ಸಮಾಜದಲ್ಲಿನ ಯಾವುದೇ ಒಂದು ಸಂಘ ಹೆಚ್ಚು ಅಭಿವೃದ್ಧಿಯಾಗಬೇಕು ಎಂದರೆ ಅದಕ್ಕೆ ಆ ಸಮುದಾಯದವರ ಸಂಪೂರ್ಣ ಬೆಂಬಲ,ಸಹಕಾರ ಅತ್ಯಗತ್ಯ ಎಂದು ಬಸವೇಶ್ವರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜಿ.ಎಂ.ನೀಲಕಂಠಯ್ಯ ತಿಳಿಸಿದರು.
ಹುಳಿಯಾರಿನಲ್ಲಿ ನಡೆದ ವೀರಶೈವ ಸಮಾಜ ಹಾಗೂ ಬಸವೇಶ್ವರ ಪತ್ತಿನ ಸಹಕಾರ ಸಂಘದ ವಾರ್ಷಿಕ ಸಭೆಯ ಉದ್ಘಾಟನೆಯಲ್ಲಿ ಸಂಘದ ಅಧ್ಯಕ್ಷ ಜಿ.ಎಂ.ನೀಲಕಂಠಯ್ಯ, ಗಂಗಾಧರಯ್ಯ, ಲೋಕೇಶ್,ಯೋಗಮೂರ್ತಿ ಇದ್ದಾರೆ. |
ಪಟ್ಟಣದ ಬಸವಭವನದಲ್ಲಿ ಭಾನುವಾರ ನಡೆದ ಹೋಬಳಿಯ ವೀರಶೈವ ಸಮಾಜ ಹಾಗೂ ಬಸವೇಶ್ವರ ಪತ್ತಿನ ಸಹಕಾರ ಸಂಘದ ವಾರ್ಷಿಕ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಬಸವಣ್ಣನವರು ಯಾವುದೇ ಒಂದು ಜಾತಿಗೆ ಸೀಮಿತವಾಗಿ ಅವರು ಸಿದ್ದಾಂತಗಳನ್ನು ತಿಳಿಸಿಲ್ಲ ಅವರು ಅಂದು ಹೇಳಿದ ವಚನಗಳು ಸಮಾಜದ ಎಲ್ಲಾ ಸಮುದಾಯದವರಿಗೂ ಅನ್ವಯವಾಗುವಂತವು ಎಂದರು. ಹೋಬಳಿ ವ್ಯಾಪ್ತಿಯಲ್ಲಿ ಹೆಚ್ಚು ಸಂಖ್ಯೆಯಲ್ಲಿ ವೀರಶೈವ ಸಮುದಾಯದವರಿದ್ದರೂ ಸಹ ಯಾವುದೇ ಕಾರ್ಯಕ್ರಮಗಳಲ್ಲಿ ಪಾಳ್ಗೊಳ್ಳುವಂತೆ ಮಾತ್ರ ಕಡಿಮೆಯಿರುವುದು ನಮ್ಮಲ್ಲಿ ಒಗ್ಗಟ್ಟಿಲ್ಲವೇನೋ ಎನ್ನುವಂತೆ ಭಾಸವಾಗುತ್ತದೆ. ಆ ನಿಟ್ಟಿನಲ್ಲಿ ಜನಾಂಗದವರು ನಮ್ಮ ಸಮುದಾಯದ ಕಾರ್ಯಕ್ರಮಗಳಲ್ಲಿ ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು. ಬಸವೇಶ್ವರ ಪತ್ತಿನ ಸಹಕಾರ ಸಂಘ ಪ್ರಾರಂಭದಿಂದ ಇಂದಿನವರೆಗೂ ಉತ್ತಮ ರೀತಿಯಲ್ಲಿ ಬೆಳವಣಿಗೆಯಾಗುತ್ತಾ ಲಾಭಾಂಶವನ್ನು ಸಹ ಹೊಂದಿರುವುದಾಗಿ ತಿಳಿಸಿದರು.
ತಾಲ್ಲೂಕು ಸಹಶಿಕ್ಷಕರ ಸಂಘದ ಅಧ್ಯಕ್ಷ ಲೋಕೇಶ್, ಉಪಾಧ್ಯಕ್ಷ ಕೆ.ಯೋಗಮೂರ್ತಿ,ವೀರಶೈವ ಸಮುದಾಯದ ಕಾರ್ಯದರ್ಶಿ ಕೆ.ಎಂ.ಗಂಗಾಧರಯ್ಯ, ನಿರ್ದೇಶಕರಾದ ಡಾ.ರಾಜಶೇಖರಯ್ಯ, ಧನಂಜಯಮೂರ್ತಿ,ವಿಜಯ್ ಕುಮಾರ್,ಸೋಮಶೇಖರ್,ದೇವರಾಜು,ಪ್ರತಿಭಾ ಸೇರಿದಂತೆ ವೀರಶೈವ ಸಮುದಾಯದ ಕಾರ್ಯಕಾರಿ ಮಂಡಳಿಯವರು ಉಪಸ್ಥಿತರಿದ್ದು, ಕಾರ್ಯದರ್ಶಿ ಉಮೇಶ್ ಸ್ವಾಗತಿಸಿ, ಡಿ.ರಮೇಶ್ ನಿರೂಪಿಸಿ,ವಂದಿಸಿದರು. ಇದೇ ವೇಳೆ ಎಸ್.ಎಸ್.ಎಲ್.ಸಿ.ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ