ರಾಜ್ಯ ಹಿಂದಿ ಸಹ ಶಿಕ್ಷಕರ ಸಂಘಕ್ಕೆ 1 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಮಾಡಲು ಚಿಂತಿಸಲಾಗಿದೆ ಅಲ್ಲದೆ ತಾಲ್ಲೂಕಿನಲ್ಲಿ ಹಿಂದಿ ಶಿಕ್ಷಕರ ವಿಷಯ ಪರಿವಿಕ್ಷಕರ ಹುದ್ದೆ ಇಲ್ಲದೆ ಹಿಂದಿ ಶಿಕ್ಷಕರಿಗೆ ಮಾರ್ಗದರ್ಶನ ಇಲ್ಲವಾಗಿದೆ ಎಂದು ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಕಾರ್ಯದರ್ಶಿ ಗಂಗಾಧರಯ್ಯ ತಿಳಿಸಿದರು.
ಹುಳಿಯಾರಿನ ಬೋರನಕಣಿವೆಯಲ್ಲಿ ತಾಲ್ಲೂಕು ಪ್ರೌಢಶಾಲಾ ಹಿಂದಿ ಭಾಷಾ ಬೋಧಕರ ಸಂಘದಿಂದ ನಡೆದ ಹಿಂದಿ ಶೈಕ್ಷಣಿಕ ಸಮಾವೇಶದಲ್ಲಿ ಮುಖ್ಯ ಶಿಕ್ಷಕಿ ಮಂಜಮ್ಮ ಮಾತನಾಡಿದರು. |
ಹುಳಿಯಾರಿನ ಬೋರನಕಣಿವೆಯಲ್ಲಿ ತಾಲ್ಲೂಕು ಪ್ರೌಢಶಾಲಾ ಹಿಂದಿ ಭಾಷಾ ಬೋಧಕರ ಸಂಘದಿಂದ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ನಿವೃತ್ತ ಉಪನ್ಯಾಸಕ ರಂಗನಾಥ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. |
ಹೋಬಳಿಯ ಬೋರನಕಣಿವೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ತಾಲ್ಲೂಕು ಪ್ರೌಢಶಾಲಾ ಹಿಂದಿ ಭಾಷಾ ಬೋಧಕರ ಸಂಘದ ಆಶ್ರಯದಲ್ಲಿ ಹಿಂದಿ ದಿವಸದ ಅಂಗವಾಗಿ ಶೈಕ್ಷಣಿಕ ಸಮಾವೇಶ,ಪ್ರತಿಭಾ ಪುರಸ್ಕಾರ ಹಾಗೂ ತರಬೇತಿ ಕಾರ್ಯಗಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ರಾಷ್ಟದ ಏಕತೆಗೆ ಪೂರಕವಾಗಿ ಹಿಂದಿ ಭಾಷೆ ಬಳಕೆಯಾಗುತ್ತಿದ್ದು,ವಿದ್ಯಾರ್ಥಿಗಳು ಹಿಂದಿ ಭಾಷೆ ಮಾತನಾಡುವುದನ್ನು ಕಲಿಯಬೇಕು. ಶಿಕ್ಷಣ ಇಲಾಖೆ ಹಿಂದಿ ಶಿಕ್ಷಕರಿಗೆ ಮಲತಾಯಿ ಧೋರಣೆ ಅನುಸರಿಸುತ್ತಿದ್ದು ಈ ಬಗ್ಗೆ ಹಿಂದಿ ಶಿಕ್ಷಕರು ಒಗ್ಗಟ್ಟಾಗಿ ಬೇಡಿಕೆ ಪರಿಹರಿಸಿಕೊಳ್ಳಬೇಕಿದೆ ಎಂದರು.
ಹಿಂದಿ ಶಿಕ್ಷಕರ ತಾಲ್ಲೂಕು ಗೌರವಾಧ್ಯಕ್ಷೆ ಮಂಜಮ್ಮ ಅಧ್ಯಕ್ಷತೆವಹಿಸಿದ್ದರು, ನಿವೃತ್ತ ಉಪನ್ಯಾಸಕ ರಂಗನಾಥ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಹಿಂದಿ ಶಿಕ್ಷಕರ ತಾಲ್ಲೂಕು ಅಧ್ಯಕ್ಷ ಕುಮಾರಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪ್ರಾಂಶುಪಾಲೆ ಉಮಾದೇವಿ,ತಾ.ಪಂ.ಸದಸ್ಯೆ ಕವಿತಾಪ್ರಕಾಶ್, ಬಿ.ಆರ್.ಸಿ.ತಿಮ್ಮರಾಯಪ್ಪ., ನಿವೃತ್ತ ಶಿಕ್ಷಕ ವದ್ದಿಗಯ್ಯ. ಸುಧಾಕರ್, ದಸೂಡಿಶಾಲೆಯ ಮುಖ್ಯಶಿಕ್ಷಕ ಗಿರೀಶ್,ಜಿಲ್ಲಾ ಹಾಗೂ ತಾಲ್ಲೂಕು ಹಿಂದಿ ಶಿಕ್ಷಕರ ಸಂಘದ ಸದಸ್ಯರು ಹಾಜರಿದ್ದರು.ಶಿಕ್ಷಕ ಮೈಲಾರಪ್ಪ ಕಾರ್ಯಕ್ರಮ ನಿರೂಪಿಸಿ, ಗುರುರಾಜ್ ನಾಯ್ಡ ವಂದಿಸಿದರು
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ