಲಿರುವ ಹುಳಿಯಾರಿನ ಕೆಂಕೆರೆ ಗ್ರಾಮದಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಕಾರ್ಯಗಾರವನ್ನು ಏರ್ಪಡಿಸಲಾಗಿತ್ತು.              ಕಾರ್ಯಗಾರವನ್ನು ಉದ್ಘಾಟಿಸಿದ ಹುಳಿಯಾರು ಭಾರತೀಯ ಸ್ಟೇಟ್ ಬ್ಯಾಂಕ್ ನ ವ್ಯವಸ್ಥಾಪಕರಾದ ಸತೀಶ್.ಕೆ. ಸಿಂಗ್ ಮಾತನಾಡಿ ನಮ್ಮ ಬ್ಯಾಂಕು ಕೇಂದ್ರ ಸರ್ಕಾರದ ಎಲ್ಲಾ ಯೋಜನೆಗಳನ್ನು ಅಳವಡಿಸುವಲ್ಲಿ  ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಎಲ್ಲರೂ ಇದರ ಪ್ರಯೋಜನ  ಪಡೆದುಕೊಳ್ಳಬೇಕೆಂದು ಕರೆ ನೀಡಿದರು                   ಚಿಕ್ಕನಾಯಕನಹಳ್ಳಿ ತಾಲೂಕು ಪಂಚಾಯಿತಿಯ ಸಂಜೀವಿನಿ ಒಕ್ಕೂಟದ ಸಂಯೋಜಕರಾದ ರಮೇಶ್ ಮಾತನಾಡಿ ಕೇಂದ್ರ ಸರ್ಕಾರದ ಯೋಜನೆಗಳಾದ ಪ್ರಧಾನ ಮಂತ್ರಿ ಸುರಕ್ಷಾ ಭಿಮಾ ಯೋಜನೆ ಹಾಗೂ ಜೀವನ ಜ್ಯೋತಿ ವಿಮಾ  ಯೋಜನೆಯನ್ನು ಬ್ಯಾಂಕುಗಳ ಮುಖಾಂತರ ನೋಂದಾಯಿಸಿ ಅದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.                         ಚಿಕ್ಕನಾಯಕನಹಳ್ಳಿ ಆರ್ಥಿಕ ಸಾಕ್ಷರತಾ ಸಲಹೆಗಾರರಾದ  ಆರ್.ಎಂ.ಕುಮಾರಸ್ವಾಮಿ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧ ಹೆಚ್ಚಾಗುತ್ತಿದ್ದು ಜನರು ತಮ್ಮ ಖಾತೆಗಳಲ್ಲಿನ ಹಣವನ್ನು ಕಳೆದುಕೊಳ್ಳುತ್ತಿರುವುದು ವಿಷಾದನೀಯ.ಇದರ ಬಗ್ಗೆ ಜನರು ಎಚ್ಚರದಿಂದಿರಬೇಕೆಂದು ಕರೆ ನೀಡಿದರು                  ಈ ಕಾರ್ಯಗಾರದಲ್ಲಿ ಗ್ರಾಮ ಪಂಚಾಯಿತ

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗಳನ್ನು ಸದ್ವಿನಿಯೋಗಪಡಿಸಿಕೊಳ್ಳಲು ಶ್ರೀಮತಿ ಕೀರ್ತಿಪ್ರಭ‌ ಕರೆ

              ಯಳನಡುವಿನಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ ಹುಳಿಯಾರು : ಕೇಂದ್ರ ಸರ್ಕಾರವು ಮಹತ್ವಾಕಾಂಕ್ಷೆ ಯೋಜನೆಗಳಾದ ಪ್ರಧಾನ ಮಂತ್ರಿ ಸುರಕ್ಷಾ ,ಜೀವನ್ ಜ್ಯೋತಿ ವಿಮಾ ,ಫಸಲ್ ಭೀಮಾ ,ಅಟಲ್ ಪೆನ್ಷನ್, ಉಜ್ವಲ ,ಕಿಸಾನ್ ಸಮ್ಮಾನ್, ಆಹಾರ ಪೋಷಣ್ ,ಕಿಸಾನ್ ಕ್ರೆಡಿಟ್ ಕಾರ್ಡ್, ಮುದ್ರ ಸಾಲ ಇನ್ನೂ ಮುಂತಾದ ಹಲವಾರು ಯೋಜನೆಗಳನ್ನು ಜಾರಿ ಮಾಡಿದ್ದು ಜನರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ನಬಾರ್ಡ್ ಉಪ ಪ್ರಧಾನ ವ್ಯವಸ್ಥೆಗೆ ವ್ಯವಸ್ಥಾಪಕಿಯಾದ ಶ್ರೀಮತಿ ಕೀರ್ತಿಪ್ರಭ‌ ಕರೆ ನೀಡಿದರು. ಹುಳಿಯಾರು ಸಮೀಪದ ಯಳನಡುವಿನ ಗ್ರಾಮ ಪಂಚಾಯಿತಿ ಆವರಣದಲ್ಲಿ ಯಳನಡುವಿನ ಕರ್ನಾಟಕ ಗ್ರಾಮೀಣ ಬ್ಯಾಂಕ್ ಹಾಗೂ ಹುಳಿಯಾರಿನ ಕೆನರಾ ಬ್ಯಾಂಕ್ ಜಂಟಿಯಾಗಿ  ಏರ್ಪಡಿಸಿದ್ದ ವಿಕಸಿತ್ ಭಾರತ ಸಂಕಲ್ಪ ಯಾತ್ರೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಬ್ಯಾಂಕಿನ ಎಲ್ಲಾ ಸೌಲಭ್ಯಗಳನ್ನು‌ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಡಿಜಿಟಲ್ ಬ್ಯಾಂಕಿಂಗ್ ನಿಂದ ಮಾತ್ರ ಸಾಧ್ಯವಾಗಲಿದ್ದು ಇದನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಳಸಿಕೊಳ್ಳಬೇಕೆಂದು ತಿಳಿಸಿದರು ಈ ಸಮಾರಂಭದಲ್ಲಿ ಉಪಸ್ಥಿತರಿದ್ದ ಹುಳಿಯರಿನ ಕೆನರಾ ಬ್ಯಾಂಕ್ ಮ್ಯಾನೇಜರ್ ವಿನಯ್ ಟಿ.ಸಿ ,ಕರ್ನಾಟಕ ಗ್ರಾಮೀಣ ಬ್ಯಾಂಕಿನ ವ್ಯವಸ್ಥಾಪಕರಾದ ರಕ್ಷಿತ್ ಕುಮಾರ್ ,ಆರ್ಥಿಕ ಸಾಕ್ಷರ ಸಲಹೆಗಾರ‌ ‌‌ಆರ್. ಎಂ.ಕುಮಾರಸ್ವಾಮಿ,  ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಶ್ರೀ ಹರ್ಷ ,ಗ್ರಾಮ ಪಂ

ದೊಡ್ಡಬಿದರೆ ಗ್ರಾಮದಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ

ಕೇಂದ್ರ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಪ್ರಧಾನಮಂತ್ರಿ ಸುರಕ್ಷಾ ಹಾಗೂ ಜೀವನ ಜ್ಯೋತಿ ವಿಮಾ ಯೋಜನೆಗಳು ಕೇವಲ 20 ಹಾಗೂ 436 ರೂಪಾಯಿಗಳಿಗೆ ವಾರ್ಷಿಕ ಪ್ರೀಮಿಯಂ ಪಡೆದು 2 ಲಕ್ಷ ಹಣ ಬರುವಂತೆ ಮಾಡಿರುವುದು ನಿಜಕ್ಕೂ ಶ್ಲಾಘನೀಯ  ಎಂದು ದೊಡ್ಡಬಿದರೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ  ನಾಗೇಶ್ ನುಡಿದರು. ಹುಳಿಯಾರು ಹೋಬಳಿ ದೊಡ್ಡಬಿದರೆ ಗ್ರಾಮದಲ್ಲಿ ಹುಳಿಯಾರಿನ ಭಾರತೀಯ ಸ್ಟೇಟ್ ಬ್ಯಾಂಕ್ ಹಾಗೂ ಆರ್ಥಿಕ ಸಾಕ್ಷರತಾ ಕೇಂದ್ರ ಚಿಕ್ಕನಾಯಕನಹಳ್ಳಿ ಇವರು ಜಂಟಿಯಾಗಿ ಏರ್ಪಡಿಸಿದ್ದ ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು ಕೇಂದ್ರ ಸರ್ಕಾರದವು ದೇಶದ ಎಲ್ಲ ಜನರನ್ನು ಆಕರ್ಷಿಸುವಂಥ ಕಡಿಮೆ ವೆಚ್ಚದ ಯೋಜನೆಗಳನ್ನು ಜಾರಿಗೆ ತಂದಿರುವುದು  ಶ್ಲಾಘನೀಯ.ವಿಕಸಿತ ಭಾರತ ಸಂಕಲ್ಪ ಯಾತ್ರೆಯು  ನಮ್ಮ ದೊಡ್ಡಬಿದರೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನಡೆಯುತ್ತಿರುವುದು ತುಂಬಾ ಸಂತೋಷದ ವಿಷಯ ಎಂದರು.  ಹುಳಿಯಾರು ಭಾರತೀಯ ಸ್ಟೇಟ್ ಬ್ಯಾಂಕಿನ ಮ್ಯಾನೇಜರ್‌  ಲೋಹಿತ್ ಮಾತನಾಡಿ ವಿಶ್ವಕರ್ಮ ಯೋಜನೆ ಅಡಿಯಲ್ಲಿ ಗ್ರಾಮ ಪಂಚಾಯಿತಿಯಿಂದ ಆಯ್ಕೆಯಾದ ಫಲಾನುಭವಿಗಳಿಗೆ ತರಬೇತಿ ನೀಡಿ ನಂತರ ಸಾಲ ನೀಡಲು ನಮ್ಮ ಬ್ಯಾಂಕು ಸಿದ್ದವಿದೆ ಎಂದರು. ಆರ್ಥಿಕ ಸಾಕ್ಷರತಾ ಸಲಹೆಗಾರರಾದ ಆರ್‌.ಎಂ.ಕುಮಾರಸ್ವಾಮಿ  ಮಾತನಾಡಿ ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲ ರೈತರಿಗೆ ತುಂಬಾ ಪ್ರಯೋಜನವಾಗಿದ್ದು ಕ

ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆ ಅಧ್ಯಾಪಕರ ಸಿದ್ಧತೆಗೆ ಸವಾಲೆಸೆಯುವಂತಿರಬೇಕು – ಸಾಹಿತಿ ಕೃಷ್ಣಮೂರ್ತಿ ಬಿಳಿಗೆರೆ

ಹುಳಿಯಾರು : ತರಗತಿಗಳಲ್ಲಿ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆ ಅಧ್ಯಾಪಕರ ಸಿದ್ಧತೆಗೆ ಸವಾಲೆಸೆಯುವಂತಿರಬೇಕು, ಅಧ್ಯಾಪಕರು ತಮ್ಮದೇ ಆದ ಹೊಸ ಹೊಸ ಬೋಧನಾ ವಿಧಾನಗಳನ್ನು ಬಳಸಬೇಕು.ಯುವ ಪೀಳಿಗೆ ಸೆಲ್ಫಿ ಗೀಳಿಗೆ ಬೀಳದೆ ದೃಶ್ಯಗಳನ್ನು ತಮ್ಮ ಸ್ಮೃತಿಯಲ್ಲಿ ಕ್ಲಿಕ್ಕಿಸಬೇಕು ಮತ್ತು ಬರವಣಿಗೆಯಲ್ಲಿ ದಾಖಲಿಸಬೇಕು ಎಂದು ಸಾಹಿತಿ, ಚಿಂತಕ ಪ್ರೊ. ಬಿಳಿಗೆರೆ ಕೃಷ್ಣಮೂರ್ತಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಬಿ .ಎಂ.ಎಸ್. ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹುಳಿಯಾರು-ಕೆಂಕೆರೆ ಯಲ್ಲಿ ಕನ್ನಡ ವಿಭಾಗದ ವತಿಯಿಂದ ನಡೆದ “ವಿಶೇಷ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮ” ದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.  ಈ ಸಂದರ್ಭದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ತರಗತಿಗಳಲ್ಲಿ ವಿದ್ಯಾರ್ಥಿಗಳು ಅರ್ಧ ವೃತ್ತಾಕಾರದಲ್ಲಿ ಕೂರುವ ವ್ಯವಸ್ಥೆ ಆಗಬೇಕು. ಕುವೆಂಪು ಅವರು ಹೇಳಿರುವ “ಇಲ್ಲಿ ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ” ಎಂಬ ಮಾತನ್ನು ಗಮನದಲ್ಲಿಟ್ಟುಕೊಂಡು ಕೀಳರಿಮೆಯನ್ನು ತೊರೆದು ನಮ್ಮತನವನ್ನು ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದರು. ಮಾನಸಿಕ ಆರೋಗ್ಯಕ್ಕೆ ಉತ್ತಮ ಆಹಾರ ಮತ್ತು ಉತ್ತಮ ಚಿಂತನೆ ಅವಶ್ಯಕ. ಶಿಕ್ಷಣದ ಫಲ ಪಡೆದ ನಾವೆಲ್ಲರೂ ಭಿನ್ನಭೇದದಿಂದ ಮುಕ್ತಿ ಪಡೆಯಬೇಕು ಎಂದರು. ಮನುಷ್ಯನ ಅತಿ ಬುದ್ಧಿಯ ಸಮಕಾಲೀನ ದುಷ್ಪರಿಣಾಮಗಳನ್ನು ನೋಡುತ್ತಿದ್ದರೆ ಆಘಾತವಾಗುತ್ತದೆ

*ಹುಳಿಯಾರು ಪದವಿ ಕಾಲೇಜಿನಲ್ಲಿ ಕಿರುನಾಟಕಗಳ ಸ್ಪರ್ಧೆ : ರಂಜಿತ ಆರ್. ಮತ್ತು ತಂಡಕ್ಕೆ ಪ್ರಥಮ ಸ‍್ಥಾನ*

ಬಿ.ಎಂ.ಎಸ್. ಸರ್ಕಾರಿ ಪ್ರಥಮ ದರ್ಜೆ, ಕಾಲೇಜು, ಹುಳಿಯಾರು-ಕೆಂಕೆರೆ, ಇಲ್ಲಿನ ಸಾಂಸ್ಕೃತಿಕ ಸಂಘದ ವತಿಯಿಂದ  “ಕಿರುನಾಟಕಗಳ ಸ್ಪರ್ಧೆ”ಯನ್ನು ಆಯೋಜಿಸಲಾಗಿತ್ತು.  ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಚಾರ್ಯ ವೀರಣ್ಣ ಎಸ್..ಸಿ . ಅವರು ಮಾತನಾಡಿ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪಠ್ಯೇತರ ಚಟುವಟಿಕೆಗಳು ಸಹಕಾರಿಯಾಗಿದ್ದು, ಈ ನಿಟ್ಟಿನಲ್ಲಿ ರಂಗ ಅಭಿನಯ ಕೂಡ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ನೆರವಾಗುತ್ತದೆ ಎಂದು ಅಭಿಪ್ರಾಯಪಟ್ಟರು.  ಕಾರ್ಯಕ್ರಮದ ಸಂಚಾಲಕರಾದ ಡಾ. ಮೋಹನ್ ಕುಮಾರ್ ಮಿರ್ಲೆ ಅವರು ಪ್ರಾಸ್ತಾವಿಕ ನುಡಿಗಳನ್ನು ಆಡುತ್ತಾ, ವಿದ್ಯಾರ್ಥಿಗಳಲ್ಲಿ ಅಡಗಿರುವ ಅಭಿನಯ ಕೌಶಲ್ಯವನ್ನು ಗುರುತಿಸುವ ಉದ್ದೇಶದಿಂದ ಈ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ರಂಗಭೂಮಿಯು ಸಾಮಾಜಿಕ ಜಾಗೃತಿ ಮೂಡಿಸುವ ಪ್ರಭಾವಶಾಲಿ ಮಾಧ್ಯಮವಾಗಿದ್ದು, ರಂಗಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಕಲಾವಿದರ ಚಿಂತನಾ ಲಹರಿಗಳ ಮೇಲೂ ಇದು ಧನಾತ್ಮಕ ಪರಿಣಾಮ ಬೀರುತ್ತದೆ ಎಂದು ಹೇಳಿದರು.   ಸ್ಪರ್ಧೆಯಲ್ಲಿ ಒಟ್ಟು ಏಳು ತಂಡಗಳು ಭಾಗವಹಿಸಿದ್ದು , ಐತಿಹಾಸಿಕ ಮತ್ತು ಪೌರಾಣಿಕ ಸಂಗತಿಗಳು, ಸಾಮಾಜಿಕ ಜಾಗೃತಿ, ಆರ್ಥಿಕ ಜಾಗೃತಿ, ಕನ್ನಡಾಭಿಮಾನ, ಸಂವಿಧಾನದ ಮಹತ್ವ, ಮಹಿಳಾ ಸಬಲೀಕರಣ, ಹಾಸ್ಯ, ಹೀಗೆ ವೈವಿಧ್ಯಮಯ ವಸ್ತು ವಿಷಯಗಳ ಕಿರು ನಾಟಕಗಳನ್ನು ಪ್ರದರ್ಶಿಸಿದರು.  “ಸಂ

ಹುಳಿಯಾರಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನೂತನ ಯೋಜನಾ ಕಛೇರಿ ಉದ್ಘಾಟನೆ

ಹುಳಿಯಾರಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನೂತನ ಯೋಜನಾ ಕಛೇರಿ ಉದ್ಘಾಟನೆ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಮಹಿಳೆಯರನ್ನು ಸಂಘಟಿಸಿ ಅವರಿಗೆ ಉತ್ತಮ ಜೀವನ ನಡೆಸಲು ಸಹಕಾರ ನೀಡಲಾಗುತ್ತಿದೆ: ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ||ಎಲ್.ಹೆಚ್. ಮಂಜುನಾಥ್                    --------------------- ಹುಳಿಯಾರು :ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಗ್ರಾಮೀಣ ಭಾಗದಲ್ಲಿ ದುರ್ಬಲರನ್ನು ಹಾಗೂ ಮಹಿಳೆಯರನ್ನು ಸಂಘಟಿಸಿ ಅವರಿಗೆ ಉತ್ತಮ ಜೀವನ ನಡೆಸಲು ಸಹಕಾರ ನೀಡಲಾಗುತ್ತಿದೆ.ದುರ್ಬಲ ವರ್ಗದ ಮಹಿಳೆಯರಿಗೆ ಆತ್ಮವಿಶ್ವಾಸ ಮೂಡಿಸಿ ಆರ್ಥಿಕವಾಗಿ ಸಬಲೀಕರಣರನ್ನಾಗಿ ಮಾಡುವ ಮೂಲಕ ಸಮಾಜದ ಮುಖ್ಯ ವಾಹಿನಿಗೆ ತರುವ ಕೆಲಸ ಸಂಘದಿಂದ ಯಶಸ್ವಿಯಾಗಿ ಸಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ||ಎಲ್.ಹೆಚ್. ಮಂಜುನಾಥ್ ತಿಳಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್‌(ರಿ)ವತಿಯಿಂದ ಹುಳಿಯಾರಿನಲ್ಲಿ ನೂತನವಾಗಿ ಆರಂಭಿಸಲಾದ "ಚಿಕ್ಕನಾಯಕನಹಳ್ಳಿ-2 ನೂತನ ಯೋಜನಾ ಕಛೇರಿಯ" ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.                    ಸ್ವಸಹಾಯ ಸಂಘಗಳ ಮೂಲಕ ಸರಕಾರದ ಹಾಗೂ ಬ್ಯಾಂಕಿನ ಸಹಭಾಗಿತ್ವದೊಂದಿಗೆ ಹತ್ತು ಹಲವಾರು ಯೋಜನೆಗಳನ್ನು ನೇರವಾಗಿ ಫಲಾನುಭವಿಗಳಿ

ತುಮಕೂರು ಜಿಲ್ಲಾ ಮಾರ್ಗದರ್ಶಿ ಬ್ಯಾಂಕಿನಿಂದ‌ ಮತ್ತಿಘಟ್ಟದ ಎಳ್ಳೇನಹಳ್ಳಿಯಲ್ಲಿ ವಿಕಸಿತ್ ಭಾರತ್ ಸಂಪರ್ಕ ಯಾತ್ರೆ ಅರಿವು ಕಾರ್ಯಾಗಾರ

ಹುಳಿಯಾರು : ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ಎಂಬುದು ಸರ್ಕಾರದ ಯೋಜನೆಗಳನ್ನು ಬ್ಯಾಂಕುಗಳ ಮುಖಾಂತರ   ಜನರಿಗೆ ತಲುಪಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದು ಸೇತುವೆಯಂತೆ ಕೆಲಸ ಮಾಡುತ್ತಿದೆ ಎಂದು  ತುಮಕೂರಿನ ಲೀಡ್ ಬ್ಯಾಂಕ್ ಡಿಸ್ಟ್ರಿಕ್ಟ್ ಮ್ಯಾನೇಜರ್  ಪ್ರಕಾಶ್ ತಿಳಿಸಿದರು.                     ಕರ್ನಾಟಕ ಗ್ರಾಮೀಣ ಬ್ಯಾಂಕ್ ಮತ್ತಿಘಟ್ಟ ಶಾಖೆ ಹಾಗೂ ಆರ್ಥಿಕ ಸಾಕ್ಷರತಾ ಕೇಂದ್ರ ಚಿಕ್ಕನಾಯಕನಹಳ್ಳಿ ‌ ಇವರ ಜಂಟಿ ಆಶ್ರಯದಲ್ಲಿ  ಮತ್ತಿಘಟ್ಟ ಗ್ರಾಮ ಪಂಚಾಯಿತಿ  ವ್ಯಾಪ್ತಿಯಲ್ಲಿ ಬರುವ ಎಳ್ಳೇನಹಳ್ಳಿ ಗ್ರಾಮದಲ್ಲಿ ಏರ್ಪಡಿಸಿದ್ದ ವಿಕಸಿತ್ ಭಾರತ್ ಸಂಪರ್ಕ ಅಭಿಯಾನ  ಕಾರ್ಯಾಗಾರ ಉದ್ಘಾಟಿಸಿ    ಮಾತನಾಡಿದ ಅವರು ವಿಕಸಿತ್ ಭಾರತ್ ಸಂಪರ್ಕ  ಯಾತ್ರೆ ಅಂಗವಾಗಿ ಕೇಂದ್ರ ಸರ್ಕಾರವು ನಿರ್ದೇಶಕ ವಾಹನಗಳ ಮೂಲಕ ಸರ್ಕಾರದ ಅನೇಕ ಯೋಜನೆಗಳ ಪ್ರಯೋಜನಗಳನ್ನು ಜನರಿಗೆ, ಅದರಲ್ಲೂ ಗ್ರಾಮೀಣ ಭಾಗದವರಿಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಜನವರಿ 26-1- 2024  ರವರೆಗೆ ಹಮ್ಮಿಕೊಳ್ಳಲಾಗಿದೆ ಎಂಬ ಮಾಹಿತಿ ನೀಡಿದರು.  ಮತ್ತಿಘಟ್ಟ ಕರ್ನಾಟಕ ಗ್ರಾಮೀಣ ಬ್ಯಾಂಕಿನ ವ್ಯವಸ್ಥಾಪಕರಾದ  G.S.ಶ್ರೀ ಹರ್ಷ   ಮಾತನಾಡಿ ನಮ್ಮ ಬ್ಯಾಂಕು 25,000/-ಗಳವರೆಗೆ ಕಾಗದ ರಹಿತವಾಗಿ  ವ್ಯವಹಾರ ಮಾಡುವ ಸೌಲಭ್ಯ ಹೊಂದಿದೆ, ಅಲ್ಲದೆ ನಮ್ಮ ಬ್ಯಾಂಕು ರೂ300000/- ವರೆಗೆಕಡಿಮೆ ಬಡ್ಡಿ ದರದಲ್ಲಿ ಕಿಸಾನ್ ಕ್ರೆಡಿಟ್ ಸಾಲವನ್ನು ನೀಡುತ್ತದೆ

ಧೀಮಂತ ಸಾಹಿತಿಯಾದ ತೀನಂಶ್ರೀ ಅವರ ಜಯಂತಿಯನ್ನು ತಾಲೂಕು ಆಡಳಿತದಿಂದ ಪ್ರತಿ ವರ್ಷ ಆಚರಿಸುವಂತೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌, ಹುಳಿಯಾರು ಘಟಕದಿಂದ ಒತ್ತಾಯ

ಹುಳಿಯಾರು :ನಾಲ್ವಡಿ ಕೃಷ್ಣರಾಜ ಒಡೆಯರ್‌ರವರಿಂದ ಆರು ಚಿನ್ನದ ಪದಕ ಪಡೆದು ಕನ್ನಡ ನಾಡು ನುಡಿಯನ್ನು ಶ್ರೀಮಂತಗೊಳಿಸಿದಂತಹ ಧೀಮಂತ ಸಾಹಿತಿ ತೀ.ನಂ.ಶ್ರೀಕಂಠಯ್ಯನವರು ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹೆಮ್ಮೆಯಾಗಿದ್ದು , ತೀನಂಶ್ರೀ ಅವರ ಜಯಂತಿಯನ್ನು ತಾಲೂಕು ಆಡಳಿತದಿಂದ ಪ್ರತಿ ವರ್ಷ ಆಚರಿಸುವಂತೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ಒತ್ತಾಯಿಸಿದೆ.           ತಾಲ್ಲೂಕನ್ನು ವಿಶ್ವವ್ಯಾಪಿಯಾಗಿ ಬೆಳಗಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ, ಆದರೆ ತಾಲ್ಲೂಕು ಆಡಳಿತ ಅವರ ಸಾಧನೆಯನ್ನು ನೆನಪು ಮಾಡಿಕೊಳ್ಳದೆ ಅವರ ಜನ್ಮದಿನದಂದು ಅಂತಹ ಧೀಮಂತ ಸಾಹಿತಿಯವರನ್ನು ಮರೆತಿರುವುದು ಬೇಸರದ ಸಂಗತಿಯಾಗಿದೆ. ತಾಲ್ಲೂಕಿನ ಕಂದಿಕೆರೆ ಹೋಬಳಿ, ತೀರ್ಥಪುರದಲ್ಲಿ 1906 ರ ನವಂಬರ್ 26 ರಂದು ಜನಿಸಿದ್ದು, ಸದರಿ ತಾಲ್ಲೂಕಿನ ಸರ್ಕಾರಿ ಕಛೇರಿಗಳು ಹಾಗೂ ಶಾಲಾ ಕಾಲೇಜುಗಳಲ್ಲಿ ಸದರಿ ಸಾಹಿತಿಯವರನ್ನು ನೆನಪಿಸುವಂತ ಕಾರ್ಯವನ್ನು ಮಾಡಿ ಪ್ರತಿ ವರ್ಷ ಅವರ ಜನ್ಮದಿನದಂದು ತೀನಂಶ್ರೀರವರ ಜನ್ಮ ದಿನವನ್ನು ಸ್ಮರಿಸಬೇಕು ಎಂದು ಎಬಿವಿಪಿ ಒತ್ತಾಯಿಸಿದೆ 2005-06 ರಲ್ಲಿ ನಡೆದ ತೀನಂಶ್ರೀ ಶತಮಾನೋತ್ಸವ ಸಂದರ್ಭದಲ್ಲಿ  ನಿರ್ಮಿಸಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ತೀನಂಶ್ರೀ ರವರ ಹೆಸರನ್ನು ಇಡಲು ನಿರ್ಲಕ್ಷಿಸಲಾಗಿದೆ. ಸದರಿ ಗ್ರಾಮದಲ್ಲಿ ತೀನಂಶ್ರೀ ಭವನ ನಿರ್ಮಿಸಲು ನಿವೇಶನ ನೀಡಿದರೂ ಇದುವರೆವಿಗೂ ಯಾವ ಕಾಮಗಾರಿಯೂ ಸಹ ನಡೆದಿಲ್ಲ. ಆದ್ದರ

ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಪ್ರೊ. ಕೃಷ್ಣಾಬಾಯಿ ಹಾಗಲವಾಡಿ

ದಿನಾಂಕ 18 &1 9 ಜನವರಿ 2024 ರಂದು ಹುಳಿಯಾರಿನ ಎಂ ಪಿ ಎಸ್ ಶಾಲಾ ಮೈದಾನದಲ್ಲಿ ಆಯೋಜಿಸಿರುವ 11ನೇ ಚಿಕ್ಕನಾಯಕನಹಳ್ಳಿ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸಂಬಂಧವಾಗಿ ಹುಳಿಯಾರಿನಲ್ಲಿ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ತಾಲ್ಲೂಕು ಕಸಾಪ ಅಧ್ಯಕ್ಷರಾದ ಎಂ.ಎಸ್.ರವಿಕುಮಾರ್ ಕಟ್ಟೆಮನೆಯವರು ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಪ್ರೊಫೆಸರ್ ಕೃಷ್ಣಾಬಾಯಿ ಹಾಗಲವಾಡಿ ಅವರನ್ನು ಜಿಲ್ಲಾ ಕಸಾಪ  ಅಧ್ಯಕ್ಷರಾದ ಕೆ.ಎಸ್.ಸಿದ್ದಲಿಂಗಯ್ಯನವರ ಸೂಚನೆಯ ಮೇರೆಗೆ ಘೋಷಿಸಿದರು.                 ಸಮ್ಮೇಳನದ ಉದ್ಘಾಟನೆಗೆ ಅರುಂಧತಿನಾಗ್,ಡಾ. ಕಮಲ ಹಂಪನಾ ಇವರಲ್ಲಿ ಒಬ್ಬರನ್ನು ಆಹ್ವಾನಿಸಲು ಉದ್ದೇಶಿಸಲಾಗಿದೆ, ಹಾಗೆಯೇ ಸಮ್ಮೇಳನದ ಪೂರ್ಣವಲೋಕನ ಹಾಗು ಸಮಾರೋಪಕ್ಕೆ ಪ್ರೊ ಎಸ್.ಜಿ. ಸಿದ್ದರಾಮಯ್ಯ, ಡಾ.ನಟರಾಜ್ ಹುಳಿಯಾರ್ ಅವರನ್ನು ಆಮಂತ್ರಿಸಲಾಗುವುದು ಎಂದು ತಿಳಿಸಿದರು.   ಸಮ್ಮೇಳನದ ರೂಪರೇಶೆಯ ಬಗ್ಗೆ ವಿವರಿಸಿದ ತಾಲ್ಲೂಕು ಕಸಾಪ ಗೌರವ ಸಂಘಟನಾ ಕಾರ್ಯದರ್ಶಿ ಹಾಗು ಸಮ್ಮೇಳನಗಳ ವಿಷಯ ರೂಪಣಾ ಸಮಿತಿ ಪ್ರಧಾನ ಸಂಚಾಲಕರಾದ ಸಿ ಗುರುಮೂರ್ತಿ ಕೊಟ್ಟಿಗೆಮನೆಯವರು   ಇಡೀ ಸಮ್ಮೇಳನವು 'ಹಳ್ಳಿಕೇರಿ - ದೇಸಿ ಸಂಸ್ಕೃತಿ' ಆಶಯವನ್ನು ಹೊಂದಿ ಆಯೋಜಿಸಲಾಗಿದೆ ಎಂದು ತಿಳಿಸಿದರು. ಕಲೆ ಸಾಹಿತ್ಯ, ಹಳ್ಳಿ-ಕೇರಿ- ಕುಲಕಸುಬು, ಬೇಸಾಯ ಬದುಕು, ಹುಳಿಯಾರಿನ ಸಮಗ್ರತೆ, ಎಂಬ ವಿಷಯಗಳನ್ನು ಆಧರಿಸಿ ನಾಲ್ಕು ಗೋಷ್ಠಿಗಳು. ಅಸಂಘ

ಹುಳಿಯಾರಿನ ಬಿ.ಎಂ.ಎಸ್. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2023-24ನೆಯ ಸಾಲಿನ ಶೈಕ್ಷಣಿಕ ವರ್ಷದ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳ ಉದ್ಘಾಟನೆ ಮತ್ತು ಪ್ರತಿಭಾ ದಿನ ಆಚರಣೆ

ಹುಳಿಯಾರಿನ ಬಿ.ಎಂ.ಎಸ್. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ   2023-24ನೆಯ ಸಾಲಿನ ಶೈಕ್ಷಣಿಕ ವರ್ಷದ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಮತ್ತು ಪ್ರತಿಭಾ ದಿನವನ್ನು ಹಮ್ಮಿಕೊಳ್ಳಲಾಗಿತ್ತು.  ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ತಿಪಟೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಹೆಚ್.ಬಿ. ಕುಮಾರಸ್ವಾಮಿ ಅವರು  ಅಸತೋಮ ಸದ್ಗಮಯ ತಮಸೋಮ ಜೋತಿರ್ಗಮಯ ಎಂಬ ಮಾತಿನಂತೆ ಇಂದಿನ ಸಮಾರಂಭದಲ್ಲಿ ದೀಪ ಬೆಳಗುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದ್ದೇವೆ. ಅದೇ ರೀತಿ ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲೂ ಬೆಳಕಿನೆಡೆಗೆ ಸಾಗಬೇಕು. ಬೇರೆಯವರ ಬದುಕಿನಲ್ಲೂ ಅಷ್ಟೇ ನಾವು ಬೆಳಕಾಗಿರಬೇಕೇ ಹೊರತು ನಮ್ಮಿಂದ ಯಾರಿಗೂ ತೊಂದರೆಯಾಗಬಾರದು ಎಂದು ಕಿವಿಮಾತು ಹೇಳಿದರು.                                ಓದು ಬರಹದ ಜೊತೆಗೆ ಕಾಲೇಜಿನಲ್ಲಿ ನಡೆಯುವ ಪಠ್ಯಪೂರಕ ಅಂಶಗಳಾದ ಎನ್.ಎಸ್.ಎಸ್., ಸ್ಕೌಟ್ಸ್ ಮತ್ತು ಗೈಡ್ಸ್, ರೆಡ್ ಕ್ರಾಸ್, ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ಪರಿಪೂರ್ಣ ವ್ಯಕ್ತಿತ್ವವನ್ನು‌ ನಿಮ್ಮದಾಗಿಸಿಕೊಳ್ಳಬಹುದು, ಜೊತೆಗೆ ಬದುಕಿನಲ್ಲಿ ನೈತಿಕ ಮೌಲ್ಯಗಳನ್ನೂ ಅಳವಡಿಸಿಕೊಳ್ಳುವುದು ಬಹಳಮುಖ್ಯ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ವೀರಣ್ಣ ಎಸ್.ಸಿ.