ಕಟ್ಟೆಯಲ್ಲಿ ಮುಳುಗಿ ವಿದ್ಯಾರ್ಥಿಯೊಬ್ಬ ಸಾವನಪ್ಪಿದ ಘಟನೆ ಹೋಬಳಿಯ ಗುರುವಾಪುರ ಗ್ರಾಮದಲ್ಲಿ ಭಾನುವಾರ ನಡೆದಿದೆ.
ಮೃತ ವಿದ್ಯಾರ್ಥಿ ಕಾರಪ್ಪ ಎಂಬುವರ ಪುತ್ರ ಮಂಜುನಾಥ್ (15) ಆಗಿದ್ದು, ರಜ ದಿನವಾದ್ದರಿಂದ ಜಾನುವಾರು ಮೇಯಿಸಲೆಂದು ಹೋಗಿದ್ದ ಈತ ನೀರುಕುಡಿಸಲೆಂದು ಕಟ್ಟೆಗೆ ತೆರಳಿದಾಗ ದುರ್ಘಟನೆ ಸಂಭವಿಸಿದೆ. ಸಾಕ್ಷರತಾ ಮಹಿಳಾ ಮಂಡಳಿ ಪ್ರೌಢಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿ ಆಗಿರುವ ಈತ ಗ್ರಾಮದ ಸಮೀಪವೇ ಇದ್ದ ಗಾಣಗಿತ್ತಿ ಕಟ್ಟೆಯಲ್ಲಿ ನೀರು ಕುಡಿಸುವ ಸಂದರ್ಭದಲ್ಲಿ ಕಾಲುಜಾರಿ ಮೃತಪಟ್ಟಿದ್ದಾನೆ. ವಿಚಾರ ಅರಿತ ಬಿಇಒ ಸಾ.ಚಿ.ನಾಗೇಶ್ ಮೃತ ವಿದ್ಯಾರ್ಥಿಯ ಕುಟುಂಬದವರಿಗೆ ಸಾಂತ್ವಾನ ಹೇಳಿ ಇಲಾಖೆಯಿಂದ ಸಿಗಬಹುದಾದ ಸೌಲಭ್ಯ ಕೊಡಿಸುವ ಭರವಸೆ ನೀಡಿದರು.
ಮೃತ ವಿದ್ಯಾರ್ಥಿಯ ನಿಧನದ ಹಿನ್ನಲೆಯಲ್ಲಿ ಶಾಲೆಗೆ ರಜಾ ಘೋಷಿಸಲಾಗಿತ್ತು. ಪ್ರಕರಣ ಇಲ್ಲಿನ ಪೋಲಿಸ್ ಠಾಣೆಯಲ್ಲಿ ದಾಖಲಾಗಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ