ಹುಳಿಯಾರು ಹೋಬಳಿ ಜೋಡಿತಿರುಮಲಾಪುರದ ಕೆರೆ ಒತ್ತುವರಿ ಜಾಗದ ತೆರವು ಕಾರ್ಯ ತಹಶೀಲ್ದಾರ್ ಕಾಮಾಕ್ಷಮ್ಮ ಅವರ ನೇತೃತ್ವದಲ್ಲಿ ಸೋಮವಾರ ನಡೆಯಿತು.
ಹುಳಿಯಾರು ಹೋಬಳಿ ಜೋಡಿತಿರುಮಲಾಫುರದ ಕೆರೆಯ ಒತ್ತುವರಿ ಜಾಗದಲ್ಲಿನ ತೆಂಗಿನ ಮರಗಳನ್ನು ತಹಶೀಲ್ದಾರ್ ಕಾಮಾಕ್ಷಮ್ಮ ಅವರ ನೇತೃತ್ವದಲ್ಲಿ ತೆರವುಗೊಳಿಸಲಾಯಿತು. |
ಈ ಬಗ್ಗೆ ಪತ್ರಿಕೆಯವರೊಂದಿಗೆ ಮಾತನಾಡಿದ ತಹಶೀಲ್ದಾರ್ ಕಾಮಾಕ್ಷಮ್ಮ ತಿರುಮಲಾಪುರ ಕೆರೆ ಹುಳಿಯಾರಿನ ಒಣಕಾಲುವೆಯಿಂದ ಪ್ರಾರಂಭವಾಗಿ ಸೀಗೆಬಾಗಿ,ತೊರೆಮನೆ,ನಂದಿಹಳ್ಳಿವರೆಗೆ ವಿಸ್ತಾರವಾಗಿದ್ದು ಕೆರೆದಂಡೆಯನ್ನು ಒತ್ತುವರಿ ಮಾಡಿಕೊಂಡು ತೆಂಗಿನ ತೋಟಗಳೆ ನಿರ್ಮಾಣ ಮಾಡಿಕೊಂಡಿದ್ದಾರೆ. ಕಳೆದ ಮೂರ್ನಾಲ್ಕು ದಿನಗಳ ಹಿಂದೆಯಷ್ಟೇ ಸರ್ವೆ ಮಾಡಿಸಿ ಕೆರೆ ಜಾಗವನ್ನು ಗುರ್ತಿಸಿ, ಮಾರ್ಕ್ ಮಾಡಲಾಗಿದ್ದು ಸುಮಾರು ಇಪ್ಪತ್ತು ಎಕರೆಯಷ್ಟು ಕೆರೆ ಜಾಗ ಒತ್ತುವರಿಯಾಗಿರುವುದು ಕಂಡುಬಂದಿದೆ. ಸುಮಾರು ನೂರಕ್ಕೂ ಹೆಚ್ಚು ತೆಂಗಿನ ಮರಗಳು ಕೆರೆ ಜಾಗದಲ್ಲಿದ್ದು, ಅವುಗಳನ್ನು ಸಂಪೂರ್ಣವಾಗಿ ತೆಗೆದು ಹಾಕಿಸುವುದಾಗಿ ತಿಳಿಸಿದರು.
ಸರ್ಕಾರಿ ಆದೇಶದಂತೆ ಕೆರೆ ಒತ್ತುವರಿ ಜಾಗವನ್ನು ತೆರವುಗೊಳಿಸುವ ನಿಟ್ಟಿನಲ್ಲಿ ಈ ಕಾರ್ಯಾಚರಣೆ ಕೈಗೊಂಡಿದ್ದು ಹೋಬಳಿ ವ್ಯಾಪ್ತಿಯಲ್ಲಿನ ಎಲ್ಲಾ ಕೆರೆಗಳ ಒತ್ತುವರಿಯನ್ನು ತೆರವುಗೊಳಿಸುತ್ತೇವೆ. ಇಂದು ತಿರುಮಲಾಪುರದ ಕೆರೆ ಜಾಗ ತೆರವು ಮಾಡುವ ಮೂಲಕ ಈ ಕಾರ್ಯಾಚರಣೆ ಚಾಲನೆಗೊಂಡಿರುವುದಾಗಿ ಎಂದು ತಹಶೀಲ್ದಾರ್ ತಿಳಿಸಿದರು.
ಕೆರೆ ಜಾಗದಲ್ಲಿದ್ದ ತೆಂಗಿನ ಮರಗಳನ್ನು ಜೆಸಿಬಿ ಯಂತ್ರ ಬಳಸುವ ಮೂಲಕ ತೆರವುಗೊಳಿಸಲಾಯಿತು. ಈ ವೇಳೆ ಉಪತಹಶೀಲ್ದಾರ್ ಸತ್ಯನಾರಾಯಣ್, ಗ್ರಾಮಲೆಖ್ಖಿಗರಾದ ಶ್ರೀನಿವಾಸ್, ಸುಬ್ಬರಾಯಪ್ಪ, ಸರ್ವೇಯರ್ ಕುಲಕರ್ಣಿ,ಲಕ್ಷ್ಮಿನರಸಿಂಹಯ್ಯ ಸೇರಿದಂತೆ ಕಂದಾಯ ಇಲಾಖೆಯ ಸಿಬ್ಬಂದಿಯವರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ