ಹುಳಿಯಾರು ಜ.4: ರಾಷ್ಟ್ರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ನಾರಾಯಣ ಸಮೂಹ ಶಿಕ್ಷಣ ಸಂಸ್ಥೆಯ ಸಹಯೋಗದಲ್ಲಿ, ಹುಳಿಯಾರಿನ ವಿದ್ಯಾವಾರಿಧಿ ಪದವಿ ಪೂರ್ವ ಕಾಲೇಜು ರಾಜ್ಯ ಹಾಗೂ ರಾಷ್ಟ್ರ ಮಟ್ಟದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಾದ NEET, IIT- JEE KVPY ಹಾಗೂ KCET ಪರೀಕ್ಷೆಗಳಿಗೆ, ಇಂಟಿಗ್ರೇಟೆಡ್ ಕೋಚಿಂಗ್ ಮೂಲಕ ಗುಣಮಟ್ಟದ ತರಬೇತಿಯನ್ನು ನೀಡಲಾಗುತ್ತಿದ್ದು, ಪ್ರಸ್ತುತ ಶೈಕ್ಷಣಿಕ ಸಾಲಿನಲ್ಲಿನ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿಗಳು ಉನ್ನತ ಗುಣಮಟ್ಟದ ತರಬೇತಿಯನ್ನು ಪಡೆದು, ಮುಂದಿನ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಜ್ಜಾಗುತ್ತಿದ್ದು, ಇವರುಗಳು ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕಗಳಿಸಿ ,ದೇಶದ ಪ್ರತಿಷ್ಠಿತ ಶೈಕ್ಷಣಿಕ ವಿದ್ಯಾಸಂಸ್ಥೆಗಳಲ್ಲಿ ಪ್ರವೇಶಾತಿ ಪಡೆಯುವಂತೆ ಸಂಸ್ಥೆಯ ಅಧ್ಯಕ್ಷರಾದ ಕೆ.ಎಸ್. ಕಿರಣ್ ಕುಮಾರ್‌ರವರು ಶುಭ ಹಾರೈಸಿದರು.
ವಿದ್ಯಾವಾರಿಧಿ ಪಿಯು ಕಾಲೇಜಿನಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿ
ಜಾಗತೀಕ ಮಟ್ಟದಲ್ಲಿ ನಡೆಯುತ್ತಿರುವ ಶೈಕ್ಷಣಿಕ ಕ್ರಾಂತಿಯಲ್ಲಿ ಸ್ಪರ್ಧಿಸಲು ನಮ್ಮ ಸಂಸ್ಥೆ ವಿದ್ಯಾರ್ಥಿಗಳಿಗೆ ಉನ್ನತ ತರಬೇತಿಯನ್ನು ನೀಡುತ್ತಿದ್ದು, ಎಲ್ಲಾ ವಿದ್ಯಾರ್ಥಿಗಳನ್ನು ಪ್ರೋತ್ಸಾಹದಾಯಕವಾಗಿ ಸಜ್ಜುಗೊಳಿಸುತ್ತಿದ್ದು, ವಿದ್ಯಾರ್ಥಿಗಳು ಇನ್ನು ಹೆಚ್ಚಿನ ಪರಿಶ್ರಮದೊಂದಿಗೆ ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಉನ್ನತ ಶಿಕ್ಷಣಕ್ಕಾಗಿ ಉಚಿತ ಪ್ರವೇಶವನ್ನು ಪಡೆಯುವಂತೆ ವಿದ್ಯಾರ್ಥಿಗಳಿಗೆ ಶುಭ ಹಾರೈಸಿ ಹುರಿದುಂಬಿಸಿದರು.
ಪ್ರಸ್ತುತ ಶೈಕ್ಷಣಿಕ ಸಾಲಿನ ದ್ವಿತೀಯ ಪಿ.ಯು ವಿದ್ಯಾರ್ಥಿಗಳಿಗೆ ಪ್ರಥಮ ಪಿಯುಸಿ ಮೊದಲ ವಾರದಿಂದ ಇದುವರೆಗೂ 120 ಕ್ಕೂ ಹೆಚ್ಚು ಪಾಕ್ಷಿಕ ನೀಟ್ ಪರೀಕ್ಷೆಗಳನ್ನು ಮಾಡಲಾಗಿದ್ದು, ಇದೀಗ ಪುನರಾವರ್ತಿತ ತರಗತಿಗಳು ನಡೆಯುತ್ತಿದ್ದು, ದೈನಂದಿನ ಅಭ್ಯಾಸ ಪರೀಕ್ಷೆಗಳ ಜೊತೆಯಲ್ಲಿ ಪೂರ್ಣ ಪಟ್ಟಿ ಅವಲಂಭಿತ NEET ಗ್ರಾಂಡ್ ಎಕ್ಸಾಂಗಳನ್ನು ನಡೆಸುತ್ತಿದ್ದು, ಕಳೆದ ಮೂರು ಪರೀಕ್ಷೆಯಲ್ಲಿ ಅತ್ಯುನ್ನತ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಾದ ಕ್ರಮವಾಗಿ
ಕು. ಗಾನವಿ ಎಂ.ಸಿ., ಕು. ಸೃಷ್ಟಿ ಎಂ,ಕು. ಪ್ರೇಕ್ಷಿತಾ, ಕು. ವೇಣಿಕಾ ಎಸ್ ಸ್ವಾಮಿ ಹಾಗೂ ಕು. ಸಹನ.ಟಿ ಅವರಿಗೆ ಸಂಸ್ಥೆಯ ವತಿಯಿಂದ ಇನ್ನೂ ಹೆಚ್ಚಿನ ತರಬೇತಿಗಾಗಿ ವಿವಿಧ ಪುಸ್ತಕಗಳನ್ನು ನೀಡಿ ಅಭಿನಂದಿಸಿ, ಪ್ರೋತ್ಸಾಹಿಸಲಾಯಿತು.
ಇದೇ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀಮತಿ ಬಿ.ಕವಿತಾ ಕಿರಣ್ ಕುಮಾರ್‌ರವರು ಮಾತನಾಡಿ ಮಕ್ಕಳಲ್ಲಿ ಆರೋಗ್ಯಕರ ಸ್ಪರ್ಧೆ ಹಾಗೂ ಪ್ರೋತ್ಸಾಹವನ್ನು ನೀಡಲು ಇನ್ನೂ ಹೆಚ್ಚಿನ ಪರೀಕ್ಷಾ ಸಿದ್ಧತಾ ಪರಿಕರಗಳನ್ನು ಒದಗಿಸುವುದಾಗಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಿ, ಅಭಿನಂದಿಸಿದರು.ಪ್ರಾಚಾರ್ಯರಾದ ಎಸ್.ಜಿ ಸತೀಶ್‌ನಾಯ್ಕ ಮಾತನಾಡಿ, ನಮ್ಮ ಸಂಸ್ಥೆಯ ಉಪನ್ಯಾಸಕ ವೃಂದವು ಸುಸಜ್ಜಿತ ಯೋಜನೆಯೊಂದಿಗೆ ಅತ್ಯುನ್ನತ ಗುಣಮಟ್ಟದ ಬೋಧನೆ ಹಾಗೂ ಕಲಿಕಾ ತರಬೇತಿಯನ್ನು ನೀಡುತ್ತಿದ್ದು, ವಿದ್ಯಾರ್ಥಿಗಳ ಅಭ್ಯುದಯಕ್ಕೆ ಇನ್ನೂ ಹೆಚ್ಚು ಶ್ರಮಿಸಿ ಅವರ ಭವಿಷ್ಯವನ್ನು ಉಜ್ವಲಗೊಳಿಸುವಲ್ಲಿ ನಿರಂತರ ಪ್ರಯತ್ನವನ್ನು ಮಾಡುತ್ತೇವೆಂದು ಹಾಗೂ ಕಾಲೇಜಿನ ಸಂಪನ್ಮೂಲಗಳನ್ನು ಉತ್ತಮ ರೀತಿಯಲ್ಲಿ ಬಳಸಿಕೊಂಡು, ಶೈಕ್ಷಣಿಕ ಗುರಿಯನ್ನು ಮುಟ್ಟಬೇಕೆಂದು ಆಶಿಸಿದರು. ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಬೋಧಕ/ಬೋಧಕೇತರ ಸಿಬ್ಬಂದಿಗಳು, ಪೋಷಕರು, ವಿದ್ಯಾರ್ಥಿಗಳು ಹಾಜರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ