ಹುಳಿಯಾರು ಹೋಬಳಿ ಮಾರುಹೊಳೆ ಗ್ರಾಮದ ಶ್ರೀರಂಗನಾಥಸ್ವಾಮಿ ದೇವಾಲಯದ ಜೀರ್ಣೋದ್ಧಾರಕ್ಕಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆವತಿಯಿಂದ ದೇವಾಲಯ ಸಮಿತಿ ಸದಸ್ಯರಿಗೆ ಒಂದು ಲಕ್ಷ ರೂ ಚೆಕ್ಕನ್ನು ಹಸ್ತಾಂತರಿಸಲಾಯಿತು.
ಹುಳಿಯಾರು ಹೋಬಳಿ ಮಾರುಹೊಳೆಯ ಶ್ರೀರಂಗನಾಥಸ್ವಾಮಿ ದೇವಾಲಯದ ಜೀರ್ಣೋದ್ಧಾರಕ್ಕಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಯೋಜನಾಧಿಕಾರಿ ರೋಹಿತಾಕ್ಷ ಒಂದು ಲಕ್ಷ ರೂನ ಚೆಕ್ ವಿತರಿಸಿದರು. |
ಚೆಕ್ ವಿತರಿಸಿದ ಧರ್ಮಸ್ಥಳ ಯೋಜನೆಯ ಯೋಜನಾಧಿಕಾರಿ ರೋಹಿತಾಕ್ಷ ಮಾತನಾಡಿ , ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರಹೆಗ್ಗಡೆಯವರು ಪುರಾತನ ಕಾಲದ ದೇವಾಲಯಗಳ ಜೀರ್ಣೋದ್ಧಾರಕ್ಕಾಗಿ ಹಣ ನೀಡುತ್ತಾ ಬರುತ್ತಿದ್ದು, ಹಣವನ್ನು ಅಪವ್ಯಯಮಾಡದೆ ವ್ಯವಸ್ಥಿತವಾಗಿ ವಿನಿಯೋಗಿಸಿಕೊಳ್ಳುವಂತೆ ಕರೆ ನೀಡಿದರು.
ಮುಖಂಡ ವೈ.ಕೆ.ರಾಮಯ್ಯ, ಪೂಜಾರ್ ರಾಮಸ್ವಾಮಿ, ಚನ್ನಬಸವಯ್ಯ, ಧರ್ಮಸ್ಥಳ ಯೋಜನೆಯ ವಲಯಾಧಿಕಾರಿ ಸುರೇಶ್ ಸೇರಿದಂತೆ ಗ್ರಾಮಸ್ಥರು, ಧರ್ಮಸ್ಥಳ ಸಂಘದ ಸ್ವಸಹಾಯ ಸಂಘದ ಮಹಿಳೆಯರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ