ಮಕ್ಕಳು ಚಿಕ್ಕವಯಸ್ಸಿನಿಂದಲೇ ಉತ್ತಮಗುಣಗಳನ್ನು ಬೆಳೆಸಿಕೊಳ್ಳಬೇಕು , ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಪೂರಕವಾಗಿ ನೋಟ್ ಬುಕ್ ವಿತರಿಸುತ್ತಿದ್ದು ಮಕ್ಕಳು ಅದನ್ನು ಸೂಕ್ತವಾಗಿ ಉಪಯೋಗಿಸಿಕೊಳ್ಳುವಂತೆ ಥಿಯಾಸಾಫಿಕಲ್ ಸೊಸೈಟಿಯ ಅಧ್ಯಕ್ಷ ಎಚ್.ಬಿ.ಗೋಪಾಲಕೃಷ್ಣ ಕರೆ ನೀಡಿದರು.
ಹುಳಿಯಾರಿನ ಥಿಯಾಸಾಫಿಕಲ್ ಸೊಸೈಟಿಯ ಸೇವಾವಿಭಾಗದಿಂದ ಪಟ್ಟಣದ ಕನಕದಾಸ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಿಸಲಾಯಿತು. |
ಪಟ್ಟಣದ ಥಿಯಾಸಾಫಿಕಲ್ ಸೊಸೈಟಿಯ ಸೇವಾವಿಭಾಗದವತಿಯಿಂದ ಕನಕದಾಸ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಿಸಿ ಅವರು ಮಾತನಾಡಿದರು.
ವಕೀಲ ಸತೀಶ್ ಮಾತನಾಡಿ ಮಕ್ಕಳ ಶಿಕ್ಷಣಕ್ಕಾಗಿ ಸರ್ಕಾರದಿಂದ ಸಾಕಷ್ಟು ಸೌಲಭ್ಯಗಳಿದ್ದು ಅದರ ಸದ್ಬಳಕೆ ಮಾಡಿಕೊಂಡು ಶಿಕ್ಷಿತರಾಗುವ ಮೂಲಕ ಉತ್ತಮ ಪ್ರಜೆಗಳಾಗುವಂತೆ ತಿಳಿಸಿದರು. ಅಬ್ದುಲ್ ಕಲಾಂ,ವಿಶೇಶ್ವರಯ್ಯ,ಅಂಬೇಡ್ಕರ್ ಸೇರಿದಂತೆ ಮಹನೀಯರ ವಿಚಾರಗಳನ್ನು ತಿಳಿಸಿದರು.
ಶಾಲೆಯ ಹಿರಿಯ ಶಿಕ್ಷಕ ಚನ್ನಬಸವಯ್ಯ ಅಧ್ಯಕ್ಷತೆವಹಿಸಿದ್ದು, ಕನಕದಾಸ ವಿದ್ಯಾಸಂಸ್ಥೆಯ ನಿರ್ದೇಶಕ ಮಾಯಪ್ಪ, ಶಿಕ್ಷಕರಾದ ಜಗದೀಶ್,ಕುಮಾರಾಯ್ಯ ಸೇರಿದಂತೆ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ