ಹುಳಿಯಾರು ಪಟ್ಟಣದಿಂದ ನಂದಿಹಳ್ಳಿ ಕಡೆ ಹೋಗುತ್ತಿದ್ದ ಪ್ಯಾಸೆಂಜರ್ ಬಜಾಜ್ ಆಟೋವೊಂದು ರಸ್ತೆ ಮಧ್ಯೆ ಉರುಳಿಬಿದ್ದು ಐವರಿಗೆ ಗಾಯಗಳಾಗಿರುವ ಘಟನೆ ನಂದಿಹಳ್ಳಿ ತೊರೆಸೂರಗೊಂಡನಹಳ್ಳಿ ಮಧ್ಯದ ಅಯ್ಯನಕೆರೆ ಏರಿಮೇಲೆ ಶನಿವಾರ ಮಧ್ಯಾಹ್ನ ಎರಡರ ಸಮಯದಲ್ಲಿ ಘಟಿಸಿದೆ.
ಶಿಕ್ಷಕಿ ಅಂಬಿಕಾ ಎಂಬುವರಿಗೆ ತೀವ್ರ ಪೆಟ್ಟಾಗಿದ್ದು ಹೆಚ್ಚಿನ ಚಿಕಿತ್ಸೆಗೆ ತುಮಕೂರಿಗೆ ಕರೆದೊಯ್ಯಲಾಗಿದೆ. ಬಸವರಾಜು,ಶಶಿಕಿರಣ್,ಪ್ರದೀಪ್ ಶಂಕರಮ್ಮ ಎಂಬುವರಿಗೆ ಅಲ್ಪಸ್ವಲ್ಪ ಗಾಯಗಳಾಗಿದ್ದು ಹುಳಿಯಾರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಗೂಬೆಹಳ್ಳಿಯ ದೇವರಾಜ್ ಅವರಿಗೆ ಸೇರಿಸುವ ಆಟೋದಲ್ಲಿ ಹುಳಿಯಾರಿನಿಂದ ನಂದಿಹಳ್ಳಿ ಕಡೆಗೆ ಹೋಗುವ ವೇಳೆ ಅಯ್ಯನಕೆರೆ ಏರಿಮೇಲಿನ ರಸ್ತೆಯಲ್ಲಿನ ಗುಂಡಿಗಳನ್ನು ತಪ್ಪಿಸಲು ಹೋಗಿ ಆಟೋ ಹತೋಟಿ ತಪ್ಪಿ ರಸ್ತೆ ಬದಿಗೆ ಬಿದ್ದು ಮೂರ್ನಾಲು ಉರುಳು ಉರುಳಿತು, ಆಟೋದಲ್ಲಿ ಹೆಚ್ಚಾಗಿ ಶಾಲಾ ಹುಡುಗರೆ ಇದ್ದು ಅದೃಷ್ಟವಶಾತ್ ಯಾವುದೇ ಹೆಚ್ಚಿನ ಅನಾಹುತ ಸಂಭವಿಸಿಲ್ಲ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ