ತುಮಕೂರು ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರು ಇಂದು ಗುರುವಾರ ಮಧ್ಯಾಹ್ನ ಪಟ್ಟಣದ ಎಂಪಿಎಸ್ ಶಾಲಾವರಣಾದಲ್ಲಿ ಸಾಂಸ್ಕೃತಿಕ ಸೌರಭ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.
ಶಾಸಕ ಸಿ.ಬಿ.ಸುರೇಶ್ ಬಾಬು ಕಾರ್ಯಕ್ರಮ ಉದ್ಘಾಟಿಸಲಿದ್ದು, ಗ್ರಾ.ಪಂ.ಅಧ್ಯಕ್ಷೆ ಕಾಳಮ್ಮ ಅಧ್ಯಕ್ಷತೆವಹಿಸುವರು. ತಹಶೀಲ್ದಾರ್ ಕಾಮಾಕ್ಷಮ್ಮ, ಜಿ.ಪಂ.ಸದಸ್ಯರಾದ ಮಂಜುಳಾ, ನಿಂಗಮ್ಮ, ತಾ.ಪಂ.ಸದಸ್ಯರಾದ ಫಾತೀಮಾ, ಜಯಲಕ್ಷ್ಮಿ, ಜಯಣ್ಣ,ಕೆಂಕೆರೆನವೀನ್, ಸೀತಾರಾಮಯ್ಯ, ಕವಿತಾ,ವಸಂತಯ್ಯ, ತಾಲ್ಲೂಕು ಕಸಾಪ ಅಧ್ಯಕ್ಷ ರವಿಕುಮಾರ್ ಅತಿಥಿಗಳಾಗಿ ಆಗಮಿಸುವರು. ಸಾಂಸ್ಕೃತಿಕಕಾರ್ಯಕ್ರಮದಲ್ಲಿ ಜಿ.ಎಸ್.ಶ್ರೀಕಂಠಭಟ್ ತಂಡದಿಂದ ಭಕ್ತಿ ಸಂಗೀತ, ಪ್ರಕಾಶ್ ಹೆಗ್ಗಡೆ ತಂಡದವರಿಂದ ಕೊಳಲುವಾದನ, ವಾಣಿವೆಂಕಟರಾಮು ತಂಡದಿಂದ ಭರತನಾಟ್ಯ, ಡಾ.ಲಕ್ಷ್ಮಣದಾಸ್ ತಂಡದಿಂದ ರಂಗಗೀತೆಗಳ ಗಾಯನ,ಮಲ್ಲಿಕಾರ್ಜುನ್ ಕೆಂಕೆರೆ ತಂಡವರಿಂದ ಸುಗಮ ಸಂಗೀತ, ವಿದ್ಯಾವಾರಿಧಿ ಶಾಲಾಮಕ್ಕಳಿಂದ ಜನಪದ ನೃತ್ಯಪ್ರದರ್ಶನ ಹಾಗೂ ಮಾರುತಿ ನಾಟಕ ಮಂಡಳಿಯಿಂದ "ದೈವ ತಂದ ಬಿರುಗಾಳಿ" ನಾಟಕ ಪ್ರದರ್ಶನ ನಡೆಯಲಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ