ಕಾಲೇಜು ಹಂತದ ವಿದ್ಯಾರ್ಥಿಗಳಲ್ಲಿ ಸಮಾನತೆ ಹಾಗೂ ಶಿಸ್ತು ರೂಪಿಸುವ ಉದ್ದೇಶದಿಂದ ತಾಲ್ಲೂಕಿನ ಎಲ್ಲಾ ಕಾಲೇಜು ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸುತ್ತಿರುವುದಾಗಿ ಶಾಸಕ ಸಿ.ಬಿ.ಸುರೇಶ್ ಬಾಬು ತಿಳಿಸಿದರು.
ಹುಳಿಯಾರು-ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ನಡೆದ ಸಮವಸ್ತ್ರ ವಿತರಣಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಿ ಅವರು ಮಾತನಾಡಿದರು.
ಹುಳಿಯಾರು-ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಶಾಸಕ ಸಿ.ಬಿ.ಸುರೇಶ್ ಬಾಬು ಸಮವಸ್ತ್ರ ವಿತರಿಸಿದರು. ಪ್ರಾಚಾರ್ಯ ನಟರಾಜ್ ಹಾಗೂ ಇತರರಿದ್ದಾರೆ. |
ಹತ್ತನೇ ತರಗತಿಯವರೆಗೆ ಸರ್ಕಾರದಿಂದ ಸಮವಸ್ತ್ರ ಹಾಗೂ ಸೈಕಲ್ ವಿತರಿಸಲಾಗುತ್ತಿದೆ ಆದರೆ ಕಾಲೇಜು ಹಂತದ ವಿದ್ಯಾರ್ಥಿಗಳಿಗೆ ಇಂತಹ ಯಾವುದೇ ಸೌಲಭ್ಯವಿಲ್ಲ ಆ ನಿಟ್ಟಿನಲ್ಲಿ ಕಾಲೇಜು ವಿದ್ಯಾರ್ಥಿಗಳು ಸಹ ಸಮವಸ್ತ್ರ ಧರಿಸಿ ಕಾಲೇಜಿಗೆ ಬರುವುದರಿಂದ ಕಾಲೇಜಿನಲ್ಲಿ ಶಿಸ್ತಿನ ವಾತಾವರಣ ನಿರ್ಮಾಣವಾಗುತ್ತದಲ್ಲದೆ ವಿದ್ಯಾರ್ಥಿಗಳಲ್ಲಿ ಯಾವುದೇ ಭೇದಭಾವ ಉಂಟಾಗುವುದಿಲ್ಲ ಎಂದರು. ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಮಾತ್ರ ಸಮವಸ್ತ ವಿತರಿಸುತ್ತಿದ್ದು ಅದನ್ನು ವಾರದಲ್ಲಿ ಕಡ್ಡಾಯವಾಗಿ ನಾಲ್ಕುದಿನ ಹಾಕಿಕೊಂಡು ಬರಬೇಕು ಎಂದರಲ್ಲದೆ, ಪ್ರಸ್ತುತದ ದಿನಗಳಲ್ಲಿ ಕೇವಲ ಪಾಸಾದರೆ ಯಾವುದೇ ಸರ್ಕಾರಿ ಅಥವಾ ಇನ್ನಿತರ ಉತ್ತಮ ಕೆಲಸ ಪಡೆಯಲಾಗುವುದಿಲ್ಲ, ಚೆನ್ನಾಗಿ ಓದಿ ಹೆಚ್ಚಿನ ಅಂಕಗಳನ್ನು ಗಳಿಸಿದ್ದೇ ಆದರೆ ಜೀವನದಲ್ಲಿ ಯಶಸ್ಸು ಲಭಿಸುತ್ತದೆ ಎಂದು ತಿಳಿಸಿದರು.
ಉನ್ನತ ಹುದ್ದೆಗಳನ್ನು ಪಡೆಯಬೇಕಾದರೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬೇಕಿದ್ದು ಕಾಲೇಜು ಹಂತದಿಂದಲ್ಲೇ ಕಾಂಪಿಟೇಟಿವ್ ಪರೀಕ್ಷೆಗಳಿಗೆ ಸಿದ್ದತೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು.
ಮುಖಂಡ ಜಲಾಲ್ ಸಾಬ್ ಮಾತನಾಡಿ ಶಾಸಕರು ತಾವು ಹೇಳಿದ ಮಾತಿಗೆ ತಪ್ಪದೆ ಕಾಲೇಜು ವಿದ್ಯಾರ್ಥಿಗಳಿಗೆ ಇಂದು ಸಮವಸ್ತ್ರ ವಿತರಿಸಿದ್ದಾರೆ ಅದನ್ನು ಮನೆಗೆ ತೆಗೆದುಕೊಂಡು ಹೋಗಿ ಮೊಲೆಗೆಸೆಯದೆ ನಿತ್ಯ ಕಾಲೇಜಿಗೆ ಹಾಕಿಕೊಂಡು ಬರುವ ಮೂಲಕ ಶಾಸಕರ ಉದ್ದೇಶವನ್ನು ಈಡೇರುವಂತೆ ಮಾಡಿ ಎಂದರು.
ಪ್ರಾಚಾರ್ಯ ನಟರಾಜ್, ಉಪತಹಶೀಲ್ದಾರ್ ಸತ್ಯನಾರಾಯಣ್, ಪಿಡಿಓ ಅಡವೀಶ್ ಕುಮಾರ್,ಜಿ.ಪಂ.ಸದಸ್ಯೆರಾದ ಮಂಜುಳಾ,ನಿಂಗಮ್ಮ,ತಾ.ಪಂ.ಸದಸ್ಯೆ ಫಾತೀಮಾ, ರೋಟರಿ ಅಧ್ಯಕ್ಷ ಗಂಗಾಧರ್ ರಾವ್, ಗ್ರಾ.ಪಂ.ಉಪಾಧ್ಯಕ್ಷೆ ಅಬಿದುನ್ನಿಸಾ ಹಾಗೂ ಸದಸ್ಯರು, ಉಪನ್ಯಾಸಕರಾದ ಜಯಣ್ಣ,ಶಶಿಭೂಷಣ್,ಶಿವರುದ್ರಯ್ಯ,ಎಸ್.ಜಿ.ರಮೇಶ್,ಮಂಜುನಾಥ್ ಸೇರಿದಂತೆ ಸಿಬ್ಬಂದಿಯವರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ