ಹುಳಿಯಾರು ಪಟ್ಟಣದ ಕೇಶವ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಹೋಬಳಿ ಮಟ್ಟದ ಪ್ರತಿಭಾಕಾರಂಜಿಯ ಸ್ಪರ್ಧೆಗಳಲ್ಲಿ ಪಾಲ್ಗೊಂಡು ವಿಜೇತರಾಗುವ ಮೂಲಕ ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಪ್ರತಿಭಾಕರಂಜಿ ಸ್ಪರ್ಧೆಯಲ್ಲಿ ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿರುವ ಹುಳಿಯಾರಿನ ಕೇಶವ ವಿದ್ಯಾಸಂಸ್ಥೆ ಮಕ್ಕಳು. |
ಕಿರಿಯರ ವಿಭಾಗದ ಅಭಿನಯ ಗೀತೆಯಲ್ಲಿ ಸಂಜನ ,ಚಿತ್ರಕಲೆಯಲ್ಲಿ ಶೃತಿ,ಛದ್ಮವೇಷದಲ್ಲಿ ವಾಸು, ಗಾಯನದಲ್ಲಿ ಬಿಂದು ತಂಡದವರು ಪ್ರಥಮ ಸ್ಥಾನಗಳಿಸಿದರೆ, ಮಾನಸ ಲಘುಸಂಗೀತದಲ್ಲಿ ದ್ವಿತೀಯ ಹಾಗೂ ಧಾರ್ಮಿಕ ಪಠಣದಲ್ಲಿ ತೃತೀಯ ಸ್ಥಾನಪಡೆದಿದ್ದಾರೆ.
ಹಿರಿಯರ ವಿಭಾಗದಲ್ಲಿ ದೇಶಭಕ್ತಿಗೀತೆಯಲ್ಲಿ ಕೀರ್ತನ್ ರಾವ್ ತಂಡದವರು ಪ್ರಥಮ , ಜಾನಪದನೃತ್ಯದಲ್ಲಿ ಪುರುಷೋತ್ತಮ್ ತಂಡದವರು ದ್ವಿತೀಯ ಸ್ಥಾನ ಪಡೆದಿದ್ದಾರೆ. ಅಭಿನಯಗೀತೆಯಲ್ಲಿ ತೇಜಸ್ವಿನಿ ಧಾರ್ಮಿಕಪಠಣದಲ್ಲಿ ಅನುಷಾ ದ್ವಿತೀಯ ಸ್ಥಾನಗಳಿಸಿದರೆ, ಚಿತ್ರಕಲೆಯಲ್ಲಿ ಭಾವನಾ ತೃತೀಯ ಸ್ಥಾನಪಡೆದು ತಾಲ್ಲೂಕು ಮಟ್ಟಕೆ ಆಯ್ಕೆಯಾಗಿದ್ದಾರೆ. ಸಂಸ್ಥೆಯ ದಾಸಪ್ಪ,ಶ್ರೀಧರ್ ಅಂಬೇಕರ್,ಶಾಲಾ ಶಿಕ್ಷಕರು,ಸಿಬ್ಬಂದಿಯವರು ವಿಜೇತ ಮಕ್ಕಳನ್ನು ಅಭಿನಂದಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ