ಹುಳಿಯಾರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆಯ ವತಿಯಿಂದ ಹುಳಿಯಾರು ಹೋಬಳಿಯ ಗಾಣಧಾಳು ವಲಯದ ಹೊಯ್ಸಳಕಟ್ಟೆ ಕಾರ್ಯಕ್ಷೇತ್ರ ಬೋರನಕಣಿವೆ ಪದವಿ ಪೂರ್ವ ಕಾಲೇಜಿನ SSLC ವಿದ್ಯಾರ್ಥಿಗಳಿಗೆ ಟ್ಯೂಷನ್ ಮೂಲಕ ತರಬೇತಿ ಹಮ್ಮಿಕೊಂಡಿದ್ದು , ತಾಲೂಕು ಯೋಜನಾಧಿಕಾರಿಗಳಾದ ಪ್ರೇಮಾನಂದ ಯಲ್. ಬಿ. ಯವರು ಗಿಡಕ್ಕೆ ನೀರು ಉಣಿಸುವ ಮೂಲಕ ಚಾಲನೆ ನೀಡಿದರು.
ಕಾರ್ಯಕ್ರಮದ ಬಗ್ಗೆ ಸವಿಸ್ತಾರ ಮಾಹಿತಿ ನೀಡಿ ಮಾತನಾಡಿದ ತಾಲೂಕು ಯೋಜನಾಧಿಕಾರಿ ಪ್ರೇಮಾನಂದ್ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಈ ಯೋಜನೆಯನ್ನು ಸದ್ಬಳಕೆ ಮಾಡಿಕೊಂಡು ಎಸ್ಸೆಸೆಲ್ಸಿಯಲ್ಲಿ ಹೆಚ್ಚಿನ ಅಂಕಗಳಿಸಿ ಉನ್ನತ ದರ್ಜೆಯಲ್ಲಿ ತೇರ್ಗಡೆಯಾಗುವುದರ ಮೂಲಕ ಶಾಲೆಗೆ ಹಾಗೂ ಸಂಸ್ಥೆಗೆ ಹೆಸರು ತರುವಂತೆ ಮನವಿ ಮಾಡಿದರು.
ಪತ್ರಕರ್ತರಾದ ಲ.ಪು. ಕರಿಯಪ್ಪರವರು ಕಾರ್ಯಕ್ರಮಕ್ಕೆ ಶುಭ ಕೋರಿದರು.ಅಧ್ಯಕ್ಷತೆ ವಹಿಸಿದ್ದ ಮುಖ್ಯ ಶಿಕ್ಷಕರಾದ ರಮೇಶ್ ರವರು ಈ ಟ್ಯೂಷನ್ ನಲ್ಲಿ ಮಕ್ಕಳ ಪಾತ್ರದ ಬಗ್ಗೆ ತಿಳಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಸಹ ಶಿಕ್ಷಕರು, ವಲಯದ ಮೇಲ್ವಿಚಾರಕರಾದ ನರಸಿಂಹ ರಾಜು,ಸೇವಾಪ್ರತಿನಿಧಿ ನಾಗರಾಜ್ ಹಾಗು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ