ಹುಳಿಯಾರು ಹೋಬಳಿ ಕೆಂಕೆರೆ ತೇರುಬೀದಿಯ ಗಣೇಶನ ದೇವಾಲಯದಲ್ಲಿ ಶ್ರೀವಿನಾಯಕ ಭಕ್ತಮಂಡಳಿವತಿಯಿಂದ ಪ್ರತಿಷ್ಠಾಪಿಸಿದ್ದ ಗಣೇಶಮೂರ್ತಿಯ ವಿಸರ್ಜನೆ ಕಾರ್ಯ ಗ್ರಾಮದೇವತೆ ಕಾಳಮ್ಮನವರ ಸಮ್ಮುಖದಲ್ಲಿ ಅದ್ಧೂರಿಯಾಗಿ ನಡೆಯಿತು.
ಹುಳಿಯಾರು ಹೋಬಳಿ ಕೆಂಕೆರೆ ತೇರುಬೀದಿಯಲ್ಲಿ ಗಣೇಶನ ವಿಸರ್ಜನೆಯ ಅಂಗವಾಗಿ ಬುಧವಾರ ವೀರಗಾಸೆ ನೃತ್ಯದೊಂದಿಗೆ ಮೆರವಣಿಗೆ ನಡೆಸಲಾಯಿತು. |
ವಿಸರ್ಜನೆ ಅಂಗವಾಗಿ ಕಾಳಮ್ಮ ದೇವಿಯನ್ನು ಪೂರ್ಣಕುಂಭ ಹಾಗೂ ನಡೆಮುಡಿಯಲ್ಲಿ ಗಣೇಶ ದೇವಾಲಯಕ್ಕೆ ಬರಮಾಡಿಕೊಳ್ಳಲಾಯಿತು. ಗಣೇಶನಿಗೆ ಅಭಿಷೇಕ,ಅರ್ಚನೆ, ಸಹಸ್ರನಾಮ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳ ನಂತರ ಮಹಾಮಂಗಳಾರತಿ ನಡೆದು ಆಗಮಿಸಿದ್ದ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಿತು. ಗಣೇಶ ವಿಗ್ರಹ ಹಾಗೂ ಕಾಳಮ್ಮದೇವಿಯನ್ನು ಅಲಂಕೃತ ಮಂಟಪದಲ್ಲಿ ಕುಳ್ಳಿರಿಸಿ ಮಹಿಳಾ ವೀರಗಾಸೆ ನೃತ್ಯ, ಚಿಟ್ಟೆಮೇಳದ ವಾದ್ಯದೊಂದಿಗೆ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಸಂಜೆ ವೇಳೆಗೆ ತೇರುಬೀದಿಯ ಕಲ್ಯಾಣಿಯಲ್ಲಿ ಗಣೇಶನನ್ನು ವಿಸರ್ಜಿಸಲಾಯಿತು. ಮೆರವಣಿಗೆಯುದ್ದಕ್ಕೂ ಪಟಾಕಿ ಸಿಡಿಸುತ್ತಾ, ವಾದ್ಯಕ್ಕೆ ತಕ್ಕ ಹೆಜ್ಜೆ ಹಾಕುತ್ತಾ, ಗಣೇಶನಿಗೆ ಜೈಕಾರ ಹಾಕುತ್ತಾ ಸಡಗರ ಸಂಭ್ರಮದಿಂದ ಮೆರವಣಿಗೆ ನಡೆಸಿದರು.
ಈ ಸಂಧರ್ಭದಲ್ಲಿ ಮಂಡಳಿಯ ಡಿ.ರಮೇಶ್,ಬಾವಿಮನೆ ನಾಗಣ್ಣ,ಬಸಣ್ಣ, ಮಧು, ಅನಿಲ್,ಶಿವಣ್ಣ, ಶೇಖರ್,ಮಹೇಶ್,ಗಣೇಶ್,ಮರುಳಸಿದ್ದಯ್ಯ, ಸಿದ್ದಯ್ಯ,ಪ್ರಸನ್ನ, ರಮೇಶ್, ಸುರೇಶ್, ಪೋಟೋಮಂಜು, ಲೋಕೇಶ್, ಬಾಬು ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ