ಹುಳಿಯಾರು ಹೋಬಳಿ ಕೆಂಕೆರೆ ಗ್ರಾಮದ ತಿಮ್ಮಪ್ಪನ ದೇವಾಲಯ ಹಾಗೂ ಹಳೆಮಠದಲ್ಲಿ ಪ್ರತಿಷ್ಠಾಪಿಸಿದ್ದ ಗಣಪತಿಗಳನ್ನು ಜೋಡಿಯಾಗಿ ಮೆರವಣಿಗೆ ಮಾಡಿ ಭಾನುವಾರ ಸಂಜೆ ವಿಸರ್ಜಿಸಲಾಯಿತು.
ಹುಳಿಯಾರು ಹೋಬಳಿ ಕೆಂಕೆರೆ ಗ್ರಾಮದ ತಿಮ್ಮಪ್ಪನ ದೇವಾಲಯ ಹಾಗೂ ಹಳೆಮಠದಲ್ಲಿ ಪ್ರತಿಷ್ಠಾಪಿಸಿದ್ದ ಗಣಪತಿಗಳನ್ನು ಜೋಡಿಯಾಗಿ ಮೆರವಣಿಗೆ ಮಾಡಿ ವಿಸರ್ಜಿಸಲಾಯಿತು. |
ಪ್ರತಿ ವರ್ಷದಂತೆ ಈಬಾರಿಯೂ ಸಹ ಈ ಎರಡು ಕಡೆ ಗಣಪನನ್ನು ಪ್ರತಿಷ್ಠಾಪಿಸಿ ನಿತ್ಯ ಪೂಜೆ ಸಲ್ಲಿಸಿ ಪನಿವಾರ ವಿತರಿಸಲಾಗುತ್ತಿತ್ತು. ಅಲ್ಲದೆ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ಸಹ ನಡೆಸಲಾಗುತ್ತಿತ್ತು. ವಿಸರ್ಜನೆಯ ಅಂಗವಾಗಿ ಭಾನುವಾರ ಬೆಳಿಗ್ಗೆ ಸ್ವಾಮಿಗೆ ವಿಶೇಷ ಪೂಜೆ ಮಾಡಿ ಪ್ರಸಾದ ವಿತರಿಸಿದ ನಂತರ ಎರಡು ಗಣಪನನ್ನು ಮಂಟಪದಲ್ಲಿ ಕುಳ್ಳಿರಿಸಿ ನಾಸಿಕ್ ಡೋಲಿನ ವಾದ್ಯಕ್ಕೆ ಹೆಜ್ಜೆಹಾಕುತ್ತಾ, ಪಟಾಕಿ ಸಿಡಿಸುತ್ತಾ ಗ್ರಾಮದ ಬೀದಿಬೀದಿಗಳಲ್ಲಿ ಮೆರವಣಿಗೆ ನಡೆಸಿ ಸಂಜೆ ವೇಳೆಗೆ ದೊಡ್ಡಹಳ್ಳದ ಡ್ಯಾಂನಲ್ಲಿ ಎರಡು ಗಣಪತಿಯನ್ನು ಜೋಡಿಯಾಗಿ ವಿಸರ್ಜಿಸಲಾಯಿತು.
ಈ ಸಂದರ್ಭದಲ್ಲಿ ಕೊಟ್ರೇಶ್,ಶರತ್, ಚರಣ್,ರಾಜೇಶ್, ವಿರೂಪಾಕ್ಷ, ಸಚಿನ್, ಹೇಮಂತ್, ಗಂಗಾಧರ್,ರಂಗ,ನಾಗ,ಜಗದೀಶ್ ಸೇರಿದಂತೆ ಇತರರು ಪಾಲ್ಗೊಂಡಿದ್ದು ಸಡಗರ ಸಂಭ್ರಮದಿಂದ ಗಣಪನನ್ನು ವಿಸರ್ಜಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ