ಪಟ್ಟಣದ ಒಣಕಾಲುವೆ ಬಳಿಯ ರಂಗನಾಥ ಶೆಟ್ರು ಅವರಿಗೆ ಸೇರಿದ್ದ ಕಲ್ಪತರು ಬ್ರಿಕ್ಸ್ ಅಂಡ್ ಟೈಲ್ಸ್ ಕಾರ್ಖಾನೆಯಲ್ಲಿ ಕಾರ್ಮಿಕನೊಬ್ಬ ಮೃತಪಟ್ಟಿರುವ ಘಟನೆ ಬುಧವಾರ ಮಧ್ಯಾಹ್ನ ಮೂರು ಗಂಟೆ ಸಮಯದಲ್ಲಿ ನಡೆದಿದ್ದು ಕುಪಿತರಾದ ಸಾರ್ವಜನಿಕರು ಹಾಗೂ ಮೃತನ ಸಂಬಂಧಿಕರು ಕಾರ್ಖಾನೆಯ ಬಾಗಿಲಲ್ಲಿ ಶವವಿಟ್ಟು ಹೆದ್ದಾರಿ ತಡೆ ನಡೆಸುವ ಮೂಲಕ ಪ್ರತಿಭಟನೆ ನಡೆಸಿದ್ದು , ರಾತ್ರಿಯಾದರೂ ಮುಂದುವರೆದಿದೆ.
ಹುಳಿಯಾರು ಪಟ್ಟಣದ ಕಲ್ಪತರು ಟೈಲ್ಸ್ ಅಂಡ್ ಬ್ರಿಕ್ಸ್ ಕಾರ್ಖಾನೆಯೆದುರು ಶಾಮಿಯಾನ ಹಾಕಿ ಪ್ರತಿಭಟನೆ ನಡೆಸುತ್ತಿರುವುದು. |
ಮೃತ ವ್ಯಕ್ತಿಯ ಶವವನ್ನು ಕಾರ್ಖಾನೆಯ ಮುಖ್ಯದ್ವಾರದಲ್ಲಿಟ್ಟಿರುವುದು. |
ಕೆರೆಸೂರಗೊಂಡನ ಹಳ್ಳಿಯ ರವಿ ಎಂಬಾತ ಮೃತಪಟ್ಟ ದುರ್ದೈವಿಯಾಗಿದ್ದು, ಈತ ಕೆಲಸ ಮಾಡುವ ವೇಳೆ ವಿದ್ಯುತ್ ತಗುಲಿದ್ದ ಪರಿಣಾಮ ಮೃತ ಪಟ್ಟಿದ್ದು , ಆ ಸಮಯದಲ್ಲಿ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದನ್ನು ಬಿಟ್ಟರೆ ಮಾಲೀಕರು ಬಂದು ಏನಾಯಿತು ಎಂಬುದನ್ನು ವಿಚಾರಿಸಿಲ್ಲವೆಂದು ಮೃತ ವ್ಯಕ್ತಿಯ ಗ್ರಾಮದವರು, ಸಂಬಂಧಿಕರು ಸೇರಿ ಮೃತ ವ್ಯಕ್ತಿಯ ಶವವನ್ನು ಆಸ್ಪತ್ರೆಯಿಂದ ಕಾರ್ಖಾನೆಯಲ್ಲಿಗೆ ಕೊಂಡೈದು ಮುಖ್ಯದ್ವಾರದಲ್ಲಿಟ್ಟು ಪ್ರತಿಭಟಿಸಿ ಸ್ಥಳಕ್ಕೆ ಮಾಲೀಕರು ಬರುವವರೆಗೂ ಶವತೆಗೆಯುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಕಾರ್ಖಾನೆಯ ಕಾರ್ಮಿಕ ಮೃತಪಟ್ಟರು ಮಾಲೀಕರು ಸ್ಥಳಕ್ಕೆ ಬಾರದೆ ಪೋಲೀಸರನ್ನು ಕರೆಸಿ ನಮ್ಮನ್ನೆಲ್ಲಾ ಹೆದರಿಸುವ ತಂತ್ರಮಾಡಿದ್ದಾರೆ . ಕಾರ್ಖಾನೆಯಲ್ಲಿ ಕೆಲಸ ಮಾಡುವವರಿಗೆ ಸೂಕ್ತ ರಕ್ಷಣೆಯಿಲ್ಲದೆ ಸಾವು ಸಂಭವಿಸಿದ್ದು, ಈ ಬಗ್ಗೆ ಕಾರ್ಖಾನೆಯ ವಿರುದ್ದ ಕಾರ್ಮಿಕ ಇಲಾಖೆಯವರು ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ವ್ಯಕ್ತಿಯ ಶವವನ್ನು ಕಾರ್ಖಾನೆಯಲ್ಲಿಗೆ ತಂದು ಹಾಕಿಕೊಂಡು ಗಂಟೆಗಟ್ಟಲೇ ಕಳೆದರೂ ಸಹ ಮಾಲೀಕರು ಬಾರದಿದ್ದರಿಂದ ರೊಚ್ಚಿಗೆದ್ದ ಪ್ರತಿಭಟನಾಕಾರರು ಹುಳಿಯಾರು- ಹೊಸದುರ್ಗ ರಸ್ತೆಗೆ ಮರದದಿಮ್ಮಿ, ಕರೆಂಟ್ ಕಂಬ ಅಡ್ಡಹಾಕಿದ ಪರಿಣಾಮ ವಾಹನಗಳು ಸಾಲುಸಾಲಾಗಿ ನಿಂತಿವೆ ಪ್ರತಿಭಟನೆ ಇನ್ನೂ ಮುಂದುವರೆದಿದೆ.ಪ್ರತಿಭಟನೆಯಿಂದ ಗಂಟೆಗಟ್ಟಲೇ ರಸ್ತೆ ತಡೆ ನಡೆದರೂ ಸಹ ತೆರವುಗೊಳಿಸದ ಪೋಲಿಸಿನವರ ಕಾರ್ಯವೈಖರಿ ಬಗ್ಗೆ ವಾಹನಚಾಲಕರು ,ಪ್ರಯಾಣಿಕರು ಹಿಡಿಶಾಪ ಹಾಕುತ್ತಿದ್ದ ದೃಶ್ಯ ಕಂಡುಬಂತು.
ಕರೆಂಟ್ ಶಾಕಿನಿಂದಲ್ಲ: ವಿಷಯ ತಿಳಿದ ಬೆಸ್ಕಾಂನ ಅಧಿಕಾರಿ ಉಮೇಶ್ಚಂದ್ರ ಸ್ಥಳಕ್ಕಾಗಮಿಸಿ ಪರಿಶೀಲಿಸಿದ್ದು , ಇದು ಕರೆಂಟ್ ಶಾಕ್ ನಿಂದಾದ ಘಟನೆಯಲ್ಲ ಏಕೆಂದರೆ ವ್ಯಕ್ತಿಯ ದೇಹದಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ, ಕರೆಂಟ್ ಶಾಕ್ ಹೊಡೆದರೆ ಮೈಬಣ್ಣ ಬದಲಾಗುತ್ತದೆ, ಅಲ್ಲದೆ ಮಾರ್ಕ್ ಗಳು ಸಹ ಆಗುತ್ತದೆ ಆದರೆ ಮೃತ ವ್ಯಕ್ತಿಯನ್ನು ಗಮನಿಸಿದರೆ ಯಾವುದೇ ರೀತಿಯ ಇಂತಹ ಗುರುತುಗಳು ಕಂಡುಬರುತ್ತಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
ಮೃತ ಪತ್ನಿಯ ರೋಧನ ಮುಗಿಲು ಮುಟ್ಟಿದ್ದು ಇದನ್ನು ಕಂಡ ಗ್ರಾಮಸ್ಥರು ಹಾಗೂ ಸಂಬಂಧಿಕರುಎಷ್ಟೇ ಸಮಯ ಕಳೆದರೂ ಸರಿ ಮಾಲೀಕರು ಬಾರದೆ ಮೃತ ದೇಹವನ್ನು ಸ್ಥಳದಿಂದ ಕದಲಿಸುವುದಿಲ್ಲ ಎಂದು ಕೂತಿರುವುದು ಪರಿಸ್ಥಿಯನ್ನು ಬಿಗಡಾಯಿಸುವಂತೆ ಮಾಡಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ