ಹುಳಿಯಾರು ಹೋಬಳಿ ಛಾಯಾಗ್ರಾಹಕ ಸೇವಾ ಛಾರಿಟಬಲ್ ಟ್ರಸ್ಟ್ ವತಿಯಿಂದ 175 ನೇ ವರ್ಷದ ವಿಶ್ವ ಛಾಯಾಗ್ರಾಹಕರ ದಿನದ ಅಂಗವಾಗಿ ಪಟ್ಟಣದ ಗಣಪತಿ ದೇವಾಲಯದಲ್ಲಿ ಆಯೋಜಿಸಿದ್ದ ಮಕ್ಕಳ ಭಾವಚಿತ್ರ ಸ್ಪರ್ಧೆ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು .
1 ರಿಂದ 3 ವರ್ಷದ ಮಕ್ಕಳ ಭಾವಚಿತ್ರ ಸ್ಪರ್ಧೆಯಲ್ಲಿ ವಿಜೇತರಾದ 1. ಇಂಚರ, 2. ನಿರ್ಮಾಲಾನಂದಸ್ವಾಮಿ, 3. ಭಾವನ. |
3ರಿಂದ 5 ವರ್ಷದ ಮಕ್ಕಳ ಭಾವಚಿತ್ರ ಸ್ಪರ್ಧೆಯಲ್ಲಿ ವಿಜೇತರಾದ 1. ನೇಹ, 2.ನೀರಜ್, 3.ಹರ್ಷಿತ |
ಸ್ಪರ್ಧೆಯಲ್ಲಿ 1 ರಿಂದ 3 ವರ್ಷ ಹಾಗೂ 3ರಿಂದ 5 ವರ್ಷದ ಮಕ್ಕಳಿಗಾಗಿ ಪ್ರತ್ಯೇಕ ಸ್ಪರ್ಧೆ ನಡೆಸಿದ್ದು, ಒಟ್ಟು ಎರಡೂ ವಿಭಾಗದಿಂದ 105 ಮಕ್ಕಳ ಭಾವಚಿತ್ರಗಳನ್ನು ಪ್ರದರ್ಶಿಸಲಾಯಿತು. ಮುಗ್ದತೆ ಬೀರುತ್ತಿದ್ದ ಪ್ರತಿಯೊಂದು ಚಿಣ್ಣರ ಚಿತ್ರಕೂಡ ಆಕರ್ಷಣೀಯವಾಗಿದ್ದು ವಿಕ್ಷೀಸಿದ ಸಾರ್ವಜನಿಕರಿಂದ ಮಕ್ಕಳು ತುಂಬಾ ಮುದ್ದಾಗಿವೆ ಎಂಬ ಉದ್ಗಾರ ಹೊರಬರುವಂತೆ ಮಾಡಿದ್ದವು. ಸ್ಪರ್ಧಿಸಿದ್ದ ಪ್ರತಿಯೊಂದು ಮಕ್ಕಳ ಪೋಟೋವೂ ವಿಶಿಷ್ಟವಾಗಿದ್ದು ತೀರ್ಪುಗಾರರಾಗಿ ಆಗಮಿಸಿದ್ದ ದಂಡಿನಶಿವರ ತಿಮ್ಮೇಗೌಡ ಹಾಗೂ ವನ್ಯಜೀವಿ ಛಾಯಾಗ್ರಾಹಕ ಬೆಂಗಳೂರಿನ ವರದರಾಜು ಅವರಿಗೆ ಆಯ್ಕೆ ಸವಾಲಾಗಿತ್ತು.
1 ರಿಂದ 3 ವರ್ಷದ ಒಳಗಿನ ಮಕ್ಕಳ ವಿಭಾಗದಲ್ಲಿ ಗಿರೀಶ್ ಮಧು ಅವರ ಪುತ್ರಿ ಇಂಚರ ಪ್ರಥಮ ಸ್ಥಾನಪಡೆದರೆ, ರಾಮಸ್ವಾಮಿರಾಜಮ್ಮ ಅವರ ಪುತ್ರ ನಿರ್ಮಾಲನಂದ ದ್ವಿತೀಯ ಹಾಗೂ ಮೋಹನ್ ಕುಮಾರ್ ಮಮತ ಅವರ ಪುತ್ರಿ ಭಾವನ ತೃತೀಯ ಸ್ಥಾನಪಡೆದಿದ್ದಾರೆ.
3ರಿಂದ 5 ವರ್ಷದ ಮಕ್ಕಳ ವಿಭಾಗದಲ್ಲಿ ಚಂದ್ರಶೇಖರ್ ಗೀತಾ ಅವರ ಪುತ್ರಿ ನೇಹಾ ಪ್ರಥಮ ಸ್ಥಾನ,ರವಿ ಜ್ಯೋತಿ ಅವರ ಪುತ್ರ ನೀರಜ್ ದ್ವಿತೀಯ,ಎಚ್.ಪಿ.ಗುರುಪ್ರಸಾದ್ ಶಾರದಾ ಅವರ ಪುತ್ರಿ ಹರ್ಷಿತ ತೃತೀಯ ಸ್ಥಾನಪಡೆದಿದ್ದಾರೆ.
ಸಂಜೆ ನೂರಾರು ಪೋಷಕರ ನಡುವೆ ನಡೆದ ಬಹುಮಾನ ವಿತರಣಾ ಸಮಾರಂಭದಲ್ಲಿ ಸಂಘದ ಅಧ್ಯಕ್ಷ ಬಡಗಿರಾಜು, ಗಣಪತಿ ದೇವಾಲಯ ಸಮಿತಿಯ ಅಧ್ಯಕ್ಷ ಮೋಹನ್ ಕುಮಾರ್ ವಿಜೇತ ಮಕ್ಕಳೀಗೆ ಬಹುಮಾನ ವಿತರಿಸಿದರು. ದೇವಾಲಯ ಸಮಿತಿಯ ನಾಗರಾಜು ಹೂವಿನಬಸವರಾಜು,ದಯಾನಂದ್, ಪೋಟೋಗ್ರಾಫರ್ ಸಂಘದ ಸದಸ್ಯರಾದ ತಾಂಡವಾಚಾರ್,ದುರ್ಗರಾಜ್,ಸುದರ್ಶನ್,ಚಂದ್ರಶೇಖರ್ ಸೆರಿದಂತೆ ಇತರರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ