ತಾಲ್ಲೋಕಿನಾದ್ಯಂತ ಸರ್ಕಾರಿ ಕೆರೆಗಳು ಒತ್ತುವರಿಯಾಗಿರುವುದನ್ನು ತೆರವುಗೊಳಿಸಲು ಮುಂದಾಗಿರುವ ತಾಲ್ಲೂಕು ಆಡಳಿತ ಹುಳಿಯಾರಿನ ಅಮಾನಿಕೆರೆಯ ಒತ್ತುವರಿ ಆಗಿರುವ ಜಾಗವನ್ನು ಪರಿಶೀಲಿಸಿದ್ದು ಇನ್ನೊಂದು ವಾರದೊಳಗೆ ಒತ್ತುವರಿ ತೆರವಿಗೆ ನಿರ್ದಾಕ್ಢಿಣ್ಯ ಕ್ರಮ ಕೈಗೊಳ್ಳಲು ಮುಂದಾಗಲಿದೆ.
ಈ ಹಿಂದೆಯೇ ವೈ.ಎಸ್.ಪಾಳ್ಯ, ಕೇಶವಾಪುರ , ಕೆರೆಸೂರಗೊಂಡನಹಳ್ಳಿ ವ್ಯಾಪ್ತಿಯಲ್ಲಿ ಒತ್ತುವರಿಯಾಗಿರುವ ಪ್ರದೇಶವನ್ನು ಗುರುತು ಮಾಡಲಾಗಿದ್ದು ಒತ್ತುವರಿ ತೆರವುಗೊಳಿಸಲು ಕ್ರಮ ಸಹ ಕೈಗೊಳ್ಳಲಾಗಿತ್ತು. ಸದ್ಯ ಬಸ್ ನಿಲ್ದಾಣದಿಂದ ಪ್ರಾರಂಭಿಸಿ ಲಕ್ಷ್ಮಿ ಹಾರ್ಡ್ ವೇರ್ , ಶಂಕರಪುರ ಬಡಾವಣೆಯ ಕೆರೆ ಅಂಗಳದವರೆಗೆ ಒತ್ತುವರಿ ಮಾಡಿಕೊಂಡು ಅಂಗಡಿ ಪ್ರದೇಶ ಮತ್ತು ಮನೆಗಳನ್ನು ನಿರ್ಮಿಸಿರುವುದನ್ನು ಪರಿಶೀಲಿಸಲಾಗಿದ್ದು ನಾಳೆ,ನಾಡಿದ್ದರಲ್ಲೇ ಇವರೆಲ್ಲರಿಗೂ ನೋಟಿಸ್ ಜಾರಿ ಮಾಡಲಾಗುತ್ತಿದ್ದು ಒಂದು ವಾರದ ಅವಧಿಯೊಳಗೆ ಸ್ವಯಂತೆರವುಗೊಳಿಸಲು ಸೂಚಿಸಲಾಗುತ್ತಿದ್ದು, ತಪ್ಪಿದಲ್ಲಿ ಇಲಾಖೆವತಿಯಿಂದಲೇ ತೆರವುಗೊಳಿಸಲು ಮುಂದಾಗಲಿದ್ದಾರೆ.
ಕೋರ್ಟ್ ಆದೇಶದಂತೆ ಒತ್ತುವರಿ ತೆರವುಗೊಳಿಸಲು ಮುಂದಾಗಬೇಕಿದ್ದು ನಿರಾಸಕ್ತಿ ತೋರಿದಲ್ಲಿ ನ್ಯಾಯಾಲಯದ ಆದೇಶ ಉಲ್ಲಂಘನೆಯಾಗಲಿದ್ದು ಪ್ರಯುಕ್ತ ಈ ಬಾರಿ ನಿರ್ದಾಕ್ಷಿಣ್ಯವಾಗಿ ಯಾರ ಮುಲಾಜಿಗೂ ಒಳಗಾಗದೆ ತೆರವುಗೊಳಿಸಲು ಕಂದಾಯ ಇಲಾಖೆ ಮುಂದಾಗಲಿದೆ. ತಹಶೀಲ್ದಾರ್ ಆದೇಶದಂತೆ ಗ್ರಾಮಲೆಖ್ಖಿಗ ಶ್ರೀನಿವಾಸ್ ಹಾಗೂ ಸಹಾಯಕ ಶಿವಕುಮಾರ್ ಸೇರಿ ಪಟ್ಟಣದ ಕೆರೆಯಲ್ಲಿ ಒತ್ತುವರಿಯಾಗಿರುವ ಜಾಗದಲ್ಲಿನ ಮನೆ ಹಾಗೂ ಅಂಗಡಿ ಮಾಲೀಕರ ವಿಳಾಸವನ್ನು ಪಡೆದು ಪಟ್ಟಿಸಿದ್ದಪಡಿಸಿ ತಹಶೀಲ್ದಾರ್ ಗೆ ಕಳುಹಿಸಿದ್ದು , ತೆರವು ಕಾರ್ಯವಷ್ಟೆ ಬಾಕಿಉಳಿದಿದೆ.
ಸಿದ್ದಪಡಿಸಿರುವ ಪಟ್ಟಿಯಲ್ಲಿ ಒಟ್ಟು 166 ಮನೆ ಹಾಗೂ ಅಂಗಡಿಗಳಿದ್ದು ಇನ್ನೂ ಎರಡುಮೂರು ದಿನಗಳಲ್ಲಿ ನೋಟಿಸ್ ಜಾರಿಯಾಗಲಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ