ಹೋಬಳಿ ವ್ಯಾಪ್ತಿಯಲ್ಲಿ ಕಳೆದ ನಾಲ್ಕೈದು ದಿನಗಳಿಂದ ಹದಮಳೆಯಾಗುತ್ತಿದ್ದು , ರೈತರು ರಸಗೊಬ್ಬರಕೊಳ್ಳಲು ಮುಗಿಬಿದ್ದಿದ್ದಾರೆ. ಯೂರಿಯಾ ಗೊಬ್ಬರಕ್ಕೆ ದಿಢೀರ್ ಬೇಡಿಕೆ ಉಂಟಾಗಿದ್ದು ಅದಕ್ಕಾಗಿ ರೈತರು ಪಟ್ಟಣದ ಗೊಬ್ಬರದ ಅಂಗಡಿಗಳಿಗೆ ಎಡತಾಕುತ್ತಿದ್ದರು.
ಹುಳಿಯಾರಿನ ಬಸ್ ನಿಲ್ದಾಣದ ಗೊಬ್ಬರದ ಅಂಗಡಿಯಲ್ಲಿ ಗೊಬ್ಬರ ಖರೀದಿ ಮಾಡಲು ರೈತರು ಸರದಿ ಸಾಲಿನಲ್ಲಿ ನಿಂತಿರುವುದು. |
ಮಳೆಯಿಲ್ಲದೆ ಗೊಬ್ಬರಕ್ಕೆ ಬೇಡಿಕೆಯಿಲ್ಲದ ಹಿನ್ನಲೆಯಲ್ಲಿ ಅಂಗಡಿಯವರೂ ಸಹ ದಾಸ್ತಾನು ಮಾಡದೆ ರೈತರು ಒಮ್ಮೆಗೆ ಗೊಬ್ಬರಕ್ಕೆ ಬಂದಿದ್ದರಿಂದ ಪರಿಪಾಟಲು ಪಡುವಂತಾಯಿತು. ದಾಸ್ತಾನಿಲ್ಲವೆಂದು ಹೇಳಿದರೂ ಕೂಡ ಕೇಳದ ಜನ ಗೊಬ್ಬರದ ಅಂಗಡಿ ಮುಂದೆ ಕಾಯುತ್ತಿದ್ದ ದೃಶ್ಯಕಂಡುಬಂತು. ಮಂಗಳವಾರ ಸಂಜೆ ಲಾಯಿಯಲ್ಲಿ ಬಂದ ಗೊಬ್ಬರವನ್ನು ಗೋಡನ್ ಗೆ ದಾಸ್ತಾನು ಮಾಡಲು ಬಿಡದೆ ಸ್ಥಳದಲ್ಲೇ ಖರೀದಿ ಮಾಡಿದರು. ಬಂದಗೊಬ್ಬರಕ್ಕಿಂತ ದುಪ್ಪಟ್ಟು ಜನ ಇದುದ್ದರಿಂದ ಸರದಿ ಸಾಲಿನಲ್ಲಿ ಕಾದ ರೈತರಿಗೆ ಒಬ್ಬರಿಗೆ ಒಂದು ಚೀಲದಂತೆ ವಿತರಿಸಲಾಯಿತು. ಬುಧವಾರ ಮುಂಜಾನೆಯೇ ಆಗಮಿಸಿದ ರೈತರು ಗೊಬ್ಬರ ಬರುತ್ತಿದ್ದಂತೆ ಲಾರಿ ಬಳಿಯೇ ಕೊಂಡೈದಿದ್ದು ಒಟ್ಟಾರೆ ಗೊಬ್ಬರಕ್ಕೆ ಬಾರಿ ಬೇಡಿಕೆ ಕಂಡುಬಂದಿದೆ.
ಗೊಬ್ಬರಕ್ಕೆ ದುಪ್ಪಟ್ಟು ದರ: ಗೊಬ್ಬರಕ್ಕೆ ಬೇಡಿಕೆ ಬರುತ್ತದೆ ಎಂದು ಅರಿತಿದ್ದ ವ್ಯಾಪಾರಸ್ಥರು ರೈತರಿಂದ ಹೆಚ್ಚಿನ ದರ ಪಡೆದಿರುವುದಾಗಿ ರೈತ ಸಂಘದವರು ಆರೋಪಿಸಿದ್ದಾರೆ. ನಿಗದಿತದರ 278 ಇದ್ದು, 350 ರೂಪಾಯಿಗೆ ಮಾರಲಾಗುತಿದ್ದು , ಈ ಬಗ್ಗೆ ಕೃಷಿ ಇಲಾಖೆಯವರಿಗೆ ದೂರಿದರು ಸಹ ಪ್ರಯೋಜನವಾಗಿಲ್ಲ. ತಹಶೀಲ್ದಾರ್ ಅವರು ಕೂಡ ಹೆಚ್ಚಿನ ದರಕ್ಕೆ ಮಾರಾಟ ಮಾಡಕೂಡದೆಂದು ನಮ್ಮೆದುರುಗಿ ಹೇಳಿ ಹೋಗಿದ್ದರೂ ಕೂಡ 350 ರೂಪಾಯಿಗಿಂತ ಕಡಿಮೆ ಮಾಡಲು ನಿರಾಕರಿಸಿದ್ದು , ತಕರಾರು ತೆಗೆದವರಿಗೆ ಗೊಬ್ಬರವೇ ಕೊಡುತ್ತಿಲ್ಲವೆಂದು ಚಂದ್ರಪ್ಪ ಅರೋಪಿಸಿದ್ದಾರೆ. ಬೇಡಿಕೆ ಇದೆ ಎಂದು ಹೆಚ್ಚಿನ ದರ ವಸೂಲಿ ಮಾಡುತ್ತಿರುವ ಮಾರಾಟಗಾರರನ್ನು ನಿಯಂತ್ರಿಸಬೇಕೆಂದು ಆಗ್ರಹಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ