ವಿಷಯಕ್ಕೆ ಹೋಗಿ

ನಾಳೆ ಹುಳಿಯಾರಿನ ಶ್ರೀ ಬನಶಂಕರಿ ದೇವಾಲಯದಲ್ಲಿ ಬನಹಣ್ಣಿಮೆ ಹಾಗೂ ಶ್ರೀ ಬನಶಂಕರಿ ಕಲ್ಯಾಣ ಮಂಟಪದ ಉದ್ಘಾಟನೆ ಹಮ್ಮಿಕೊಳ್ಳಲಾಗಿದೆ

ಹುಳಿಯಾರಿನ ಶ್ರೀ ಬನಶಂಕರಿ ದೇವಾಲಯದಲ್ಲಿ ನಾಳೆ ಶುಕ್ರವಾರ ಜನವರಿ 6ನೇ ತಾರೀಖು ಬನದಹುಣ್ಣಿಮೆ ಕಾರ್ಯಕ್ರಮ ಹಾಗೂ ಶ್ರೀ ಬನಶಂಕರಿ ಕಲ್ಯಾಣ ಮಂಟಪದ ಉದ್ಘಾಟನೆ ಹಮ್ಮಿಕೊಳ್ಳಲಾಗಿದೆ.
ಇಂದು ಜ.5ರ ಗುರುವಾರ ಸಂಜೆ ಬನಶಂಕರಿ ಅಮ್ಮನವರ ಗಂಗಾಭಾಗಿರತಿ ಪೂಜೆ, ನಂತರ ಗಣಪತಿ ಹೋಮ ,ವಾಸ್ತು ಹೋಮ,ಮಹಾಲಕ್ಷ್ಮಿ ಹೋಮ, ಪೂರ್ಣಾಹುತಿ, ಮಹಾ ಮಂಗಳಾರತಿ ,ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ.ನಾಳೆ ಮುಂಜಾನೆ ಬನಶಂಕರಿ ಅಮ್ಮನವರಿಗೆ ವಿಶೇಷ ಅಲಂಕಾರ 10 ಗಂಟೆಗೆ ಮಡ್ಲಕ್ಕಿ ಸೇವೆ, 11:00 ಗಂಟೆಯಿಂದ ಧಾರ್ಮಿಕ ಸಭೆ ನಡೆಯಲಿದೆ. ಸಂಜೆ ಅಮ್ಮನವರ ಉಯ್ಯಾಲೋತ್ಸವ ನಡೆಯಲಿದೆ.

ಕಾಮೆಂಟ್‌ಗಳು