ಇದೇ ತಿಂಗಳ 24ರಂದು ತುಮಕೂರಿನಲ್ಲಿ ಪ್ರಜಾಧ್ವನಿ ಯಾತ್ರೆಯ ಬಹಿರಂಗ ಸಭೆ ನಡೆಯಲಿದ್ದು ಕಾರ್ಯಕರ್ತರು,ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಬೇಕು. ಈ ಮೂಲಕ ರಾಜ್ಯದಲ್ಲಿ ಉತ್ತಮ ಆಡಳಿತ ನಡೆಸಲು ಸಂಪೂರ್ಣ ವಿಫಲವಾಗಿರುವ , ಜನರ ಹಿತವನ್ನು ಮರೆತು ಸಂಪೂರ್ಣ ಭ್ರಷ್ಟಾಚಾರದಲ್ಲಿ ಮುಳುಗಿರುವ, ನಿರಂತರ ಬೆಲೆ ಏರಿಕೆ ಮುಖಾಂತರ ದುರಾಡಳಿತದಲ್ಲಿ ತೊಡಗಿರುವ ಬಿಜೆಪಿ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸ ಮಾಡಬೇಕೆಂದು ಕೆಪಿಸಿಸಿ ಸದಸ್ಯ ಹಾಗೂ ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ತುಮಕೂರಿನ ಹೆಸರಾಂತ ವೈದ್ಯರಾದ ಡಾ|| ಪರಮೇಶ್ವರಪ್ಪ ಮನವಿ ಮಾಡಿದ್ದಾರೆ.
⬆️ಪ್ರಜಾಧ್ವನಿ ಯಾತ್ರೆಯ ಬಗ್ಗೆ ಡಾ|| ಪರಮೇಶ್ವರಪ್ಪ ಮಾತನಾಡಿದ್ದರ ಬಗ್ಗೆ ವಿಡೀಯೋ ವೀಕ್ಷಿಸಿ
ಹುಳಿಯಾರಿನಲ್ಲಿ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷೆಗಳಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಬಿಜೆಪಿ ಸರ್ಕಾರದ ವೈಫಲ್ಯವನ್ನು ಖಂಡಿಸಲು, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಬಿಜೆಪಿ ಸರ್ಕಾರ ಆಡಳಿತ ನಡೆಸಲು ಸಂಪೂರ್ಣ ವಿಫಲವಾಗಿರುವ ಬಗ್ಗೆ ಜನರಿಗೆ ತಿಳಿ ಹೇಳಲು, ಜನರ ಹಿತಕ್ಕಾಗಿ ಕಾಂಗ್ರೆಸ್ ಪಕ್ಷವನ್ನು ಪುನಃ ಅಧಿಕಾರಕ್ಕೆ ತರಲು ಪ್ರಜಾಧ್ವನಿ ಯಾತ್ರೆ ಮಹತ್ವದ್ದಾಗಿದ್ದು, ಡಿಕೆ ಶಿವಕುಮಾರ್ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಅನೇಕ ಕಾಂಗ್ರೆಸ್ ನಾಯಕರು ಆಗಮಿಸುತ್ತಿರುವ ಈ ಸಭೆಗೆ ಕ್ಷೇತ್ರದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಲಕ್ಕಪ್ಪ,ಕೆಪಿಸಿಸಿ ಸದಸ್ಯ ಹಾಗೂ ಜಿಪಂ.ಮಾಜಿ ಸದಸ್ಯ ವೈಸಿ ಸಿದ್ದರಾಮಯ್ಯ, ಟಿಕೆಟ್ ಆಕಾಂಕ್ಷಿಗಳಾದ ಜಗದೀಶ್,ಡಾ.ವನಿತಾ ಹಾಗೂ ಪಪಂ.ಸದಸ್ಯರಾದ ದಸ್ತಗೀರ್ ಸಾಬ್,ಸಿದ್ದಿಕ್,ಜುಬೇರ್,ಮುಖಂಡರಾದ ಪ್ರಸನ್ನಕುಮಾರ್,ಎ.ಟಿ.ಎನ್ ಮಂಜುನಾಥ್ ಸೇರಿದಂತೆ ಕಾರ್ಯಕರ್ತರು ಹಾಜರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ