ಶಿವಶರಣರ ವಚನಗಳು ಅವರ ಅನುಭವದ ನುಡಿಗಳಾಗಿದ್ದು , ಅವು ಇಂದಿಗೂ ಪ್ರಚುರದಲ್ಲಿದ್ದು ಅವನ್ನು ನಮ್ಮ ನಿತ್ಯ ಜೀವನದಲ್ಲಿ ಮೈಗೂಡಿಸಿಕೊಂಡಿದ್ದೇ ಆದರೆ ನಮ್ಮ ಬಾಳು ಸಾರ್ಥಕವಾಗುತ್ತದೆ ಎಂದು ಕಂದಾಯ ಇಲಾಖೆಯ ಭುವನೇಶ್ವರಿ ಅವರು ತಿಳಿಸಿದರು.
ಹುಳಿಯಾರಿನ ಶಿಕ್ಷಕ ಮಹೋಹನ್ ಕುಮಾರ್ ಅವರ ನಿವಾಸದಲ್ಲಿ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಅಯೋಜಿಸಿದ್ದ ಮನೆಮನೆಗಳಲ್ಲಿ ಕನ್ನಡಕವಿಕಾವ್ಯ ಗೋಷ್ಠಿ ಪಾಕ್ಷಿಕ ಕಾರ್ಯಕ್ರಮದಲ್ಲಿ ವಚನ ಸಾಹಿತ್ಯ ಕುರಿತು ಅವರು ವಿಶೇಷ ಉಪನ್ಯಾಸ ನೀಡಿದರು.
ವಚನಕಾರರಲ್ಲೇ ಪ್ರಮುಖರಾದ ಬಸವೇಶ್ವರರು ಹೇಳಿದ ಕಾಯಕದ ಮಹತ್ವ ಎಂತಹದ್ದು ಎಂಬುದನ್ನು ಕುರಿತ ಕೆಲ ವಚನಗಳನ್ನು ಪಠಿಸುವ ಮೂಲಕ ಅವುಗಳ ಮಹತ್ವ ತಿಳಿಸಿದರು.
ಬನಶಂಕರಿ ದೇವಾಲಯದ ಅಧ್ಯಕ್ಷ ಅನಂತ್ ಕುಮಾರ್ ಅಧ್ಯಕ್ಷತೆವಹಿಸಿ ಮಾತನಾಡಿದರು. ನಿವೃತ್ತ ಶಿಕ್ಷಕ ಹಾಗೂ ಸಾಹಿತಿ ತ.ಶಿ.ಬಸವಮೂರ್ತಿ ಅವರು ಶಿವಶರಣರ ವಚನಗಳನ್ನು ಹಾಡುವ ಮೂಲಕ ಅವುಗಳ ತಾತ್ಪರ್ಯವನ್ನು ತಿಳಿಸಿದರು. ಲಾವಣ್ಯ ಭಾವಗೀತೆಯನ್ನು, ಶಿಕ್ಷಕ ಯಲ್ಲಪ್ಪ ಭಕ್ತಿಗೀತೆಯನ್ನು ಸುಶ್ರಾವ್ಯವಾಗಿ ಹಾಡಿದರು.ಸಾಗರ್ ಪ್ರಾರ್ಥಿಸಿ, ಶಿಕ್ಷಕ ನಾರಾಯಣಪ್ಪ ನಿರೂಪಿಸಿ,ವಂದಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ