ಹುಳಿಯಾರು ಪಟ್ಟಣದ ಕೆಂಚಮ್ಮ ದೇವಾಲಯದಲ್ಲಿ ವಿನಾಯಕ ಗೆಳೆಯರ ಬಳಗದ ವತಿಯಿಂದ ಗಣೇಶನನ್ನು ಪ್ರತಿಷ್ಠಾಪನೆ ಮಾಡಿದ್ದು , ಗಣೇಶೋತ್ಸವದ ಅಂಗವಾಗಿ ಮಕ್ಕಳಿಗಾಗಿ ಬಗೆಬಗೆಯ ಆಟೋಟಗಳನ್ನು ನಡೆಸಲಾಯಿತು. ಮಕ್ಕಳಿಗಾಗಿ ರಂಗೋಲಿ ಸ್ಪರ್ಧೆ,ಮ್ಯೂಸಿಕಲ್ ಛೇರ್, ಕೆರೆ-ದಡ, ಡ್ಯಾನ್ಸ್ ಸೇರಿದಂತೆ ವಿವಿಧ ಆಟಗಳನ್ನು ಆಡಿಸಿ, ವಿಜೇತರಾದವರಿಗೆ ಗ್ರಾ.ಪಂ.ಸದಸ್ಯ ಅಶೋಕ್ ಬಾಬು, ದೇವಾಲಯ ಸಮಿತಿಯ ಪಟೇಲ್ ರಾಜ್ ಕುಮಾರ್, ಕುಮಾರ್ ರೈ ಬಹುಮಾನ ವಿತರಿಸಿದರು. ಗೆಳೆಯರಬಳಗದ ವಿಕ್ಕಿ, ಅಜಯ್, ಹೋಟೆಲ್ ರಾಜಣ್ಣ,ಕಿರಣ್,ಕೃಷ್ಣಮೂರ್ತಿ, ಜ್ಯೋತಿ,ಶೋಭ,ಲಲಿತ,ಕಲ್ಪನ, ವಿನೋದ್ ರಾಜ್,ರವಿ,ಲಕ್ಷ್ಮಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
![]() |
ಹುಳಿಯಾರಿನ ಕೆಂಚಮ್ಮದೇವಾಲಯದಲ್ಲಿ ಗಣೇಶೋತ್ಸವದ ಅಂಗವಾಗಿ ನಡೆಸಿದ ಆಟೋಟಗಳಲ್ಲಿ ವಿಜೇತರಾದವರಿಗೆ ಬಹುಮಾನವಿತರಿಸಲಾಯಿತು. |
ಶಂಕರಪುರ : ಶಂಕರಪುರ ಬಡಾವಣೆಯ ನಿವಾಸಿಗಳು ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಯ ವಿಸರ್ಜನೆಯ ಅಂಗವಾಗಿ ವಿವಿಧ ಸಾಂಸ್ಕೃತಿಕಕಾರ್ಯಕ್ರಮಗಳನ್ನು ಅಯೋಜಿಸಿದ್ದರ ಜೊತೆಗೆ ಮಡಿಕೆ ಹೊಡೆಯುವುದು, ಮ್ಯೂಜಿಕಲ್ ಛೇರ್ ಸೇರಿದಂತೆ ಬಗೆಬಗೆಯ ಆಟೋಟಗಳನ್ನು ನಡೆಸಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಇಲ್ಲಿ ಗಣೇಶ ಚತುರ್ಥಿಯಂದು ವಿನಾಯಕ ಮೂರ್ತಿಯನ್ನು ಪ್ರತಿಷ್ಠಾಪಿಸಿ ನಿತ್ಯ ಪೂಜೆ ಜೊತೆಗೆ ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿತ್ತು. ಸ್ವಾಮಿಯ ವಿಸರ್ಜನೆಯ ಅಂಗವಾಗಿ ಹಿರಿಯರು ಹಾಗೂ ಮಕ್ಕಳಿಗಾಗಿ ವಿನೋದಾವಳಿಯ ಆಟೋಟಗಳನ್ನು ನಡೆಸಲಾಯಿತು. ಆಟದಲ್ಲಿ ವಿಜೇತರಾದವರಿಗೆ ಕರವೇ ಅಧ್ಯಕ್ಷ ಕೋಳಿ ಶ್ರೀನಿವಾಸ್, ರೈತಸಂಘದ ಪಾತ್ರೆ ಸತೀಶ್, ಹೂವಿನ ರಘು, ಗ್ರಾ.ಪಂ.ಸದಸ್ಯ ರಾಘವೇಂದ್ರ,ಅಂಗನವಾಡಿ ಕಾರ್ಯಕರ್ತೆ ವರಲಕ್ಷ್ಮಿ ಬಹುಮಾನವಿತರಿಸಿದರು. ಬಡಾವಣೆಯ ನಿವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಂಭ್ರಮಿಸಿದರು.
![]() |
ಹುಳಿಯಾರಿನ ಶಂಕರಪುರ ಬಡಾವಣೆಯಲ್ಲಿನ ಗಣೇಶ ವಿಸರ್ಜನೆ ಅಂಗವಾಗಿ ನಡೆಸಿದ ಆಟೋಟಗಳಲ್ಲಿ ಗೆದ್ದವರಿಗೆ ರೈತಸಂಘದ ಪಾತ್ರೆ ಸತೀಶ್ ಬಹುಮಾನ ವಿತರಿಸಿದರು. ಗ್ರಾ.ಪಂ.ಸದಸ್ಯ ರಾಘವೇಂದ್ರ, ಕರವೇ ಅಧ್ಯಕ್ಷ ಕೋಳಿಶ್ರೀನಿವಾಸ್ ಇತರರಿದ್ದಾರೆ. |
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ