ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದವತಿಯಿಂದ ಹೋಬಳಿಯ ಲಕ್ಕೇನಹಳ್ಳಿಯಲ್ಲಿ ಇಂದಿನಿಂದ (ತಾ.25) ಗುರುವಾರದಿಂದ ತಾ.1 ರ ಬುಧವಾರದ ವರೆಗೆ ಒಂದುವಾರದ ಕಾಲ 2014-15 ನೇ ಸಾಲಿನ ಎನ್.ಎಸ್.ಎಸ್. ವಿಶೇಷ ಶಿಬಿರ ನಡೆಯಲಿದೆ.
ಶಾಸಕ ಸಿ.ಬಿ.ಸುರೇಶ್ ಬಾಬು ಅಧ್ಯಕ್ಷತೆಯಲ್ಲಿ ನಡೆಯುವ ಶಿಬಿರವನ್ನು ಜಿ.ಪಂ.ಸದಸ್ಯೆ ನಿಂಗಮ್ಮ ಉದ್ಘಾಟಿಸುವರು. ಶಿಬಿರದ ನಿರ್ದೇಶಕರಾದ ಪ್ರಾಚಾರ್ಯ ನಟರಾಜ್ ಪ್ರಾಸ್ತಾವಿಕ ನುಡಿಗಳನ್ನಾಡುವರು. ತಾ.ಪಂ.ಸದಸ್ಯೆ ಕವಿತಾ,ಗ್ರಾ.ಪಂ.ಅಧ್ಯಕ್ಷೆ ಕರಿಯಮ್ಮ,ಉಪಾಧ್ಯಕ್ಷ ಹರೀಶ್,ಸದಸ್ಯರಾದ ಭಾಗ್ಯಮ್ಮ,ಈರಮ್ಮ,ಕಾರ್ಯುದರ್ಶಿ ರೇವಯ್ಯ ತಾಲ್ಲೂಕು ನೌಕರ ಸಂಘದ ಅಧ್ಯಕ್ಷ ಪರಶಿವಮೂರ್ತಿ ಸೇರಿದಂತೆ ಇತರರು ಆಗಮಿಸಲಿದ್ದು ಒಂದುವಾರದ ಕಾಲ ನಿತ್ಯ ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮ ನಡೆಯಲಿರುವುದಾಗಿ ಶಿಬಿರಾಧಿಕಾರಿ ಆರ್.ಯೋಗೀಶ್ ತಿಳಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ