ಇಲ್ಲಿನ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಭೇಟಿ ನೀಡಿದ ಕೇಂದ್ರದ ನ್ಯಾಕ್ ಪೀರ್ ಕಮಿಟಿಯು ಕಾಲೇಜಿನ ಶೈಕ್ಷಣಿಕ ಪ್ರಗತಿ ಹಾಗೂ ಅಭಿವೃದ್ದಿ ಕುರಿತಂತೆ ಎರಡು ದಿನಗಳಕಾಲ ಪರಿಶೀಲನೆ ನಡೆಸಿದರು.
ಹುಳಿಯಾರು-ಕೆಂಕೆರೆ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಭೇಟಿ ನೀಡಿದ ಕೇಂದ್ರದ ನ್ಯಾಕ್ ಪೀರ್ ಕಮಿಟಿಯೊಂದಿಗೆ ಪ್ರಾಂಶುಪಾಲೆ ಡಿ..ದೇವಿರಮ್ಮ ಹಾಗೂ ಬೋಧಕ ವರ್ಗದವರು. |
ಕಮಿಟಿಯಲ್ಲಿ ಕೇರಳದ ವಿಶ್ರಾಂತ ಉಪಕುಲಸಚಿವ ಡಾ. ಎಂ.ಓ ಕೋಶಿ , ಡಾ.ಅಜಯ್ ಕೆ.ಗುಪ್ತಾ, ಸದಸ್ಯ ಸಂಚಾಲಕರಾದ ಗೋರಖ್ ಪುರ ವಿ.ವಿಯ ದೀನ್ ದಯಾಳ್ ಉಪಾಧ್ಯಾಯ, ಮಧ್ಯಪ್ರದೇಶದ ಸರ್ಕಾರಿ ಎಂ.ಎಚ್.ಕಾಲೇಜಿನ ವಿಶ್ರಾಂತ ಪ್ರಾಂಶುಪಾಲೆ ಡಾ.ಚಿತ್ರಲೇಖ ಚೌಹಾನ್ ಇದ್ದರು. ಕಾಲೇಜು ಕಡೆಯಿಂದ ಪ್ರಾಂಶುಪಾಲೆ ಡಿ..ದೇವಿರಮ್ಮ, ನ್ಯಾಕ್ ಕೋ-ಆರ್ಡಿನೇಟರ್ ಆಗಿ ಶ್ರೀನಿವಾಸಪ್ಪ, ಐಕ್ಯೂಎಸಿ ಕೋ-ಅರ್ಡಿನೇಟರ್ ಆಗಿ ಅಶೋಕ್ ಉಪಸ್ಥಿತಿತರಿದ್ದು ಪರಾಮರ್ಶನ ಸಭೆ ನಡೆಸಿದರು.
ಕಾಲೇಜಿನ ಕುಂದುಕೊರತೆಗಳನ್ನು ಅವಲೋಕಿಸಿದ ಅವರು ಕೆಲ ಸಲಹೆಗಳನ್ನು ನೀಡಿದರಲ್ಲದೆ ಮೂಲಭೂತ ಸೌಕರ್ಯಗಳ ಕುರಿತಂತೆ ವಿದ್ಯಾರ್ಥಿಗಳ ಶೈಕ್ಷಿಣಿಕ ಗುಣಮಟ್ಟ, ಬೋಧಕರ ಬೋಧನಾ ವಿಧಾನ ಸೇರಿದಂತೆ ಉನ್ನತ ಶಿಕ್ಷಣ ಸುಧಾರಿಸುವಲ್ಲಿ ಕೈಗೊಂಡಿರುವ ಕ್ರಮಗಳನ್ನು ಸಮಗ್ರವಾಗಿ ಪರಿಶೀಲಿಸಿ ಅದಕ್ಕೆ ಸಂಬಂಧಿಸಿದಂತೆ ಕೆಲ ಸೂಚನೆ ನೀಡಿರುವುದಾಗಿ ಪ್ರಾಂಶುಪಾಲೆ ದೇವಿರಮ್ಮ ತಿಳಿಸಿದರು. ಅಲ್ಲದೆ ಇನ್ನು ಕೆಲ ದಾಖಲೆಗಳನ್ನು ಸಲ್ಲಿಸುವಂತೆ ತಿಳಿಸಿದ್ದು ಅದರನ್ವಯ ದಾಖಲೆಗಳನ್ನು ಸಿದ್ದಗೊಳಿಸಿ ಕಮಿಟಿಯವರಿಗೆ ಕಳುಹಿಸಿ ಕೊಡಲಿರುವುದಾಗಿ ತಿಳಿಸಿದರು. ಕಮಿಟಿಯ ಭೇಟಿಯ ಸಂದರ್ಭದಲ್ಲಿ ಉಪನ್ಯಾಸಕರಾದ ಶಂಕರಲಿಂಗಯ್ಯ, ಸೈಯ್ಯದ್ ಇಬ್ರಾಹಿಂ, ಶಿವಯ್ಯ,ಹನುಮಂತಪ್ಪ,ಚಂದ್ರಮೌಳಿ,ಕುಮಾರ ಸ್ವಾಮಿ, ಗ್ರಂಥಪಾಲಕ ಲೋಕೇಶ್ ನಾಯಕ್ ಸೇರಿದಂತೆ ಸಿಬ್ಬಂದಿಯವರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ