ಹುಳಿಯಾರಿನ ನಾಢಕಛೇರಿಯಲ್ಲಿ ನಡೆದ ಪಿಂಚಣಿ ಆದಾಲತ್ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಕಾಮಾಕ್ಷಮ್ಮ ಫಲಾನುಭವಿಗಳಿಗೆ ಮಂಜೂರಾತಿ ಪತ್ರ ವಿತರಿಸಿದರು. |
ಹುಳಿಯಾರು ನಾಢಕಚೇರಿಯ ಆವರಣದಲ್ಲಿ ಸೋಮವಾರ ನಡೆದ ಪಿಂಚಣಿ ಆದಾಲತ್ ಕಾರ್ಯಕ್ರಮದಲ್ಲಿ ಶಾಸಕ ಸಿ.ಬಿ.ಸುರೇಶ್ ಬಾಬು ಹೋಬಳಿ ವ್ಯಾಪ್ತಿಯ ಅರ್ಹ ಫಲಾನುಭವಿಗಳಿಗೆ ಆದೇಶಪತ್ರ ವಿತರಿಸಿದರು.
ಹೋಬಳಿಯ 13 ಕಂದಾಯವೃತ್ತಗಳ ವ್ಯಾಪ್ತಿಯ 53 ಜನರಿಗೆ ಮನಸ್ವಿನಿ , ಸಂಧ್ಯಾಸುರಕ್ಷಾ, ವಿಧವಾವೇತನ,ಅಂಗವಿಕಲ ವೇತನ ಪಡೆಯಲು ಮಂಜೂರಾತಿ ಪತ್ರಗಳನ್ನು ವಿತರಿಸಲಾಯಿತು.
ಬೆಳಿಗ್ಗೆ 11 ಕ್ಕೆ ಪ್ರಾರಂಭವಾಗಬೇಕಿದ್ದ ಕಾರ್ಯಕ್ರಮ ಎರಡು ಗಂಟೆ ತಡವಾಗಿ ಮಧ್ಯಾಹ್ನದ ವೇಳೆಗೆ ಪ್ರಾರಂಭವಾಗಿದ್ದು, ಬೆಳಿಗ್ಗಿನಿಂದಲೇ ಸಾರ್ವಜನಿಕರು ಇಲ್ಲಿ ಕಾದುಕೂರುವಂತಾಗಿತ್ತು. ಮಂಜೂರಾತಿ ಪತ್ರ ಪಡೆಯಲು ಹೆಸರು ಕೂಗಿದಾಗ ಫಲಾನುಭವಿಗಳು ಬಾರದೆ ಇದ್ದಾಗ ಕೆಲ ಗ್ರಾಮದ ಸಾರ್ವಜನಿಕರು ಈ ಪಿಂಚಣಿ ಆದಲಾತ್ ಕಾರ್ಯಕ್ರಮದ ಬಗ್ಗೆ ಸೂಕ್ತಪ್ರಚಾರವಿಲ್ಲ , ನಮಗ್ಯಾರು ತಿಳಿಸಿಲ್ಲ ಎಂದು ಚಕಾರವೆತ್ತಿದರು.
ನಂತರ ತಹಶೀಲ್ದಾರ್ ಕಾಮಾಕ್ಷಮ್ಮ ಮಾತನಾಡಿ ಕಂದಾಯ ವೃತ್ತದ ಎಲ್ಲಾ ಗ್ರಾಮಲೆಖ್ಖಿಗರಿಗೂ ಈ ಬಗ್ಗೆ ಪ್ರತಿ ಮನೆಗಳಿಗೆ ಹೋಗಿ ತಿಳಿಸುವಂತೆ ಹೇಳಲಾಗಿದೆ ಅದರಂತೆ ತಿಳಿಸುವ ಕಾರ್ಯ ಮಾಡಿದ್ದಾರೆ ಎಂದು ಹೇಳಿ ಸಾರ್ವಜನಿಕರನ್ನು ಸುಮ್ಮನೆ ಮಾಡಿದರು.
ಈ ವೇಳೆ ಉಪತಹಶೀಲ್ದಾರ್ ನಾರಾಯಣ್, ಕಂದಾಯ ತನಿಖಾಧಿಕಾರಿ ಹನುಮಂತನಾಯಕ್, ಶೀರಸ್ಥೆದಾರ್ ಬಸವರಾಜು, ಮುಖ್ಯಕಾರ್ಯನಿರ್ವಹಣಾಧಿಕಾರಿ ಕೃಷ್ಣಮೂರ್ತಿ, ಗ್ರಾ.ಪಂ.ಅಧ್ಯಕ್ಷೆ ಕಾಳಮ್ಮ, ಜಿ.ಪಂ.ಸದಸ್ಯೆ ಮಂಜುಳಾ,ಗ್ರಾಮಲೆಖ್ಖಿಗರಾದ ಶ್ರೀನಿವಾಸ್,ಸುಬ್ಬರಾಯಪ್ಪ ಸೇರಿದಂತೆ ಗ್ರಾ.ಪಂ. ಸದಸ್ಯರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ