ವಿದ್ಯಾರ್ಥಿ ದೆಸೆಯಲ್ಲಿ ಪಾಠ ಬೋಧಿಸಿ ಬುದ್ದಿಹೇಳಿ ನಡತೆ ಕಲಿಸಿ ಉನ್ನತ ಸ್ಥಾನಕ್ಕೆ ತಂದ ಗುರುಗಳನ್ನು ನೆನಪಿಸಿಕೊಂಡ ಶಿಷ್ಯ ವೃಂದದವರು ಗುರುನಮನ ಸಲ್ಲಿಸಿದರು.
ಹುಳಿಯಾರಿನ ಅವರ ವಿದ್ಯಾರ್ಥಿಯೊಬ್ಬರ ಮನೆಯಲ್ಲಿ ನಡೆದ ಕವಿಕಾವ್ಯ ಗೋಷ್ಠಿಯ ಸಂದರ್ಭದಲ್ಲಿ ಶಿಷ್ಯರೆಲ್ಲಾ ಸೇರಿ ಗುರುಗಳಾದ ತ.ಶಿ.ಬಸವಮೂರ್ತಿಯವರನ್ನು ಸನ್ಮಾನಿಸುವ ಮೂಲಕ ಗುರುವಂದನೆ ಸಲ್ಲಿಸಿದರು.
ಹುಳಿಯಾರಿನಲ್ಲಿ ನಡೆದ ಕವಿಕಾವ್ಯ ಗೋಷ್ಠಿಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕ ತ.ಶಿ.ಬಸವಮೂರ್ತಿ ಅವರನ್ನು ಅವರ ಶಿಷ್ಯ ವೃಂದದವರು ಸನ್ಮಾನಿಸಿದರು. |
ಗುರುಗಳೊಂದಿಗೆ ಕೆಲವು ಗಂಟೆ ಕಳೆಯುವ ಮೂಲಕ ಹಿಂದಿನ ದಿನಗಳನ್ನು ನೆನಪು ಮಾಡಿಕೊಂಡರು. ತಾವು ಇಂದು ಒಂದು ಉನ್ನತ ಸ್ಥಾನಕ್ಕೇರಲು ಅವರೇ ಕಾರಣವೆಂದು ಕೊಂಡಾಡಿದ್ದಲ್ಲದೆ, ಶಾಲಾ ಹಂತದಲ್ಲಿ ಅವರು ತಮಗೆ ಹೇಳಿದ ಪಾಠಪ್ರವಚನಗಳ ಬಗ್ಗೆ ಬೈದು ತಿಳಿಹೇಳಿದ ವಿಚಾರಗಳ ಬಗ್ಗೆ ಸ್ಮರಿಸಿಕೊಂಡರು. ಶಿಷ್ಯರ ಪ್ರೀತಿ ಅದರಗಳಿಗೆ ಸಂತಸ ವ್ಯಕ್ತಪಡಿಸಿದ ಗುರುಗಳು ಗುರುಬ್ರಹ್ಮ ಗುರುವಿಷ್ಣು ಗುರುಸಾಕ್ಷತ್ ಪರಬ್ರಹ್ಮ ಎಂಬಂತೆ ಜೀವನದಲ್ಲಿ ಪ್ರತಿ ಹಂತದಲ್ಲೂ ಕಲಿಯುವಿಕೆ ಇದ್ದೇಯಿದ್ದು ಅಕ್ಷರ ಪಾಠ ಹಾಗೂ ಜೀವನ ಪಾಠ ಹೇಳಿಕೊಟ್ಟ ಎಲ್ಲರೂ ಗುರು ಸಮಾನರು ಎಂದರು.
ಗುರು ಹಿರಿಯರನ್ನು ಗೌರವಿಸಿ ನಡೆಯುವುದರಿಂದ ಜೀವನದಲ್ಲಿ ಯಶಸ್ಸು ಸಾಧಿಸಬಹುದು ಎಂದರು.
ಈ ಸಂದರ್ಭದಲ್ಲಿ ಶಿಷ್ಯರಾದ ಬಾಲಾಜಿ, ಬಸವರಾಜು, ನರೇಂದ್ರಬಾಬು, ಸುದರ್ಶನ್, ರವಿಕುಮಾರ್,ಗಂಗಾಧರಯ್ಯ,ಶ್ರೀಧರ್,ಪ್ರಸಾದ್,ಪ್ರಭು ಪಾಲ್ಗೊಂಡಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ