ನಾಡು ಕಂಡ ಅಪರೂಪದ ತತ್ವಜ್ಞಾನಿ,ಭಕ್ತರ ಪಾಲಿನ ನಡೆದಾಡವ ದೇವರು ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರಿಗೆ ಹುಳಿಯಾರಿನಲ್ಲಿ ಮಂಗಳವಾರ ಶ್ರದ್ಧಾಂಜಲಿ ಅರ್ಪಿಸಲಾಯಿತು
ಹುಳಿಯರಿನ ಟೌನ್ ಕೋ ಆಪರೇಟಿವ್ ಬ್ಯಾಂಕ್ ಸರ್ಕಲ್ ನಲ್ಲಿ ಶ್ರೀಗಳ ಭಕ್ತಗಣ ಅಗಲಿದ ಸ್ವಾಮೀಜಿಗಳಿಗೆ ಭಕ್ತಿ ಪ್ರಣವಾಂಜಲಿ ಅರ್ಪಿಸಿದರು.ಶ್ರೀಗಳು ಅತ್ಯಂತ ಸರಳಭಾಷೆಯಲ್ಲಿ ಶ್ರೀಸಾಮಾನ್ಯರಿಗೆ ತಮ್ಮ ಪ್ರವಚನ ಮೂಲಕ ಜ್ಞಾನಾರ್ಜನೆಯನ್ನು ಎರೆದು, ಅವರ ಹೃದಯದೊಳಗೆ ಸ್ಥಾಪಿತರಾಗಿದ್ದ, ಪ್ರವಚನ ಸಂತ ಎಂದೇ ಖ್ಯಾತರಾಗಿದ್ದ ಸಿದ್ದೇಶ್ವರ ಶ್ರೀಗಳು ಸರಳ ಸಜ್ಜನಿಕೆಯನ್ನು ಮೈಗೂಡಿಸಿಕೊಂಡು ಬಾಳಿ ಬದುಕಿ,ತಮ್ಮ ಸರಳತೆಯ ಮೂಲಕವೇ ಆದರ್ಶಪ್ರಾಯರಾಗಿದ್ದರು, ಅವರು ಕರ್ನಾಟಕದ ಅಮೂಲ್ಯ ರತ್ನ ಎಂದು ಎಂದು ಭಕ್ತರು ಭಾವುಕರಾಗಿ ನುಡಿದರು.ಈ ಸಂದರ್ಭದಲ್ಲಿ ಹಿರಿಯರಾದ ಈಶ್ವರಪ್ಪ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಚಾಲಕ ಭರತ್ ಹುಳಿಯಾರು,ಬ್ಯಾಂಕ್ ಶ್ರೀಧರ್,ಗಂಗಣ್ಣ, ಎಲ್ಐಸಿ ಚಂದ್ರಪ್ಪ, ಕೈಲಾಸ್ ಮೂರ್ತಿ, ಕರುಣಾಕರ್, ಸಜ್ಜಾದ್, ಬಸವರಾಜು ಮತ್ತಿತರರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ