ಸಂಘದ ಷೇರುದಾರರು ಸಂಘದಿಂದ ಪಡೆದ ಸಾಲವನ್ನು ನಿಗದಿತ ಸಮಯದಲ್ಲಿ ಮರುಪಾವತಿ ಮಾಡುವ ಮೂಲಕ ಸಂಘವನ್ನು ಮತ್ತೊಷ್ಟು ಬೆಳವಣಿಗೆಯಾಗುವಂತೆ ಮಾಡಲು ಸಹಕರಿಸಿ ಎಂದರು ಸಂಘದ ಅಧ್ಯಕ್ಷ ಬಡಗಿರಾಮಣ್ಣ ತಿಳಿಸಿದರು.
ಪಟ್ಟಣದ ಡಿ.ದೇವರಾಜು ಅರಸು ಪತ್ತಿನ ಸಹಕಾರ ಸಂಘದಲ್ಲಿ ಶುಕ್ರವಾರ ನಡೆದ 2013-14 ನೇ ಸಾಲಿನ ವಾರ್ಷಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹಿಂದುಳಿದ ವರ್ಗದವರ ಏಳ್ಗೆಯನ್ನೇ ಮೂಲ ಉದ್ದೇಶವಾಗಿಟ್ಟು ರಚನೆಯಾಗಿರುವ ಡಿ.ದೇವರಾಜು ಅರಸು ಸಂಘ ತನ್ನ ಎರಡು ವರ್ಷದ ಅವಧಿಯಲ್ಲಿ 87 ಲಕ್ಷ ವಹಿವಾಟು ನಡೆಸಿ, ಒಂದು ಲಕ್ಷದ ಮೂವತ್ತಾರು ಸಾವಿರ ಲಾಭಾಂಶ ಹೊಂದಿರುವುದು ಹೆಮ್ಮೆಯ ಸಂಗತಿ. ಮೊದಲು ಕೆಲವೇ ಮಂದಿ ಷೇರುದಾರರಿಂದ ಪ್ರಾರಂಭವಾದ ಸಂಘದಲ್ಲಿ ಪ್ರಸ್ತುತ 611 ಷೇರುದಾರರಿದ್ದು ಅವರಿಗೆ ಸಾಲ ಸೌಲಭ್ಯ ಮಾತ್ರ ನೀಡುತ್ತಿದ್ದು, ಮುಂದಿನ ದಿನಗಳಲ್ಲಿ ದ್ವಿಚಕ್ರ ವಾಹನ ಸಾಲವನ್ನೂ ಸಹ ನೀಡುವುದಾಗಿ ತಿಳಿಸಿದರು. ಪಿಗ್ನಿ ಏಜೆಂಟರ್ ಗಳು ಸಂಘದಿಂದ ಕೇವಲ ಸಾಲ ಕೊಡಿಸಿದರಷ್ಟೇ ಸಾಲದು ಅದರ ವಸೂಲಿ ಮಾಡಲು ಸಹ ಹೆಚ್ಚಿನ ಮುತುವರ್ಜಿವಹಿಸಬೇಕು ಎಂದು ಸಲಹೆ ನೀಡಿದರು.
ಡಿ.ದೇವರಾಜು ಅರಸು ಅವರ ಆದರ್ಶ ಗುಣಗಳನ್ವಯ ಸಂಘ ಸ್ಥಾಪಿಸಿದ್ದು ಹಿಂದುಳಿದ ಎಲ್ಲಾ ವರ್ಗದವರು ಇಲ್ಲಿ ಷೇರುದಾರರಾಗಲು ಅವಕಾಶವಿದೆ ಹಾಗೂ ಪ್ರತಿಯೊಬ್ಬರಿಗೂ ಸಾಲಸೌಲಭ್ಯವಿದ್ದು, ಸಾಲವನ್ನು ಪಡೆದು ಉತ್ತಮ ಕಾರ್ಯಗಳಲ್ಲಿ ವಿನಿಯೋಗಿಸಿಕೊಳ್ಳುವ ಮೂಲಕ ಆರ್ಥಿಕವಾಗಿ ಸಬಲರಾಗುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಜಗದೀಶ್, ಸದಸ್ಯರಾದ ಮಲ್ಲೇಶ್, ಸಣ್ಣರಂಗಯ್ಯ,ಮಂಜುನಾಥ್, ಡಾಬಾಸುರೇಶ್,ಮುಕುಂದಯ್ಯ,ರಾಮು,ಅಂಜಮ್ಮ, ಕಾರ್ಯದರ್ಶಿ ಕೃಷ್ಣಮೂರ್ತಿ, ಸಿಬ್ಬಂದಿವರ್ಗದ ದಿವ್ಯಶ್ರೀ,ದಿವಾಕರ್,ರಘು,ಯೋಗೀಶ್ ಸೇರಿದಂತೆ ಷೇರುದಾರರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ