ಹುಳಿಯಾರು ಪಟ್ಟಣದ ರೋಟರಿ ಕ್ಲಬ್ ವತಿಯಿಂದ ಪುಟ್ಟಮಕ್ಕಳಿಗಾಗಿ ಅಯೋಜಿಸಿದ್ದ ಕೃಷ್ಣ ವೇಷಭೂಷಣ ಪ್ರದರ್ಶನವನ್ನು ಭಾನುವಾರ ನಡೆಸಲಾಯಿತು. ಕೃಷ್ಣನ ವೇಷ ತೊಟ್ಟು ಬಂದಿದ್ದ ಪ್ರತ್ರಿಯೊಂದು ಮಗುವಿಗೆ ನೆನಪಿನಕಾಣಿಕೆ ನೀಡಿ ಪ್ರೋತ್ಸಾಹಿಸಲಾಯಿತು.
ಹುಳಿಯಾರು ರೋಟರಿ ಸಂಸ್ಥೆಯವರು ಆಯೋಜಿಸಿದ್ದ ಕೃಷ್ಣವೇಷ ಪ್ರದರ್ಶನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಕ್ಕಳಿಗೆ ನೆನಪಿನಕಾಣಿಕೆ ನೀಡಲಾಯಿತು. |
ರೋಟರಿ ಜೆಂಕ್ಷನ್ ಘಟಕದ ಅಧ್ಯಕ್ಷ ವಿಜಯ್ ಸಾರಫ್ ಮಾತನಾಡಿ, ಪುಟ್ಟಮಕ್ಕಳು ಕೃಷ್ಣನ ವೇಷಗಳನ್ನು ತೊಟ್ಟಿರುವುದು ನೋಡುವುದಕ್ಕೆ ಆನಂದದಾಯಕವಾಗಿದ್ದು , ಚಿಕ್ಕಂದಿನಲ್ಲಿ ಕೃಷ್ಣ ಆಡಿದ ಆಟಗಳನ್ನು ನೆನಪಿಸಿಕೊಳ್ಳುವಂತೆ ಮಾಡಿತು. ರೋಟರಿ ಜೆಂಕ್ಷನ್ ಘಟಕದ ಕಾರ್ಯದರ್ಶಿ ನವಾಲ್ ಸಾರಫ್ , ಗೌರವಾಧ್ಯಕ್ಷ ಬಿ.ಕೆ.ಕೃಷ್ಣಮೂರ್ತಿ, ರೋಟರಿ ಮೆಂಬರ್ ಶಿಪ್ ನ ನಿರ್ದೇಶಕ ಫ್ರಾಂಕ್, ಹುಳಿಯಾರು ರೋಟರಿ ಸಂಸ್ಥೆಯ ಅಧ್ಯಕ್ಷ ಈ.ರವೀಶ್, ನಿರ್ದೇಶಕರಾದ ಗಂಗಾಧರರಾವ್, ಮೆಡಿಕಲ್ ಚನ್ನಬಸವಯ್ಯ, ಚಿ.ನಾ.ಹಳ್ಳಿ ರೋಟರಿಯ ಅಶ್ವತ್ಥನಾರಾಯಣ,ದಾನಪ್ಪ,ವೈದ್ಯ ಸದಾಶಿವು ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ