ಹುಳಿಯಾರು ಪಟ್ಟಣದ ಶ್ರೀಪಸನ್ನ ಗಣಪತಿ ದೇವಾಲಯದಲ್ಲಿ ಪ್ರತಿಷ್ಠಾಪಿಸಿರುವ ನಂದಿರೂಢ ಬಾಲಗಣಪನಿಗೆ ಭಾನುವಾರ ವಿಪ್ರ ಸಂಘದಿಂದ ಅರ್ಚನೆ, ಅಭಿಷೇಕ ನೆರವೇರಿಸಲಾಯಿತು.
ಹುಳಿಯಾರಿನ ಶ್ರೀಪಸನ್ನ ಗಣಪತಿ ದೇವಾಲಯದಲ್ಲಿ ಪ್ರತಿಷ್ಠಾಪಿಸಿರುವ ನಂದಿರೂಢ ಬಾಲಗಣಪನಿಗೆ ವಿಶೇಷ ಪೂಜೆ ನಡೆಯಿತು. |
ಲಕ್ಷ್ಮಿನರಸಿಂಹಯ್ಯ ,ಸತ್ಯನಾರಾಯಣ್ ಹಾಗೂ ರವಿಕುಮಾರ್ ಅವರ ಪೌರೋಹಿತ್ಯದಲ್ಲಿ ಪೂಜಾ ಕೈಂಕರ್ಯ ನಡೆದು ಮಹಾಮಂಗಳಾರತಿ ಮತ್ತು ಪ್ರಸಾದವಿನಿಯೋಗ ಮಾಡಲಾಯಿತು. ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ವಿಶ್ವನಾಥ್, ಉಪಾಧ್ಯಕ್ಷ ಲೋಕೇಶ್, ರಂಗನಾಥ ಪ್ರಸಾದ್, ಅಶ್ವಥ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ