ಹುಳಿಯಾರು ಪಟ್ಟಣದ ಶ್ರೀಪಸನ್ನ ಗಣಪತಿ ದೇವಾಲಯದಲ್ಲಿ ಪ್ರತಿಷ್ಠಾಪಿಸಿರುವ ನಂದಿರೂಢ ಬಾಲಗಣಪನ ವಿಸರ್ಜನಾ ಕಾರ್ಯ ಶುಕ್ರವಾರ ನಡೆಯಲಿದ್ದು, ಇದರ ಅಂಗವಾಗಿ ಬುಧವಾರದಂದು ಗಣಪತಿಗೆ ಹೋಮ ನಡೆಯಿತು.
|
ಹುಳಿಯಾರಿನ ಗಣಪತಿ ದೇವಾಲಯದಲ್ಲಿ ವಿಶೇಷ ಹೋಮ ನೆರವೇರಿತು. |
ಎಚ್.ಎಸ್.ಲಕ್ಷ್ಮಿನರಸಿಂಹಯ್ಯ ಮತ್ತು ರವಿ ಪೌರೋಹಿತ್ಯದಲ್ಲಿ ಗಣಪತಿಗೆ ನಾಂದಿ, ಪುಣ್ಯಾಹ, ಅರ್ಚನೆ, ಅಭಿಷೇಕ ಸಹಿತ ವಿವಿಧ ಪೂಜಾ ಕೈಂಕರ್ಯಗಳು ನಡೆಸಿದ್ದಲ್ಲದೆ, ನವಗ್ರಹ,ಮೃತ್ಯುಂಜಯ,ಮಹಾಲಕ್ಷ್ಮಿ,ಅಂಜನೇಯ ಹೋಮಗಳನ್ನು ನಡೆಸಲಾಯಿತು. ಮಹಾಮಂಗಳಾರತಿ ಹಾಗೂ ಪೂರ್ಣಾಹುತಿ ಅರ್ಪಿಸಿದ ನಂತರ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಸಲಾಯಿತು.
|
ಹುಳಿಯಾರಿನ ಶ್ರೀ ಗಣಪತಿ ದೇವಾಲಯದಲ್ಲಿ ಬುಧವಾರದಂದು ವಿಶೇಷ ಹೋಮಕಾರ್ಯ ನಡೆದು ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಸಲಾಯಿತು. |
ವೆಂಕಟಾಚಲಪತಿಶೆಟ್ಟರು ಕುಟುಂಬ ವರ್ಗದವರಿಂದ ಪಾನಕಪನಿವಾರ ಸೇವೆ ನಡೆಯಿತು. ಈ ವೇಳೆ ದೇವಾಲಯ ಸಮಿತಿಯ ಅಧ್ಯಕ್ಷ ಮೋಹನ್ ಕುಮಾರ್, ತಾಂಡವಾಚಾರ್, ನಾಗಣ್ಣ, ಕಿರುತೆರೆ ಕಲಾವಿದ ಗೌಡಿ, ಸುದರ್ಶನ್, ದೇವಾಲಯ ಸಮಿತಿಯವರು ಸೇರಿದಂತೆ ಅಪಾರ ಸಂಖ್ಯೆಯ ಭಕ್ತಾಧಿಗಳು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ