ಹುಳಿಯಾರು ಪಟ್ಟಣಪ ವಾಸವಿ ಶಾಲೆಯಲ್ಲಿ ಮಕ್ಕಳಿಂದ ಪ್ರತಿಷ್ಠಾಪಿಸಿದ್ದ ಗಣಪನ ವಿಸರ್ಜನಾ ಕಾರ್ಯ ಶನಿವಾರ ನಡೆಯಿತು.
ಪ್ರತಿಷ್ಠಾಪನೆಯ ದಿನದಿಂದ ಗಣೇಶನಿಗೆ ನಿತ್ಯ ಶಾಲಾಮಕ್ಕಳೆ ಪೂಜೆ ನೆರವೇರಿಸಿದ್ದು ಶನಿವಾರ ಗಣಪನ ವಿಸರ್ಜನೆ ಅಂಗವಾಗಿ ಮಂಟಪ ಸಿದ್ದಮಾಡಿ ಅದರಲ್ಲಿ ಗಣೇಶ ಮೂರ್ತಿಯನ್ನು ಕುಳ್ಳಿರಿಸಿ ಹೆಗಲ ಮೇಲೆ ಹೊತ್ತು ನಾಸಿಕ್ ಡೋಲು ವಾದ್ಯದೊಂದಿಗೆ ಹೆಜ್ಜೆಹಾಕುತ್ತಾ ಊರಿನ ಬೀದಿಯಲ್ಲಿ ಪಟಾಕಿ ಸಿಡಿಸುತ್ತಾ, ಜೈಕಾರ ಕೂಗುತ್ತಾ ಮೆರವಣಿಗೆ ಮಾಡಲಾಯಿತು. ನಂತರ ಎಲ್ಲ ಮಕ್ಕಳಿಗೂ ಪ್ರಸಾದ ವಿತರಿಸಿ ಶಾಲಾವರಣದಲ್ಲಿ ಗಣೇಶ ಮೂರ್ತಿಯನ್ನು ವಿಸರ್ಜಿಸಲಾಯಿತು. ಈ ಸಂಧರ್ಭದಲ್ಲಿ ಸಂಸ್ಥೆಯ ಬಿ.ವಿ.ಶ್ರೀನಿವಾಸ್, ಮುಖ್ಯಶಿಕ್ಷಕರಾದ ಮಹೇಶ್,ರಮೇಶ್, ಸಹ ಶಿಕ್ಷಕರಾದ ರವಿ,ಪ್ರಸಾದ್,ಮೋಹನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ