ಹುಳಿಯಾರು ಹೋಬಳಿ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗಲು ಮುಸ್ಲಿಂ ಯುವಕ ಸಂಘದಿಂದ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.
ಹುಳಿಯಾರಿನ ಕೆರೆಏರಿ ಮೇಲಿನ ಬಾಬಾ ಫಕ್ರುದ್ದೀನ್ ದರ್ಗಾದ ಬಳಿ ಮುಸ್ಲಿಂ ಯುವಕ ಸಂಘದವರು ಮಳೆಗಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. |
ತಮ್ಮ ಆರಾಧ್ಯ ದೈವ ಅಲ್ಲಾನ ಪ್ರತಿರೂಪವೆಂದೆ ನಂಬಿರುವ ಹುಳಿಯಾರು ಕೆರೆಏರಿ ಮೇಲಿರುವ ಬಾಬಾ ಫಕ್ರುದ್ದೀನ್ ದರ್ಗಾದ ಬಳಿ ಮುಸ್ಲಿಂ ಸಂಘಟನೆಯ ಯುವಕರೆಲ್ಲಾ ಸೇರಿ ಸಾಮೂಹಿಕವಾಗಿ ಪ್ರಾರ್ಥಿಸುವ ಮೂಲಕ ನಮ್ಮೂರಿಗೆ ಉತ್ತಮ ಮಳೆಯಾಗಿ ಬರ ನಿವಾರಣೆಯಾಗಲಿ ಎಂದು ಪ್ರಾರ್ಥಿಸಿದರು.
ಈ ಬಗ್ಗೆ ಮಾತನಾಡಿದ ಯುವಕ ಸಂಘದ ಅಧ್ಯಕ್ಷ ಇಮ್ರಾಜ್ ಹೋಬಳಿ ವ್ಯಾಪ್ತಿಯಲ್ಲಿ ಮಳೆ ಸರಿಯಾಗಿ ಆಗದೆ ರೈತರಿಗೆ ಫಸಲು ಕೈಹತ್ತುತ್ತಿಲ್ಲ ಹಾಗೂ ಸ್ವಲ್ಪ ಮಳೆಗೆ ಬಿತ್ತಿದ್ದ ರಾಗಿ ಚಿಗುರೊಡೆದಿದ್ದರೂ ಮಳೆಯಿಲ್ಲದೆ ಒಣಗುವಂತಾಗಿದೆ ಇದರಿಂದ ಬಿತ್ತಿದ ಬೀಜವೂ ಸಹ ದೊರೆಯದಂತಾಗಿದೆ ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಮಳೆಗಾಗಿ ಹತ್ತಾರು ರೀತಿಯ ಪೂಜೆಗಳನ್ನು ಮಾಡುತ್ತಾರೆ ಆ ನಿಟ್ಟಿನಲ್ಲಿ ತಾವು ಸಹ ತಮ್ಮ ದೈವ ಅಲ್ಲಾನಲ್ಲಿ ಮಳೆಗಾಗಿ ಪ್ರಾರ್ಥಿಸುವ ಕಾರ್ಯ ಮಾಡಿರುವುದಾಗಿ ತಿಳಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ