ಹುಳಿಯಾರು: ಕೆಂಕೆರೆ ಗ್ರಾಮ ಪಂಚಾಯತ್ ವತಿಯಿಂದ ಗೌಡಗೆರೆ ದುರ್ಗಮ್ಮನ ದೇವಸ್ಥಾನ ಮುಂಭಾಗ ಆವರಣದಲ್ಲಿ ಪಂಚಾಯತಿ ವತಿಯಿಂದ ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿತ್ತು.
ಸ್ಪರ್ಧೆಯಲ್ಲಿ ಕೆಂಕೆರೆ,ಗೌಡಗೆರೆ ,ಕೆ ಸಿ ಪಾಳ್ಯ ಮಹಿಳೆಯರು ಹಾಜರಿದ್ದರು.
ಪ್ರಥಮ ಬಹುಮಾನ ಗೌಡಗೆರೆ ಲಕ್ಷ್ಮೀದೇವಮ್ಮ, ದ್ವಿತೀಯ ಬಹುಮಾನ ಲಕ್ಷ್ಮೀದೇವಿ ,ಸಮಾಧಾನಕರ ಬಹುಮಾನವನ್ನು ಜಯಲಕ್ಷ್ಮಿ, ರಂಜಿತಾ, ಪಾರ್ವತಮ್ಮ,ನಾಗವೇಣಿ, ಪುಟ್ಟಮ್ಮ ಇವರು ಪಡೆದುಕೊಂಡರು.
ಅಭಿವೃದ್ಧಿ ಅಧಿಕಾರಿ ಎಮ್ ರಮೇಶ್, ಇಂದ್ರಾಣಿ, ಬಿಲ್ ಕಲೆಕ್ಟರ್ ಜಯಣ್ಣ,ವಾಟರ್ ಮ್ಯಾನ್ ಗಳು, ಸಿಬ್ಬಂದಿ ವರ್ಗ ಗ್ರಾಪಂ ಸದಸ್ಯರಾದ ಶೇಕ್ ಗೌಸ್ ಪೀರ್,ಕೆ.ಬಿ.ಮಹಾಲಕ್ಷ್ಮಿ,ಶಾಲಾ ಶಿಕ್ಷಕರಾದ ವರದಪ್ಪ, ಲಾಪು ಕರಿಯಪ್ಪ ,ಓಂಕಾರ್, ಸಂಜೀವಿನಿ ಸಂಘದ ಪದಾಧಿಕಾರಿಗಳಾದ ಎಂಬಿಕೆ ಗಾಯಿತ್ರಿ, ಎಲ್ ಸಿ ಆರ್ ಪಿ ಶಾರದಮ್ಮ ,ಲಕ್ಷ್ಮೀದೇವಿ,ಪಶು ಸಖಿ ಜಯಲಕ್ಷ್ಮಿ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ