ಹುಳಿಯಾರು ಗ್ರಾಮದೇವತೆ ಶ್ರೀ ಹುಳಿಯಾರಮ್ಮನವರ ಹತ್ತನೇ ವರ್ಷದ ಜಾತ್ರಾ ಮಹೋತ್ಸವ ಜ.28 ರ ಶನಿವಾರದಿಂದ ಫೆ.5 ರ ಭಾನುವಾರದವರೆಗೆ ಹಮ್ಮಿಕೊಳ್ಳಲಾಗಿದೆ. ಜ.28 ಹಾಗೂ 29 ರಂದು ಕೋಡಿಪಾಳ್ಯ,ಲಿಂಗಪ್ಪನಪಾಳ್ಯ,ಕಾಮಶೆಟ್ಟಿಪಾಳ್ಯ ,ಸೋಮಜ್ಜನಪಾಳ್ಯದಲ್ಲಿ ಮಡಿಲಕ್ಕಿ ಸೇವೆ ನಡೆಯಲಿದೆ. ಜ.30 ರಂದು ಧ್ವಜಾರೋಹಣ, ಅಂಕುರಾರ್ಪಣೆ ಹಾಗೂ ಅಮ್ಮನವರ ಮಧುವಣಗಿತ್ತಿ ಸೇವೆ ನಡೆಯಲಿದೆ. ಜ.31 ರಂದು ಆರತಿ ಬಾನ ಹಾಗೂ ಎಡೆ ಸೇವೆ ನಡೆಯಲಿದೆ. ಫೆ.1 ರಂದು ಹುಳಿಯಾರು ಗ್ರಾಮದೇವತೆ ದುರ್ಗಮ್ಮ, ಕೆಂಚಮ್ಮದೇವಿ, ಕೆಂಕೆರೆ ಗೊಲ್ಲರಹಟ್ಟಿ ಕರಿಯಮ್ಮ ದೇವಿ,ಗೌಡಗೆರೆ ದುರ್ಗಮ್ಮ ಹಾಗೂ ದೊಡ್ಡಬಿದರೆ ಕರಿಯಮ್ಮ ದೇವರುಗಳ ಆಗಮನ ಹಾಗೂ ಕೂಡು ಭೇಟಿ ಕಾರ್ಯ ನಡೆಯಲಿದೆ. ಸಂಜೆ ದೂತರಾಯನ ಕುಣಿತ ನಡೆಯಲಿದೆ. ಫೆ.2 ರ ಗುರುವಾರದಂದು ಬೆಳಗ್ಗೆ 8.30 ಕ್ಕೆ ಕಳಸ ಮಹೋತ್ಸವ ಹಾಗೂ ಅನ್ನಸಂತರ್ಪಣೆ ,ಫೆ.3 ರ ಶುಕ್ರವಾರದಂದು ಗಣಪತಿ ಹಾಗೂ ಅಷ್ಟಲಕ್ಷ್ಮಿ ಹೋಮ ನಡೆದು ಫೆ.4 ರ ಶನಿವಾರ ಕಂಕಣವಿಸರ್ಜನೆ ,ಓಕಳಿ ಮತ್ತು ಫೆ.5 ರಂದು ಮಡಿಲಕ್ಕಿ ಸೇವೆಯೊಂದಿಗೆ ಜಾತ್ರೆಗೆ ತೆರೆ ಬೀಳಲಿದೆ. ಈ ಬಾರಿ ಕೆರೆಬಾವಿ ಮುಳುಗಡೆ ಆಗಿರುವುದರಿಂದ ಕಳಸದ ದಿನದಂದು ಹುಳಿಯಾರಮ್ಮನವರ ಮೂಲಸ್ಥಾನದಲ್ಲಿ ಕಳಸ ಸ್ಥಾಪಿಸಿ ನಂತರ 8:30 ರಿಂದ ಕಳಸದ ನಡೆಮುಡಿಯೊಂದಿಗೆ ಸನ್ನಿಧಾನಕ್ಕೆ ಕಳಸಗಳ ಆಗಮನವಾಗುವುದು. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಜಾತ...
📰 ಹುಳಿಯಾರು ಸೇರಿದಂತೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಸ್ಥಳಿಯ ಸುದ್ದಿ ಸಮಾಚಾರದ ಬ್ಲಾಗ್........ ✍️ನರೇಂದ್ರಬಾಬು ಹುಳಿಯಾರು-📞9448760070