ಗ್ರಾಮೀಣ ಪ್ರದೇಶವಾದ ಲಕ್ಕೇನಹಳ್ಳಿಗೆ ಡಾಂಬಾರು ರಸ್ತೆ ವ್ಯವಸ್ಥೆ ಕಲ್ಪಿಸುವುದಾಗಿ ಶಾಸಕ ಸಿ.ಬಿ.ಸುರೇಶ್ ಬಾಬು ಭರವಸೆ ನೀಡಿದ್ದಾರೆ.
ಹುಳಿಯಾರು ಹೋಬಳಿ ಲಕ್ಕೇನಹಳ್ಳಿಯಲ್ಲಿ ನಡೆದ ಸಮಾರಂಭದಲ್ಲಿ ಶಾಸಕ ಸುರೇಶ್ ಬಾಬು ಮಾತನಾಡಿದರು |
ಲಕ್ಕೇನಹಳ್ಳಿಯಲ್ಲಿನ ನಡೆದ ಎನ್.ಎಸ್.ಎಸ್.ಶಿಬಿರದಲ್ಲಿ ಭಾಗವಹಿಸಿದ್ದ ಅವರು ಮಾತನಾಡಿ, ಈ ಗ್ರಾಮವು ಹೆದ್ದಾರಿಯಿಂದ ಎರಡು ಕಿ.ಮೀ ಅಂತರವಿದ್ದು ಗ್ರಾಮಕ್ಕೆ ಡಾಂಬಾರು ರಸ್ತೆ ಕಲ್ಪಿಸುವುದರ ಮೂಲಕ ಈ ಭಾಗದ ಹತ್ತಾರು ಹಳ್ಳಿಗಳ ಸುಗಮಸಂಚಾರಕ್ಕೆ ಅನುವುಮಾಡಿಕೊಟ್ಟಂತಾಗುತ್ತದೆ ಎಂದರು. ಶೀಘ್ರವೇ ಈ ಬಗ್ಗೆ ಕಾರ್ಯಪ್ರವೃತ್ತರಾಗುವುದಾಗಿ ತಿಳಿಸಿದರು. ಜಿ.ಪಂ.ಸದಸ್ಯರಾದ ಮಂಜುಳಾ,ನಿಂಗಮ್ಮ,ತಾ.ಪಂ.ಸದಸ್ಯರಾದ ಕವಿತಾ,ಫಾತೀಮಾಭಿ ಇನ್ನಿತರರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ