ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಪ್ರತಿಭಾ ಕಾರಂಜಿಯಲ್ಲಿ ಮಿಂಚಿದ ಕೇಶವ ಶಾಲೆ ಮಕ್ಕಳು

          ಹುಳಿಯಾರು  ಪಟ್ಟಣದ ಕೇಶವ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಹೋಬಳಿ ಮಟ್ಟದ ಪ್ರತಿಭಾಕಾರಂಜಿಯ ಸ್ಪರ್ಧೆಗಳಲ್ಲಿ ಪಾಲ್ಗೊಂಡು ವಿಜೇತರಾಗುವ ಮೂಲಕ ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಪ್ರತಿಭಾಕರಂಜಿ ಸ್ಪರ್ಧೆಯಲ್ಲಿ ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿರುವ ಹುಳಿಯಾರಿನ ಕೇಶವ ವಿದ್ಯಾಸಂಸ್ಥೆ ಮಕ್ಕಳು.          ಕಿರಿಯರ ವಿಭಾಗದ ಅಭಿನಯ ಗೀತೆಯಲ್ಲಿ ಸಂಜನ ,ಚಿತ್ರಕಲೆಯಲ್ಲಿ ಶೃತಿ,ಛದ್ಮವೇಷದಲ್ಲಿ ವಾಸು, ಗಾಯನದಲ್ಲಿ ಬಿಂದು ತಂಡದವರು ಪ್ರಥಮ ಸ್ಥಾನಗಳಿಸಿದರೆ, ಮಾನಸ ಲಘುಸಂಗೀತದಲ್ಲಿ ದ್ವಿತೀಯ ಹಾಗೂ ಧಾರ್ಮಿಕ ಪಠಣದಲ್ಲಿ ತೃತೀಯ ಸ್ಥಾನಪಡೆದಿದ್ದಾರೆ.          ಹಿರಿಯರ ವಿಭಾಗದಲ್ಲಿ ದೇಶಭಕ್ತಿಗೀತೆಯಲ್ಲಿ ಕೀರ್ತನ್ ರಾವ್ ತಂಡದವರು ಪ್ರಥಮ , ಜಾನಪದನೃತ್ಯದಲ್ಲಿ ಪುರುಷೋತ್ತಮ್ ತಂಡದವರು ದ್ವಿತೀಯ ಸ್ಥಾನ ಪಡೆದಿದ್ದಾರೆ. ಅಭಿನಯಗೀತೆಯಲ್ಲಿ ತೇಜಸ್ವಿನಿ ಧಾರ್ಮಿಕಪಠಣದಲ್ಲಿ ಅನುಷಾ ದ್ವಿತೀಯ ಸ್ಥಾನಗಳಿಸಿದರೆ, ಚಿತ್ರಕಲೆಯಲ್ಲಿ ಭಾವನಾ ತೃತೀಯ ಸ್ಥಾನಪಡೆದು ತಾಲ್ಲೂಕು ಮಟ್ಟಕೆ ಆಯ್ಕೆಯಾಗಿದ್ದಾರೆ. ಸಂಸ್ಥೆಯ ದಾಸಪ್ಪ,ಶ್ರೀಧರ್ ಅಂಬೇಕರ್,ಶಾಲಾ ಶಿಕ್ಷಕರು,ಸಿಬ್ಬಂದಿಯವರು ವಿಜೇತ ಮಕ್ಕಳನ್ನು ಅಭಿನಂದಿಸಿದ್ದಾರೆ.

ಸಾಲವನ್ನು ನಿಗದಿತ ಸಮಯದಲ್ಲಿ ಮರುಪಾವತಿ ಸಂಘ ಬೆಳೆಸಿ

           ಸಂಘದ ಷೇರುದಾರರು ಸಂಘದಿಂದ ಪಡೆದ ಸಾಲವನ್ನು ನಿಗದಿತ ಸಮಯದಲ್ಲಿ ಮರುಪಾವತಿ ಮಾಡುವ ಮೂಲಕ ಸಂಘವನ್ನು ಮತ್ತೊಷ್ಟು ಬೆಳವಣಿಗೆಯಾಗುವಂತೆ ಮಾಡಲು ಸಹಕರಿಸಿ ಎಂದರು ಸಂಘದ ಅಧ್ಯಕ್ಷ ಬಡಗಿರಾಮಣ್ಣ ತಿಳಿಸಿದರು.             ಪಟ್ಟಣದ ಡಿ.ದೇವರಾಜು ಅರಸು ಪತ್ತಿನ ಸಹಕಾರ ಸಂಘದಲ್ಲಿ ಶುಕ್ರವಾರ ನಡೆದ 2013-14 ನೇ ಸಾಲಿನ ವಾರ್ಷಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.                  ಹಿಂದುಳಿದ ವರ್ಗದವರ ಏಳ್ಗೆಯನ್ನೇ ಮೂಲ ಉದ್ದೇಶವಾಗಿಟ್ಟು ರಚನೆಯಾಗಿರುವ ಡಿ.ದೇವರಾಜು ಅರಸು ಸಂಘ ತನ್ನ ಎರಡು ವರ್ಷದ ಅವಧಿಯಲ್ಲಿ 87 ಲಕ್ಷ ವಹಿವಾಟು ನಡೆಸಿ, ಒಂದು ಲಕ್ಷದ ಮೂವತ್ತಾರು ಸಾವಿರ ಲಾಭಾಂಶ ಹೊಂದಿರುವುದು ಹೆಮ್ಮೆಯ ಸಂಗತಿ. ಮೊದಲು ಕೆಲವೇ ಮಂದಿ ಷೇರುದಾರರಿಂದ ಪ್ರಾರಂಭವಾದ ಸಂಘದಲ್ಲಿ ಪ್ರಸ್ತುತ 611 ಷೇರುದಾರರಿದ್ದು ಅವರಿಗೆ ಸಾಲ ಸೌಲಭ್ಯ ಮಾತ್ರ ನೀಡುತ್ತಿದ್ದು, ಮುಂದಿನ ದಿನಗಳಲ್ಲಿ ದ್ವಿಚಕ್ರ ವಾಹನ ಸಾಲವನ್ನೂ ಸಹ ನೀಡುವುದಾಗಿ ತಿಳಿಸಿದರು. ಪಿಗ್ನಿ ಏಜೆಂಟರ್ ಗಳು ಸಂಘದಿಂದ ಕೇವಲ ಸಾಲ ಕೊಡಿಸಿದರಷ್ಟೇ ಸಾಲದು ಅದರ ವಸೂಲಿ ಮಾಡಲು ಸಹ ಹೆಚ್ಚಿನ ಮುತುವರ್ಜಿವಹಿಸಬೇಕು ಎಂದು ಸಲಹೆ ನೀಡಿದರು.          ಡಿ.ದೇವರಾಜು ಅರಸು ಅವರ ಆದರ್ಶ ಗುಣಗಳನ್ವಯ ಸ...

ಯುವಕಾಂಗ್ರೆಸ್ ವತಿಯಿಂದ ನೆರೆಸಂತ್ರಸ್ತರಿಗೆ ದೇಣಿಗೆ ಸಂಗ್ರಹ

           ಇಲ್ಲಿನ ಯುವ ಕಾಂಗ್ರೆಸ್ ಘಟಕದವತಿಯಿಂದ ಜಮ್ಮು-ಕಾಶ್ಮೀರದ ನೆರೆ ಸಂತ್ರಸ್ತರಿಗೆ ನೆರವು ನೀಡುವ ನಿಟ್ಟಿನಲ್ಲಿ ಪಟ್ಟಣದ ಅಂಗಡಿಗಳ ಹಾಗೂ ದಾನಿಗಳಲ್ಲಿ ನಿಧಿ ಸಂಗ್ರಹಿಸಲಾಯಿತು. ಹುಳಿಯಾರಿನಲ್ಲಿ ಯುವಕಾಂಗ್ರೆಸ್ ವತಿಯಿಂದ ಜಮ್ಮು-ಕಾಶ್ಮೀರದ ನೆರೆ ಸಂತ್ರಸ್ತರಿಗೆ ನೆರವು ನೀಡುವ ನಿಟ್ಟಿನಲ್ಲಿ ನಿಧಿ ಸಂಗ್ರಹಿಸಲಾಯಿತು.             ನಿಧಿ ಸಂಗ್ರಹಣೆಯ ನೇತೃತ್ವವಹಿಸಿದ್ದ ಚಿ.ನಾ.ಹಳ್ಳಿ ತಾಲ್ಲೂಕು ಯುವಕಾಂಗ್ರೆಸ್ ನ ಅಧ್ಯಕ್ಷ ಹೊಸಳ್ಳಿ ಅಶೋಕ್ ಮಾತನಾಡಿ, ಜಮ್ಮು-ಕಾಶ್ಮೀರದಲ್ಲಿ ಪ್ರಕೃತಿ ವಿಕೋಪದಿಂದಾಗಿ ಸಹಸ್ರಾರು ಜನ ನಿರ್ಗತಿಕರಾಗಿದ್ದು ಊಟ,ಬಟ್ಟೆಗೆ ಪರದಾಡುವಂತ ಚಿಂತಾಜನಕ ಸ್ಥಿತಿ ಉಂಟಾಗಿದೆ. ಅಲ್ಲಿನ ಜನಕ್ಕೆ ಈಗ ನೆರವಿನ ಅವಶ್ಯಕತೆಯಿದ್ದು ನಮ್ಮಿಂದಾಗುವ ಸಹಾಯ ಮಾಡುವ ನಿಟ್ಟಿನಲ್ಲಿ ದೇಣಿಗೆ ಸಂಗ್ರಹಣೆ ಮಾಡುತ್ತಿರುವುದಾಗಿ ತಿಳಿಸಿದರು. ಇಲ್ಲಿ ಸಂಗ್ರಹಿಸಿದ ದೇಣಿಗೆಯನ್ನು ಕಾಂಗ್ರೆಸ್ ಜಿಲ್ಲಾಧ್ಯಕ್ಷರಲ್ಲಿಗೆ ಕಳುಹಿಸಲಿದ್ದು , ಅಲ್ಲಿಂದ ನೆರೆ ಸಂತ್ರಸ್ತರಿಗೆ ಕಳುಹಿಸುವ ವ್ಯವಸ್ಥೆ ಮಾಡಲಾಗುತ್ತದೆ . ಅಂಗಡಿಯವರು, ಸಾರ್ವಜನಿಕರು ತಮ್ಮ ಸ್ವಯಂಪ್ರೇರಣೆಯಿಂದ ಹಣ ನೀಡಿದ್ದು ಒಟ್ಟು 8880 ರೂ ಸಂಗ್ರಹವಾಗಿದ್ದು , ಇನ್ನು ಹೆಚ್ಚಿನ ಮೊತ್ತ ಸಂಗ್ರಹಿಸುವ ಗುರಿ ಹೊಂದಿರುವುದಾಗಿ ತಿಳಿಸಿದರು.        ಈ ವೇಳೆ ಸಂ...

ಪಿಯು ಕಾಲೇಜಿನಲ್ಲಿ ಅಗ್ನಿಶಾಮಕದಳದಿಂದ ಬೆಂಕಿ ನಂದಿಸುವ ಪ್ರಾತ್ಯಕ್ಷಿಕೆ

          ಇಲ್ಲಿನ ಸರ್ಕಾರಿ ಪಿಯುಸಿ ಕಾಲೇಜಿನ ಎನ್.ಎಸ್.ಎಸ್.ಘಟಕದವತಿಯಿಂದ ಆಯೋಜಿಸಿದ್ದ ಪ್ರಕೃತಿ ವಿಕೋಪಗಳ ಬಗ್ಗೆ ಅರಿವು ಕಾರ್ಯಕ್ರಮದಲ್ಲಿ ಚಿ.ನಾ.ಹಳ್ಳಿ ಅಗ್ನಿಶಾಮಕದಳದವರು ಬೆಂಕಿ ನಂದಿಸುವ ಪ್ರಾತ್ಯಕ್ಷಿಕೆಯನ್ನು ಶುಕ್ರವಾರದಂದು ಕಾಲೇಜು ಆವರಣದಲ್ಲಿ ಪ್ರಾಯೋಗಿಕವಾಗಿ ನಡೆಸಿಕೊಟ್ಟರು. ಹುಳಿಯಾರು-ಕೆಂಕೆರೆ ಪಿಯು ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಂಕಿ ನಂದಿಸಲು ಬಳಸುವ ಸಾಧನಗಳ ಬಗ್ಗೆ ಅಗ್ನಿಶಾಮಕದಳದ ಪಂಚಾಕ್ಷರಯ್ಯ ಪ್ರಾಯೋಗಿಕವಾಗಿ ವಿದ್ಯಾರ್ಥಿಗಳಿಗೆ ತಿಳಿಸಿದರು.            ಅಗ್ನಿಶಾಮಕದಳದ ಪ್ರಭಾರ ಠಾಣಾಧಿಕಾರಿ ಪಂಚಾಕ್ಷರಯ್ಯ ಮಾತನಾಡಿ , ಬೆಂಕಿ ಅಂದರೆ ಶಾಖ ಮಾನವನಿಗೆ ಅವಶ್ಯಕವಾಗಿ ಬೇಕೆಬೇಕು. ಅದರಿಂದ ನಮಗೆ ಎಷ್ಟು ಉಪಯೋಗವಿದೆಯೋ ಅಷ್ಟೇ ಅಪಾಯವಿದ್ದು , ಬೆಂಕಿಯ ಬಳಕೆಯಲ್ಲಿ ಸದಾ ಎಚ್ಚರಿಕೆಯಿಂದ ಇರಬೇಕು ಎಂದರು. ಬೆಂಕಿ ವಿವಿಧ ರೀತಿಯಲ್ಲಿ ಪಸರಿಸಲಿದ್ದು ಅದಕ್ಕೆ ಅನುಗುಣವಾಗಿ ಬೆಂಕಿನಂದಿಸಲು ಕೆಲ ಸಾಧನಗಳು, ರಾಸಾಯನಿಕ ವಸ್ತುಗಳು,ತಾಂತ್ರಿಕ ವ್ಯವಸ್ಥೆಗಳನ್ನು ಅಯಾ ಸಂದರ್ಭಕ್ಕನುಗುಣವಾಗಿ ಬಳಕೆ ಮಾಡುವುದಾಗಿ ತಿಳಿಸಿದರು. ಪ್ರಸ್ತುತದಲ್ಲಿ ಎಲ್ಲರ ಮನೆಯಲ್ಲೂ ಎಲ್.ಪಿ.ಜಿ ಗ್ಯಾಸ್ ಇದ್ದು ಅದರ ಸೋರುವಿಕೆ ಉಂಟಾದಾಗ ಮರಳು, ಒದ್ದೆ ಮಾಡಿದ ಗೋಣಿಚೀಲ ಬಳಕೆ ಮಾಡುವಂತೆ ಹಾಗೂ ಯಾವುದೇ ಕಾರಣಕ್ಕೂ ಸ್ವಿಚ್, ಬೆಂಕಿಪೊಟ್ಟಣ ಹಚ್ಚುವುದು, ಯಾ...

ಬೋರನಕಣಿಯಲ್ಲಿ ಹಿಂದಿ ಶಿಕ್ಷಕ ದಿವಸ್ ಆಚರಣೆ

        ರಾಜ್ಯ ಹಿಂದಿ ಸಹ ಶಿಕ್ಷಕರ ಸಂಘಕ್ಕೆ 1 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಮಾಡಲು ಚಿಂತಿಸಲಾಗಿದೆ ಅಲ್ಲದೆ ತಾಲ್ಲೂಕಿನಲ್ಲಿ ಹಿಂದಿ ಶಿಕ್ಷಕರ ವಿಷಯ ಪರಿವಿಕ್ಷಕರ ಹುದ್ದೆ ಇಲ್ಲದೆ ಹಿಂದಿ ಶಿಕ್ಷಕರಿಗೆ ಮಾರ್ಗದರ್ಶನ ಇಲ್ಲವಾಗಿದೆ ಎಂದು ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಕಾರ್ಯದರ್ಶಿ ಗಂಗಾಧರಯ್ಯ ತಿಳಿಸಿದರು. ಹುಳಿಯಾರಿನ ಬೋರನಕಣಿವೆಯಲ್ಲಿ ತಾಲ್ಲೂಕು ಪ್ರೌಢಶಾಲಾ ಹಿಂದಿ ಭಾಷಾ ಬೋಧಕರ ಸಂಘದಿಂದ ನಡೆದ ಹಿಂದಿ ಶೈಕ್ಷಣಿಕ ಸಮಾವೇಶದಲ್ಲಿ ಮುಖ್ಯ ಶಿಕ್ಷಕಿ ಮಂಜಮ್ಮ ಮಾತನಾಡಿದರು. ಹುಳಿಯಾರಿನ ಬೋರನಕಣಿವೆಯಲ್ಲಿ ತಾಲ್ಲೂಕು ಪ್ರೌಢಶಾಲಾ ಹಿಂದಿ ಭಾಷಾ ಬೋಧಕರ ಸಂಘದಿಂದ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ನಿವೃತ್ತ ಉಪನ್ಯಾಸಕ ರಂಗನಾಥ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.             ಹೋಬಳಿಯ ಬೋರನಕಣಿವೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ತಾಲ್ಲೂಕು ಪ್ರೌಢಶಾಲಾ ಹಿಂದಿ ಭಾಷಾ ಬೋಧಕರ ಸಂಘದ ಆಶ್ರಯದಲ್ಲಿ ಹಿಂದಿ ದಿವಸದ ಅಂಗವಾಗಿ ಶೈಕ್ಷಣಿಕ ಸಮಾವೇಶ,ಪ್ರತಿಭಾ ಪುರಸ್ಕಾರ ಹಾಗೂ ತರಬೇತಿ ಕಾರ್ಯಗಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.              ರಾಷ್ಟದ ಏಕತೆಗೆ ಪೂರಕವಾಗಿ ಹಿಂದಿ ಭಾಷೆ ಬಳಕೆಯಾಗುತ್ತಿದ್ದು,ವಿದ್ಯಾರ್ಥಿಗಳು ಹಿಂದಿ ಭಾಷೆ ಮಾತನಾಡುವುದನ...

ಹೆದ್ದಾರಿಗೆ ಭೂಸ್ವಾಧೀನಗೊಂಡ ಭೂಮಾಲಿಕರಿಂದ ದಾಖಲಾತಿ ಸ್ವೀಕಾರ

        ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 234 ಕ್ಕೆ ಸಂಬಂಧಪಟ್ಟಂತೆ ಹುಳೀಯಾರು-ಶಿರಾ ಮಾರ್ಗ ಮಧ್ಯೆ ಭೂಸ್ವಾಧೀನ ಪಡಿಸಿಕೊಂಡಿರುವ ಜಮೀನು ಮಾಲೀಕರುಗಳಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಸಂಬಂಧಪಟ್ಟ ಜಮೀನಿನ ದಾಖಲಾತಿಗಳು, ಜಮೀನಿಗೆ ಬೇಕೆಂದಿರುವ ಪರಿಹಾರದ ಮೊತ್ತ ಇನ್ನಿತರ ಬೇಡಿಕೆಗಳಿಗೆ ಸಂಬಂಧಪಟ್ಟಂತೆ ಮಾಹಿತಿವುಳ್ಳ ಅರ್ಜಿಯನ್ನು ಭರ್ತಿ ಮಾಡಿಸಿಕೊಳ್ಳುವ ಮೂಲಕ ವಿಶೇಷ ಭೂಸ್ವಾಧೀನಾಧಿಕಾರಿಗಳು ಸ್ವೀಕರಿಸಿದರು. ಹುಳಿಯಾರಿನ ಪ್ರವಾಸಿ ಮಂದಿರದಲ್ಲಿ ಹೆದ್ದಾರಿ ಭೂಸ್ವಾಧೀನ ಅಧಿಕಾರಿಗಳಿಗೆ ಭೂಮಾಲೀಕರು ದಾಖಲಾತಿಗಳನ್ನು ಸಲ್ಲಿಸಿದರು.            ಹುಳಿಯಾರಿನ ಪ್ರವಾಸಿ ಮಂದಿರದಲ್ಲಿ ಗುರುವಾರ ನಡೆದ ದಾಖಲಾತಿ ಸ್ವೀಕಾರ ಸಭೆಯಲ್ಲಿ ರಸ್ತೆ ವಿಸ್ತರಣೆಯಿಂದ ಜಮೀನು ಕಳೆದುಕೊಂಡ ರೈತರು ಪರಿಹಾರ ಪಡೆಯುವ ನಿಟ್ಟಿನಲ್ಲಿ ಜಮೀನಿನ ಮೂಲ ದಾಖಲಾತಿ ಪತ್ರಗಳು, ಕ್ರಯಪತ್ರ, ಮ್ಯುಟೇಶನ್, ಪಹಣಿ, ಕಂದಾಯಪಾವತಿ ರಸೀದಿ, ಭೂಪರಿವರ್ತನೆ ಆದೇಶ, ಸಾಗುವಳಿಚೀಟಿ, ರೆವಿನ್ಯೂ ನಕ್ಷೆಯೊಂದಿಗೆ ಮುಂತಾದ ದಾಖಲೆಗಳ ನಕಲನ್ನು ವಿಶೇಷಭೂಸ್ವಾಧೀನಾಧಿಕಾರಿಯಾದ ರಶ್ಮಿ ಅವರಿಗೆ ನೀಡಿದರು.           ಪರಿಹಾರ ಪ್ರಕ್ರಿಯೆ ಬಗ್ಗೆ ಮಾಹಿತಿ ನೀಡಿದ ರಶ್ಮಿ ಅವರು, ರಾಷ್ಟ್ರೀಯ ಹೆದ್ದಾರಿ 234 ಮಂಗಳೂರಿನಿಂದ ಪ್ರಾರಂಭವಾಗಿ ತಮಿಳುನಾಡಿನ ವಿಲ್ಲುಪುರಂಗೆ ಸಂಪರ್ಕ...

ಭೂಚೇತನ ಯೋಜನೆಯಡಿ ತರಬೇತಿ

      ಕೃಷಿ ಇಲಾಖೆವತಿಯಿಂದ ಭೂಚೇತನ ಯೋಜನೆಯಡಿ ಹುಳಿಯಾರು ಹೋಬಳಿ ಮಟ್ಟದ ತರಬೇತಿ ಕಾರ್ಯಕ್ರಮ (ತಾ.18) ಗುರುವಾರ ಬೆಳಿಗ್ಗೆ 11 ಗಂಟೆಗೆ ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ.          ಕಾರ್ಯಕ್ರಮದಲ್ಲಿ ಕೃಷಿ ಭಾಗ್ಯ ಯೋಜನೆಯಡಿ ದೊರೆಯುವ ಸೌಲಭ್ಯ , ಕೃಷಿ ಚಟುವಟಿಕೆಗೆ ಸಂಬಂಧಿಸಿದ ಮಾಹಿತಿ ಹಾಗೂ ಸರ್ಕಾರದಿಂದ ದೊರೆಯಬಹುದಾದ ಸೌಲಭ್ಯಗಳು ಸೇರಿದಂತೆ ಮತ್ತಿತರ ಮಾಹಿತಿಗಳನ್ನೊಳಗೊಂಡಂತೆ ತರಬೇತಿ ನೀಡಲಿದ್ದಾರೆ. ಕೃಷಿ ಭಾಗ್ಯ ಯೋಜನೆಯಡಿ ಸೌಲಭ್ಯ ಪಡೆಯಲು ಕನಿಷ್ಠ 2.5 ಎಕರೆ ಹಾಗೂ ಗರಿಷ್ಠ 5 ಎಕರೆ ಜಮೀನು ಹೊಂದಿರುವವರು ಪಹಣಿ ತಂದು ಅರ್ಜಿಸಲ್ಲಿಸಬಹುದಾಗಿದೆ .ಹುಳಿಯಾರು ಸೇರಿದಂತೆ ಸುತ್ತಮುತ್ತಲ ಹಳ್ಳಿಗಳ ರೈತರು ಹಾಗೂ ರೈತ ಅನುವುಗಾರರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕೃಷಿ ಇಲಾಖೆಯ ಸಹಾಯಕ ಕೃಷಿ ಅಧಿಕಾರಿ ನೂರುಲ್ಲಾ ತಿಳಿಸಿದ್ದಾರೆ.