ಪಟ್ಟಣದ ಬಿ.ಎಚ್.ರಸ್ತೆಯ ಎಸ್.ಬಿ.ಐ ಬ್ಯಾಂಕ್ ಎದುರಿನ ಖಾಸಗಿ ಕಂಪನಿಗೆ ಸೇರಿದ ಟವರ್ ನಲ್ಲಿ ವಿದ್ಯುತ್ ಶಾಕ್ ನಿಂದಾಗಿ 6 ಮೇಕೆಗಳು ಸ್ಥಳದಲ್ಲೇ ಸಾವನಪ್ಪಿರುವ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ.
ಕರಿಯಪ್ಪ ಎಂಬುವರಿಗೆ ಸೇರಿದ್ದ ಮೇಕೆಗಳು ಮೇಯುತ್ತಾ ಮೇಯುತ್ತಾ ಟವರ್ ಬಳಿ ಹೋಗಿದ್ದು ಅಲ್ಲಿ ಟವರ್ ಗೆ ವಿದ್ಯುತ್ ಸಂಪರ್ಕ ಪಡೆದಿದ್ದ ವೈರ್ ಗಳು ಅಸ್ಥವ್ಯಸ್ಥವಾಗಿ ಬಿದ್ದಿದ್ದು, ಮೇಕೆಗಳು ಆ ವೈರ್ ಗಳನ್ನು ತುಳಿದು ಸಾವನಪ್ಪಿವೆ.
ಹುಳಿಯಾರು ಪಟ್ಟಣದ ಟಾಟಾ ಡೆಕೋಮ ಟವರ್ ನ ಆವರಣದಲ್ಲಿ ವಿದ್ಯುತ್ ಶಾಕ್ ನಿಂದ ಸಾವನಪ್ಪಿದ ಮೇಕೆಗಳು. |
ಟವರ್ ಇರುವ ಜಾಗದಲ್ಲಿ ಯಾವುದೇ ರೀತಿಯ ಸುರಕ್ಷತಾ ಕ್ರಮಗಳನ್ನು ಕೈಗೊಂಡಿಲ್ಲ, ಟವರ್ ಸುತ್ತಾ ಸರಿಯಾದ ಬೇಲಿಕೂಡ ಇಲ್ಲ , ವೈರ್ ಗಳೆಲ್ಲಾ ಕಿತ್ತು ಬಿದ್ದಿದ್ದರೂ ಸಹ ಅದನ್ನು ಕೂಡಲೇ ಸರಿ ಮಾಡಿಸದೆ ಹಾಗೆಯೇ ಬಿಟ್ಟು ತಮಗಿಷ್ಟ ಬಂದಾಗ ಸರಿ ಮಾಡಿಸುತ್ತಿದ್ದಾರೆ ಈ ಬಗ್ಗೆ ಹಲವಾರು ಬಾರಿ ಟವರ್ ನವರಿಗೆ ಎಚ್ಚರಿಸಿದ್ದರೂ ಸಹ ಗಮನ ಹರಿಸಿಲ್ಲವೆಂದು ಗ್ರಾ.ಪಂ. ಸದಸ್ಯ ಧನುಷ್ ರಂಗನಾಥ ಹಾಗೂ ಯುವಕಾಂಗ್ರೆಸ್ ನ ವೆಂಕಟೇಶ್ ಹರಿಹಾಯ್ದರು. ವೆಂಕಟಾಛಲಿ ಶೆಟ್ರು, ಪ್ರಭಾಕರ್,ನಾಗೇಶ್ ಎಂಬುವರು ಈ ಟವರ್ ಗೆ ಸ್ಥಳ ನೀಡಿದ್ದು ,ಪಟ್ಟಣದ ಹೃದಯಭಾಗದಲ್ಲಿರುವ ಟವರ್ ನಿಂದಾಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಇವುಗಳನ್ನು ಬೇರೆಡೆ ತೆರವುಗೊಳಿಸುವಂತೆ ಜಮೀನುದಾದರಿಗೂ ಹಾಗೂ ಕಂಪನಿಯವರಿಗೂ ಗ್ರಾ.ಪಂ.ನಿಂದ ನೋಟಿಸ್ ನೀಡಿದ್ದರೂ ಸಹ ಯಾರು ಈ ಬಗ್ಗೆ ಗಮನ ಮಾಡಿಲ್ಲ. ಅಲ್ಲದೆ ಪ್ರತಿ ವರ್ಷ ಪಂಚಾಯ್ತಿಯಿಂದ ಪಡೆಯಬೇಕಾದ ಅನುಮತಿಪತ್ರವನ್ನು ಸಹ ನವೀಕರಿಸದೆ ಹಾಗೆಯೇ ಮುಂದುವರೆಯುತ್ತಿದ್ದಾರೆ ಎಂದರು.
ಈಗ 6 ಮೇಕೆಗಳು ಸತ್ತು ಸುಮಾರು 60 ಸಾವಿರ ನಷ್ಟವಾಗಿದ್ದು ಅದಕ್ಕೆ ತಕ್ಕ ಪರಿಹಾರ ನೀಡುವಂತೆ ಹಾಗೂ ಶೀಘ್ರವೇ ಟವರ್ ಗಳನ್ನು ಬೇರೆಡೆ ಸ್ಥಳಾಂತರಿಸುವಂತೆ ಒತ್ತಾಯಿಸಿದ್ದಾರೆ. ಇಲ್ಲವಾದರೆ ಪಂಚಾಯ್ತಿಯಿಂದಲೇ ಅವುಗಳ ತೆರವು ಕಾರ್ಯ ನಡೆಸುವುದಾಗಿ ಎಚ್ಚರಿಸಿದ್ದಾರೆ. ಸ್ಥಳಕ್ಕೆ ಎಸ್.ಓ ಉಮೇಶ್ ನಾಯಕ್ ಆಗಮಿಸಿ ಪರಿಶೀಲಿಸಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ