ಭಾರತ ದೇಶ ಕಂಡ ಅಪ್ರತಿಮ ದೇಶಭಕ್ತ ,ವೀರ ಸೇನಾನಿ ನೇತಾಜಿ ಸುಭಾಷ್ ಚಂದ್ರ ಬೋಸ್ ಜನ್ಮದಿನವನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಹುಳಿಯಾರು ವತಿಯಿಂದ ಹುಳಿಯಾರು- ಕೆಂಕೆರೆಯ ಬಿಎಂಎಸ್ ಪ್ರಥಮ ದರ್ಜೆ ಕಾಲೇಜು ಹಾಗೂ ಜಿಪಿಯುಸಿಯ ವಿದ್ಯಾರ್ಥಿಗಳೊಂದಿಗೆ ಆಚರಿಸಲಾಯಿತು.
ನೇತಾಜಿ ಜನ್ಮದಿನವನ್ನು ಪರಾಕ್ರಮ್ ದಿವಸಾಗಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಹುಳಿಯಾರು ವಿದ್ಯಾರ್ಥಿಗಳು ಸೇರಿ ಸುಭಾಷ್ ಚಂದ್ರ ಬೋಸ್ ಅವರ ಫೋಟೋಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ *ರಾಷ್ಟ್ರೀಯತೆಯ ವಿಚಾರ ಬಂದಾಗ ಎಲ್ಲವನ್ನು ಮರೆತು ಒಗ್ಗೂಡಬೇಕೆಂಬ* ಸಂಕಲ್ಪ ಮಾಡುವ ಮೂಲಕ ಅರ್ಥಪೂರ್ಣವಾದ ಕಾರ್ಯಕ್ರಮವನ್ನು ಮಾಡಲಾಯಿತು.
ಉಪನ್ಯಾಸಕರಾದ ನರೇಂದ್ರಬಾಬು ಮಾತನಾಡಿ ಭಾರತದ ಸ್ವಾತಂತ್ರ್ಯ ಹೋರಾಟಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿದ ಪ್ರಮುಖ ಕ್ರಾಂತಿಕಾರಿ ಹೋರಾಟಗಾರರಾಗಿದ್ದ ನೇತಾಜಿ ಅವರ ತ್ಯಾಗ, ನಿಷ್ಠೆ ಎಂದಿಗೂ ಸ್ಮರಣೀಯ. ಅವರ ಜೀವನ, ಕಾರ್ಯವೈಖರಿ, ಅವರು ಕೈಗೊಳ್ಳುತ್ತಿದ್ದ ನಿರ್ಧಾರಗಳು ಸದಾ ಪ್ರೇರಣದಾಯಕ. ಅವರ ತ್ಯಾಗವನ್ನು ಮುಂದಿನ ಪೀಳಿಗೆಗೆ ತಲುಪಿಸುವ ಉದ್ದೇಶದಿಂದ ಸರ್ಕಾರ ನೇತಾಜಿ ಜನ್ಮದಿನವನ್ನು ಪರಾಕ್ರಮ ದಿನವನ್ನಾಗಿ ಆಚರಿಸುತ್ತಿದೆ ಎಂದರು.
ಕ್ರಾಂತಿಕಾರಿ ಹೋರಾಟಗಾರ ನೇತಾಜಿ: ಭಾರತದ ಕ್ರಾಂತಿಕಾರಿ ಹೋರಾಟಗಾರರಲ್ಲಿ ಪ್ರಮುಖರಾಗಿದ್ದ, ರಾಷ್ಟ್ರಪುರುಷ , ಅಪ್ರತಿಮ ಸ್ವತಂತ್ರ ಹೋರಾಟಗಾರ , ಬ್ರಿಟಿಷರಿಗೆ ಸಿಂಹ ಸ್ವಪ್ನವಾಗಿ ಕಾಡಿದ , ಸ್ವತಂತ್ರ ಭಾರತವನ್ನು ಕಟ್ಟಬೇಕೆಂದು ದೇಶದ ಒಳಗಷ್ಟೇ ಅಲ್ಲದೆ ದೇಶದ ಹೊರಗೆ ಹಲವು ರಾಷ್ಟ್ರಗಳ ಸಹಾಯವನ್ನು ಪಡೆದು ಭಾರತೀಯ ರಾಷ್ಟ್ರೀಯ ಸೇನೆ( INA )Indian National Army ಸಂಘಟನೆಯನ್ನು ಕಟ್ಟಿ ಬ್ರಿಟಿಷರನ್ನು ಭಾರತದಿಂದ ಓಡಿಸುವುದು ಅಷ್ಟೇ ಅಲ್ಲದೆ ರಾಜಕೀಯವಾಗಿ ಸಾಮಾಜಿಕವಾಗಿ ಆರ್ಥಿಕವಾಗಿ ಸುಸಜ್ಜಿತ ರಾಷ್ಟ್ರವನ್ನಾಗಿ ಮಾಡಬೇಕೆಂದು ಕನಸನ್ನು ಕಟ್ಟಿದ್ದ ಸುಭಾಷ್ ಚಂದ್ರ ಬೋಸರು ಭಾರತದ ಯುವಕರಲ್ಲಿ "ನನಗೆ ನೀವು ರಕ್ತವನ್ನು ನೀಡಿ, ನಾನು ನಿಮಗೆ ಸ್ವಾತಂತ್ರ್ಯವನ್ನು ನೀಡುತ್ತೇನೆ' ಎಂಬ ಘೋಷ ವಾಕ್ಯದ ಮುಖಾಂತರ ಸ್ವಾತಂತ್ರ ಹೋರಾಟದಲ್ಲಿ ಸಾವಿರಾರು ಜನ ಯುವಕರು ದೇಶದ ಸ್ವತಂತ್ರಕ್ಕೋಸ್ಕರ ದುಡಿಯುವಂತೆ ಪ್ರೇರೇಪಿಸಿದ ಮಹಾತ್ಮರು....!!!!
ಈ ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕರು,ಎಬಿವಿಪಿ ಕಾರ್ಯಕರ್ತರಾದ ರಾಕೇಶ್ ಕೆಂಕೆರೆ, ಹರೀಶ್ ಎಸ್.ಎನ್ ಮತ್ತು ಗಿರೀಶ್, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ತಾಲೂಕು ಸಂಚಾಲಕ್ ಎಚ್, ಆರ್. ಗುರುಪ್ರಸಾದ್ , ಮಾಧ್ಯಮ ಪ್ರಮುಖ್ ದೀಪಕ್.ಕೆ,ನಗರ ಕಾರ್ಯದರ್ಶಿಯಾದ ಕಿರಣ್ ಎಂ.ಆರ್, ಮಾರುತಿ ಪಿ.ಎಸ್,ಅಭಿಲಾಶ್, ಪ್ರಕಾಶ್,ಸಿದ್ದೇಶ್ ವೈ.ಕೆ, ನಂದನ್,ತರುಣ್,ಮಲ್ಲಿಕಾರ್ಜುನ್, ಪವನ್ ,ಮಣಿ,ನಯಾಜ್, ರಮೇಶ್, ಜಯಸೂರ್ಯ,ದರ್ಶನ್,ದಿಲೀಪ್, ಮಾರುತಿ ಸೇರಿದಂತೆ ಇನ್ನಿತರ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ