ಹುಳಿಯಾರು ಹೋಬಳಿ ಛಾಯಾಚಿತ್ರ ಗ್ರಾಹಕರ ಸೇವಾ ಛಾರಿಟಬಲ್ ಟ್ರಸ್ಟ್ ವತಿಯಿಂದ 175 ನೇ ವರ್ಷದ ಛಾಯಾಚಿತ್ರಗ್ರಾಹಕರ ದಿನ ಹಾಗೂ ಗೌರಿ-ಗಣೇಶ ಹಬ್ಬದ ವಿಶೇಷವಾಗಿ ಪಟ್ಟಣದ ಗಣಪತಿ ದೇವಾಲಯದಲ್ಲಿ ಮಕ್ಕಳ ಭಾವಚಿತ್ರ ಸ್ಪರ್ಧೆ ಇಂದು(ತಾ.11) ಗುರುವಾರ ನಡೆಯಲಿದೆ.
ಸ್ಪರ್ಧೆಯಲ್ಲಿ 1 -3 ವರ್ಷದ ಮಕ್ಕಳು ಹಾಗೂ 3 - 5 ವರ್ಷದ ಮಕ್ಕಳಿಗಾಗಿ ಪ್ರತ್ಯೇಕ ವಿಭಾಗದಲ್ಲಿ ಸ್ಪರ್ಧೆಗಳು ನಡೆಯಲಿದ್ದು, ಪ್ರತಿ ವಿಭಾಗದಲ್ಲಿ ವಿಜೇತರಾದವರಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನವಿದೆ. ಸ್ಪರ್ಧೆಯಲ್ಲಿ ಭಾಗವಹಿಸಿದ ಪ್ರತಿಯೊಂದು ಮಗುವಿಗು ನೆನಪಿನ ಕಾಣಿಕೆ ನೀಡುವುದಾಗಿ ಹಾಗೂ ಸ್ಪರ್ಧೆಗೆ ಯಾವುದೇ ಪ್ರವೇಶ ಶುಲ್ಕವಿರುವುದಿಲ್ಲ ಎಂದು ಸಂಘದ ಅಧ್ಯಕ್ಷ ರಾಜುಬಡಗಿ ಅವರು ತಿಳಿಸಿದ್ದಾರೆ.ಹೆಚ್ಚಿನ ವಿವರಕ್ಕೆ ರಾಜುಬಡಗಿ (9141282298), ತಾಂಡವಾಚಾರ್(9141601711), ಸುದರ್ಶನ್(9141688755), ಚಂದ್ರಶೇಖರ್(9880564922) ಸಂಪರ್ಕಿಸಬಹುದಾಗಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ