ಇಲ್ಲಿನ ಶ್ರೀಪಸನ್ನ ಗಣಪತಿ ದೇವಾಲಯದಲ್ಲಿನ ನಂದಿರೂಢ ಬಾಲಗಣಪತಿ ಹಾಗೂ ಇಂದಿರಾನಗರದ ಗಜಾನನ ಸೇವಾ ಸಂಘದವರು ಪ್ರತಿಷ್ಠಾಪಿಸಿದ್ದ ಶೇಷಾರೂಢ ಗಣಪತಿಯ ವಿಸರ್ಜನಾ ಕಾರ್ಯ ಶುಕ್ರವಾರದಂದು ಅದ್ದೂರಿಯಾಗಿ ನಡೆಯಿತು.
ಹುಳಿಯಾರಿನ ಇಂದಿರಾನಗರದ ಗಜಾನನ ಸೇವಾ ಛಾರಿಟಬಲ್ ಟ್ರಸ್ಟ್ ನವರು ಪ್ರತಿಷ್ಠಾಪಿಸಿದ್ದ ಗಣಪತಿಯ ವಿಸರ್ಜನಾ ಸಮಯದಲ್ಲಿ ನೆರದಿದ್ದ ಭಕ್ತಾಧಿಗಳು. |
ಗಣೇಶ ಚತುರ್ಥಿಯಂದು ಪ್ರತಿಷ್ಠಾಪಿಸಲಾಗಿದ್ದು ಗಣೇಶ ಮೂರ್ತಿಗೆ ಒಟ್ಟು 29 ದಿನಗಳ ಕಾಲ ನಿತ್ಯ ಅಲಂಕಾರ,ಅಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಕೈಂಕರ್ಯಗಳನ್ನು ನಡೆಸಲಾಗಿತ್ತು. ಪ್ರತಿ ದಿನ ಸಂಜೆ ಭಜನಾ ಕಾರ್ಯಕ್ರಮ, ಸಂಗೀತ ಕಚೇರಿ, ಪುರಾಣ ಪಠಣ, ಹರಿಕಥೆ ಸೇರಿದಂತೆ ಸಾಂಸ್ಕೃತಿಕಕಾರ್ಯಕ್ರಮಗಳನ್ನು ಸಹ ಜರುಗಿದ್ದವು. ವಿಸರ್ಜನೆಯ ಅಂಗವಾಗಿ ಗುರುವಾರ ರಾತ್ರಿ ಗಣೇಶ ಮೂರ್ತಿಯನ್ನು ಹೂವಿನಿಂದ ಅಲಂಕೃತವಾದ ಭವ್ಯ ಮಂಟಪದಲ್ಲಿ ಕೂರಿಸಿ ಊರಿನ ರಾಜಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.ಜಾನಪದ ಕಲಾ ತಂಡದೊಂದಿಗೆ ಯುವಕರುಗಳು ಸಹ ಹೆಜ್ಜೆಹಾಕುತ್ತಾ ಉತ್ಸವಕ್ಕೆ ರಂಗೇರಿಸಿದ್ದರು. ಶುಕ್ರವಾರ ಬೆಳಿಗ್ಗೆ ಗಣಪತಿಗೆ ಹಾಕಲಾಗಿದ್ದ ಹಾರವನ್ನು ಸಾರ್ವಜನಿಕವಾಗಿ ಹರಾಜು ಹಾಕಿದ ನಂತರ ಮೆರವಣಿಗೆ ಮೂಲಕ ತಿರುಮಲಾಪುರ ಕೆರೆಯಲ್ಲಿಗೆ ತೆರಳಿ ವಿಸರ್ಜಿಸಲಾಯಿತು.ಮೆರವಣಿಗೆಯುದ್ದಕ್ಕೂ ಪೋಲಿಸ್ ಬಂದೋಬಸ್ತ್ ಹಾಕಲಾಗಿತ್ತು. ದೇವಾಲಯ ಸಮಿತಿಯ ಅಧ್ಯಕ್ಷ ಮೋಹನ್ ಕುಮಾರ್, ತಾಂಡಾವಚಾರ್, ಗುಜರಿನಾಗಣ್ಣ, ಸುದರ್ಶನ್,ಅರ್ಚಕರಾಜಣ್ಣ, ಹೂವಿನಬಸವರಾಜು, ಗಜಾನನ ಸಂಘದ ಭೈರೇಶ್, ಪಾತ್ರೆಅ ಸಣ್ಣರಂಗಯ್ಯ,ಕಾಂತರಾಜ್,ನಾಗರಾಜು ಸೇರಿದಂತೆ ಇತರರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ