ಹುಳಿಯಾರು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಿಕೊಂಡು ಬರುತ್ತಿರುವ ಮನೆಮನೆಗಳಲ್ಲಿ ಪಾಕ್ಷಿಕ ಕನ್ನಡ ಕವಿ ಕಾವ್ಯ ಗೋಷ್ಠಿ ಕಾರ್ಯಕ್ರಮ ಇಂದು (ತಾ.08) ಸೋಮವಾರ ವಸಂತನಗರ ಬಡಾವಣೆಯ ಡಿ.ಆರ್.ನರೇಂದ್ರಬಾಬು ಅವರ ಆನಂದ ಸಿಂಧು ನಿವಾಸದಲ್ಲಿ ನಡೆಯಲಿದೆ.
ಹುಳಿಯಾರು ಕೆಂಕೆರೆ ಪ್ರೌಢಶಾಲೆಯ ಕನ್ನಡ ಶಿಕ್ಷಕಿ ಸಿ.ಟಿ.ವಿಜಯಲಕ್ಷ್ಮಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಲಿದ್ದು,ಶಿಕ್ಷಕ ಯಲ್ಲಪ್ಪ ಸರ್ವಜ್ಞನ ವಚನಗಳ ಬಗ್ಗೆ ಉಪನ್ಯಾಸ ನೀಡಲಿದ್ದಾರೆ. ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಕಸಾಪದ ತ.ಶಿ.ಬಸವಮೂರ್ತಿಯವರು ತಿಳಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ