ಇಲ್ಲಿನ ಶ್ರೀಪಸನ್ನ ಗಣಪತಿ ದೇವಾಲಯದಲ್ಲಿ ಪ್ರತಿಷ್ಠಾಪಿಸಿರುವ ನಂದಿರೂಢ ಬಾಲಗಣಪನ ವಿಸರ್ಜನಾ ಮೆರವಣಿಗೆ ಇಂದು(ತಾ.25) ಗುರುವಾರ ರಾತ್ರಿ ನಡೆಯಲಿದೆ.
ವಿಸರ್ಜನಾ ಮೆರವಣಿಗೆ ಅಂಗವಾಗಿ ಪೋಲಿಸ್ ಇಲಾಖೆ ಹಾಗೂ ಬೆಸ್ಕಾಂ ಇಲಾಖೆ ಸಿಬ್ಬಂದಿಯವರಿಂದ ಮುಂಜಾನೆ ಹಾಗೂ ಸಂಜೆ ಭಕ್ತಾಧಿಗಳಿಂದ ಗಣೇಶ ಮೂರ್ತಿಗೆ ವಿಶೇಷ ಪೂಜಾಕಾರ್ಯ ನಡೆಯಲಿದೆ. ರಾತ್ರಿ 11 ವೇಳೆಗೆ ಸ್ವಾಮಿಯವರನ್ನು ಭವ್ಯ ಹೂವಿನ ಮಂಟಪದಲ್ಲಿ ಕುಳ್ಳಿರಿಸಿ ನಾದಸ್ವರ, ಬೊಂಬೆ ಕುಣಿತ, ವೀರಗಾಸೆ, ನಾಸಿಕ್ ಡೋಲ್,ಕೀಲುಕುದುರೆ,ಡೊಳ್ಳುಕುಣಿತ, ಚಿಟ್ಟಿಮೇಳದೊಂದಿಗೆ ಊರಿನ ರಾಜಬೀದಿಗಳಲ್ಲಿ ಉತ್ಸವ ನಡೆಯಲಿದೆ.ಸುತ್ತಮುತ್ತಲ ಗ್ರಾಮಗಳ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಗಣಪತಿ ಮಂಡಳಿಯವರು ಕೋರಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ