ಹುಳಿಯಾರು ಹೋಬಳಿ ಕೆಂಕೆರೆ ಗ್ರಾಮದ ಶ್ರೀಚನ್ನಬಸವೇಶ್ವರ ಸ್ವಾಮಿ ದೇವಾಲಯದಲ್ಲಿ ಪ್ರತಿಷ್ಠಾಪಿಸಿದ್ದ ಗೌರಮ್ಮನವರ ವಿಸರ್ಜನಾ ಕಾರ್ಯದ ಅಂಗವಾಗಿ ಮಂಗಳವಾರ ಗೌರಮ್ಮ ಹಾಗೂ ಗ್ರಾಮದೇವತೆ ಕಾಳಮ್ಮನವರ ಅದ್ಧೂರಿ ಮೆರವಣಿಗೆ ಗ್ರಾಮದ ಬೀದಿಬೀದಿಗಳಲ್ಲಿ ನಡೆಯಿತು.
ಹುಳಿಯಾರು ಹೋಬಳಿ ಕೆಂಕೆರೆ ಗ್ರಾಮದ ಗೌರಮ್ಮನವರ ವಿಸರ್ಜನಾ ಕಾರ್ಯದ ಅಂಗವಾಗಿ ಮಂಗಳವಾರ ಅದ್ಧೂರಿ ಮೆರವಣಿಗೆ ನಡೆಸಲಾಯಿತು. |
ವಿಸರ್ಜನಾ ಕಾರ್ಯದ ಅಂಗವಾಗಿ ಮಂಗಳವಾರ ಮುಂಜಾನೆ ಗೌರಮ್ಮನಿಗೆ ವಿಶೇಷ ಪೂಜೆ ಮಾಡಿಸಿ, ಮಡಲಕ್ಕಿ ತುಂಬಿಸುವ ಸೇವೆ ಮಾಡಿದ ನಂತರ ಅಲಂಕೃತ ಮಂಟಪದಲ್ಲಿ ಗ್ರಾಮದೇವತೆ ಕಾಳಮ್ಮದೇವಿ ಹಾಗೂ ಗೌರಮ್ಮನವರನ್ನು ಕುಳ್ಳಿರಿಸಿವೀರಗಾಸೆ ನೃತ್ಯ ಹಾಗೂ ಚಿಟ್ ಮೇಳ ವಾದ್ಯ ದೊಂದಿಗೆ ಊರಿನ ಪ್ರಮುಖ ಬೀದಿಗಳಲ್ಲಿ ಉತ್ಸವ ನಡೆಸಿ ಬಳಿಕ ತೇರುಬೀದಿಯಲ್ಲಿ ಪನಿವಾರ ಸೇವೆ ಸಲ್ಲಿಸಿ ಅಲ್ಲಿನ ಕಲ್ಯಾಣಿಯಲ್ಲಿ ಗೌರಮ್ಮನವರನ್ನು ವಿಸರ್ಜಿಸಲಾಯಿತು. ಮೆರವಣಿಗೆಯುದ್ದಕ್ಕೂ ಗ್ರಾಮದ ಯುವಕರು ಹೆಜ್ಜೆಹಾಕುತ್ತಾ , ಪಟಾಕಿಸಿಡಿಸುತ್ತಾ ಸಂಭ್ರಮಿಸುತ್ತಿದ್ದರು.
ಚನ್ನಬಸವಯ್ಯ,ಗಂಗಣ್ಣ,ಭದ್ರೇಶ್,ಮಲ್ಲಪ್ಪ, ಕಡ್ಲೆಉಂಡೆರೇಣುಕಣ್ಣ, ಅಣ್ಣೆಗೆರೆ ಬಸಣ್ಣ, ರಾಜಶೇಖರ್, ಶಿವಕುಮಾರ್, ಕೊಟ್ರೇಶ್, ಪೈಂಟ್ ಸಿದ್ದೇಶ್, ಸೇರಿದಂತೆ ಯುವಕ ಮಂಡಳಿಯವರು, ಸುತ್ತಮುತ್ತಲ ಹಳ್ಳಿಯವರು ಪಾಲ್ಗೊಂಡಿದ್ದು ಗೌರಮ್ಮನವ ವಿಸರ್ಜನೆಯನ್ನು ಕಣ್ ತುಂಬಿಕೊಂಡರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ