ಹುಳಿಯಾರು ಪಟ್ಟಣದಲ್ಲಿ ಕಳೆದ ಐದು ವರ್ಷದ ಹಿಂದಷ್ಟೆ ಪ್ರಾರಂಭವಾದ ಕುರುಬ ಸಮುದಾಯದ ಕನಕ ಪತ್ತಿನ ಸಹಕಾರ ಸಂಘ ಷೇರುದಾರರ ಹಾಗೂ ಸಮುದಾಯದವರ ಸಹಕಾರದಲ್ಲಿ ಒಟ್ಟು 8 ಕೋಟಿ 20 ಲಕ್ಷದಷ್ಟು ವಹಿವಾಟು ನಡೆಸಿರುವುದು ಸಂತಸದ ಸಂಗತಿ ಎಂದು ಸಂಘದ ಅಧ್ಯಕ್ಷ ಹೊಸಹಳ್ಳಿ ಅಶೋಕ್ ತಿಳಿಸಿದರು.
ಹುಳಿಯಾರಿನ ಕನಕಪತ್ತಿನ ಸಹಕಾರ ಸಂಘದಲ್ಲಿ ಶನಿವಾರ ನಡೆದ 2013-14 ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಹುಳಿಯಾರಿನ ಕನಕಪತ್ತಿನ ಸಹಕಾರ ಸಂಘದ 2013-14 ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಸಭೆಯಲ್ಲಿ ಅಧ್ಯಕ್ಷ ಹೊಸಹಳ್ಳಿ ಅಶೋಕ್ ಮಾತನಾಡಿದರು. |
ನಮ್ಮ ಸಂಘ ಕಡಿಮೆ ಅವಧಿಯಲ್ಲಿ ಕೋಟ್ಯಾಂತರೂ ವಹಿವಾಟು ನಡೆಸಿ ಸುಮಾರು 3 ಲಕ್ಷದ 49 ಸಾವಿರ ಲಾಭಾಂಶವನ್ನು ಹೊಂದಿ ಸಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚೆಚ್ಚು ಸಾಲ ಸೌಲಭ್ಯಗಳನ್ನು ನೀಡುವ ಮೂಲಕ ಹೆಚ್ಚಿನ ಲಾಭಾಂಶವನ್ನು ಗಳಿಸಲು ಸಮುದಾಯದ ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದರು. ಸಂಘ ಲಾಭಾಂಶದಲ್ಲಿದ್ದರೂ ಸಹ ಕೆಲ ಷೇರುದಾರರು ತಾವು ತೆಗೆದುಕೊಂಡ ಸಾಲವನ್ನು ಮರುಪಾವತಿ ಮಾಡುವಲ್ಲಿ ವಿಳಂಬವಾಗಿ ಸುಮಾರು 54 ಲಕ್ಷ ಬಾಕಿಯಾಗಿದ್ದು ಸಂಘದ ಬೆಳವಣಿಗೆಯನ್ನು ಕುಂಠಿತಗೊಳ್ಳುವಂತೆ ಮಾಡುತ್ತಿದೆ. ಸಾಲ ಪಡೆದವರು ನಿಗದಿತ ಅವಧಿಯಲ್ಲಿ ಮರುಪಾವತಿ ಮಾಡಿ ಸಂಘವನ್ನು ಮತ್ತಷ್ಟು ಅಭಿವೃದ್ದಿಯತ್ತ ಕೊಂಡೊಯ್ಯುವಂತೆ ತಿಳಿಸಿದರು. ಷೇರುದಾರರ ಆಕಾಂಕ್ಷೆಯಂತೆ ಮುಂದಿನ ವಾರ್ಷಿಕ ಸಭೆಯೊಳಗಾಗಿ ಸಂಘಕ್ಕೆ ನಿವೇಶನ ಖರೀದಿಮಾಡಿ ಸ್ವಂತ ಕಟ್ಟಡ ನಿರ್ಮಿಸುವ ಭರವಸೆ ನೀಡಿದರು.
ಸಂಘಕ್ಕೆ ನೂತನ ಕಟ್ಟಡ ನಿರ್ಮಾಣ ಮಾಡುವ, ಡಿವಿಡೆಂಟ್ ವಿತರಿಸುವ ಹಾಗೂ ಪ್ರತಿಭಾಪುರಸ್ಕಾರ ಕಾರ್ಯ ಅಯೋಜಿಸುವಂತೆ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಈ ವೇಳೆ ಜಿ.ಪಂ.ಸದಸ್ಯೆ ಮಂಜುಳಾ ಗ್ರಾ.ಪಂ.ಸದಸ್ಯರಾದ ಬಾಲಣ್ಣ,ಸಿದ್ದಗಂಗಮ್ಮ, ಸಂಘದ ಉಪಾಧ್ಯಕ್ಷ ಸಿದ್ರಾಮಯ್ಯ,ಕೃಷ್ಣಮೂರ್ತಿ,ಬೋರಲಿಂಗಯ್ಯ, ರಂಗನಾಥ್,ಗವಿರಂಗಯ್ಯ,ರೇಖಾ,ಸುಮಿತ್ರ ಸೇರಿದಂತೆ ಸಮುದಾಯದವರು ಉಪಸ್ಥಿತರಿದ್ದರು. ಕಾರ್ಯದರ್ಶಿ ದೇವಿಪ್ರಸಾದ್ ನಿರೂಪಿಸಿ,ವಂದಿಸಿದರು. ಸಿಬ್ಬಂದಿಗಳಾದ ಕೃಷ್ಣಮೂರ್ತಿ,ಪುಷ್ಪಾವತಿ,ನವೀನ್,ಜಯಣ್ಣ ಪ್ರಕಾಶ್ ಇದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ